ಬದುಕೆಂಬ ಮೆರವಣಿಗೆ
ಬದುಕೆಂಬ ಮೆರವಣಿಗೆ
ಸುಖದ ನಶೆಯಲ್ಲೂ ಹೊರಡುತ್ತದೆ ಮೆರವಣಿಗೆ...
ಶೋಕದ ಮಬ್ಬಲ್ಲೂ ಶುರುವಾಗುತ್ತದೆ ಮೆರವಣಿಗೆ..!
ಮೆರವಣಿಗೆಗೆ ಹೊರಡಲು ಒಂದೆರಡು ಕಾರಣಗಳಿಲ್ಲ,
ಎಲ್ಲಕ್ಕೂ, ಎಲ್ಲದಕ್ಕೂ ಸಾಗುತ್ತಲೇ ಇರುತ್ತದೆ ಮೆರವಣಿಗೆ ಎಂಬ ಪ್ರಯಾಣ..?!
ಬದುಕೇ ಒಂದು ಸುಂದರ ಮೆರವಣಿಗೆ
ಆದಿಯಿಂದ ಅಂತ್ಯದವರೆಗೆ ನಿಲ್ಲುತ್ತಾ, ತೆವಳುತ್ತಾ, ಏಳುತ್ತಾ, ಬೀಳುತ್ತಾ ಸಾಗುತಿದೆ..!
ನಮ್ಮ ಬದುಕಿನ ಮೆರವಣಿಗೆಗೆ
ರೂವಾರಿಗಳು ನಾವುಗಳೇ...!
ಕೆಲವನ್ನು ಮರೆಯುತ್ತಾ, ಮರೆತಂತೆ ನಟಿಸುತ್ತಾ ಕಾಣಬೇಕು ಒಳ್ಳೆಯ ಬೆಳವಣಿಗೆ..!!
ನೋವು- ನಲಿವು ಪ್ರತಿಯೊಬ್ಬರಿಗೂ
ಇರುತ್ತದೆ ಅರೆ ಘಳಿಗೆ..!
ಅದ ತಿಳಿದು, ಕೊಂಡೊಯ್ಯಬೇಕು
ಬದುಕನ್ನ ಒಳ್ಳೆಯ ಕಡೆಗೆ..!!
