STORYMIRROR

Geethasaraswathi K

Children Stories Classics Inspirational

4  

Geethasaraswathi K

Children Stories Classics Inspirational

ಗೆಳೆಯ

ಗೆಳೆಯ

1 min
310

ಮಾತಿಗೆ, ನಗುವಿಗೆ 

ಜೊತೆಯಾಗುವವನು

ಕಷ್ಟವಿರಲಿ ಸುಖವೆ ಬರಲಿ

ಜೊತೆಗೆ ಬರುವವನು

ನನ್ನ ಗೆಳೆಯ॥

ಸವಾಲುಗಳಿಗೆ ಉತ್ತರವ

ನೀಡುವವನು

ದಣಿವಿಗೆ ತಂಗಾಳಿಯಾಗಿ

ಹಿತ ನೀಡುವವನು

ನನ್ನ ಗೆಳೆಯ॥

ಕಾರ್ಯಗಳಿಗೆ ಕೈಜೋಡಿಸಿ

ಸಫಲತೆಗೆ ದಾರಿತೋರುವನು

ನೋವಿಗೆ ಸಾಂತ್ವನ ನೀಡುತ

ಬೆಂಬಲವಾಗಿರುವವನು 

ನನ್ನ ಗೆಳೆಯ॥

ತಂದೆತಾಯಿಯ ಬಳಿಕ

ಮನದಿಂಗಿತಕೆ ಸ್ಪಂದಿಸಿ

ಬದುಕಿನೇಳಿಗೆಗೆ ಸಹಕರಿಸಿ

ಸಂತಸವ ತುಂಬಿದವನು 

ನನ್ನ ಗೆಳೆಯ ॥

ರಾಮನಿಗೆ ಸುಗ್ರೀವ ಸಖ್ಯವಿದ್ದಂತೆ 

ಕೃಷ್ಣನಿಗೆ ಗೆಳೆಯ ಸುದಾಮನಿದ್ದಂತೆ

ನಿನ್ನ ಸಖ್ಯವನೆ ನಾನು

ಅನುದಿನವು ಬೇಡುವೆನು

ನನ್ನ ಗೆಳೆಯ॥



Rate this content
Log in