Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Ramamurthy Somanahalli

Children

2  

Ramamurthy Somanahalli

Children

ಬಾರೋ ಬಾರೋ ಚಂದಿರ

ಬಾರೋ ಬಾರೋ ಚಂದಿರ

1 min
133


ಬಾರೋ ಬಾರೋ ಚಂದಿರ ನೀನು

ಆಡುತ ಹಾಡುತ ಕುಣಿಯುವ ನಾವು

ಓಡುವೆ ಏತಕೆ ಚಂದಿರ ನೀನು

ಮೋಡದ ಮರೆಯಲಿ ಕುಳಿತಿಹೆ ಏನು

 ||ಬಾರೋ...||


ಕತ್ತಲು ಕವಿಯಲು ಬರುವನು ಗುಮ್ಮ

ಒಬ್ಬನೆ ಏತಕೆ ಕುಳಿತಿಹೆ ಮಾಮ

ಅಪ್ಪನು ತಂದಿಹ ಕುದುರೆಯನೇರುವ

ಅಮ್ಮನು ನೀಡುವ ಕೈ ತುತ್ತನು ಮೆಲ್ಲುವ || ಬಾರೋ ಬಾರೋ ||


ಅಜ್ಜ ಅಜ್ಜಿ ಇರುವರು ಇಲ್ಲಿ

ಒಬ್ಬನೆ ಕುಳಿತಿಹೆ ಏತಕೆ ಅಲ್ಲಿ

ಅಜ್ಜಿ ಮಾಡಿದ ಕೀರನು ಹೀರುವ

ಅಜ್ಜ ಹೇಳುವ ಕಥೆಯನು ಕೇಳುವ

|| ಬಾರೋ ಬಾರೋ...||


ತಿನ್ನುವ ನಾವು ಚಕ್ಕುಲಿ ಉಂಡೆ

ಏರುತ ಆಡುವ ಜಾರೋ ಬಂಡೆ

ನಲಿಯುತ ಕಲಿವ ಕನ್ನಡ ಪಾಠ

ಅಮ್ಮನು ಹೇಳುವ ನೀತಿಯ ಪಾಠ ||ಬಾರೋ ಬಾರೋ||


Rate this content
Log in

Similar kannada poem from Children