ಹಬ್ಬ ಬಂದಿದೆ
ಹಬ್ಬ ಬಂದಿದೆ
1 min
248
*ನಾಗರ ಪಂಚಮಿ ನಲಿವನು ತುಂಬಲಿ*
ಅರಶಿಣ ಕಡುಬು ಮಾಡಿ ಎಲ್ಲರೂ ತಿನ್ನಲಿ
ಎಲ್ಲರಲ್ಲೂ ಸಂತೋಷ ಮೂಡಲಿ
ದುಃಖ ದುಮ್ಮಾನವು ದೂರವಾಗಲಿ
ನಾಗರ ದೇವರಿಗೆ ಪೂಜೆ ಮಾಡೋಣ
ನಾಗರ ದೇವರ ಇತಿಹಾಸ ತಿಳಿಯೋಣ
ಭಕ್ತಿಯಿಂದ ಪ್ರಾರ್ಥನೆ ಮಾಡೋಣ
ಹಾಲು ಹಣ್ಣು ಇಟ್ಟು ಬರೋಣ
ಸದಾ ಮನದಲ್ಲೇ ನೆಲೆಸಿರುವ ದೇವರೇ
ಮುಕ್ತಿಯನ್ನು ಕೊಡು ಎಂದೂ ಬೇಡುವೆ
ಯಾರು ಇಲ್ಲ ಎಂದೂ ನಾನು ನುಡಿಯುವೆ
ನೀವೇ ಗತಿ ಎಂದೂ ತಿಳಿಸುವೆ
