STORYMIRROR

manjula g s

Abstract Inspirational Others

4  

manjula g s

Abstract Inspirational Others

ಬೆಳಕಿನ ಬಂಧನ

ಬೆಳಕಿನ ಬಂಧನ

1 min
266

ಹೇ ಪ್ರಭು....

ಹೊಳೆವಂತೆ ಮಾಡಿ ನನ್ನ 

ಬಂಧನದೊಳು ಸಿಲುಕಿಸಿಟ್ಟೆ! 

ಮೂಢತನದಿ ನಾನಿಲ್ಲಿನ

ಸುರುಳಿಯಲಿಯೇ ಇದ್ದುಬಿಟ್ಟೆ! 


ಭೋಗ ಭಾಗ್ಯಗಳನ್ನ 

ಆಸೆಯ ಸಂಬಂಧಕ್ಕೆ ಕೊಟ್ಟೆ! 

ಜಂಜಾಟದ ಜೋಡಣೆಗೆ 

ತುಣುಕು ನಾನಾಗುತಲಿ ಕೆಟ್ಟೆ!


ಒಳಗೆ ಮಿನುಗುವ ನನ್ನ 

ಅಹಂಕಾರವ ಹಿಡಿದು ಸುಟ್ಟೆ! 

ಆಕರ್ಷಣೆಯಲ್ಲಿ ಹೊರಗಿನ 

ಸೆಳೆತಕೆ ಹಾರಿ ಬಂದವು ಚಿಟ್ಟೆ! 


ತೃಣಮಾತ್ರ ಬದುಕು ಸಾಕಿನ್ನ 

ಬೆಳಕ ಲೋಕಕ್ಕೆ ಮುಡಿಪಾಗಿಟ್ಟೆ! 

ಇಹಲೋಕದ ಎಲ್ಲ ಗಮನ 

ಸೂರ್ಯ ಚಂದ್ರರಿಗೂ ಕಾಪಿಟ್ಟೆ! 


Rate this content
Log in

Similar kannada poem from Abstract