STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

2  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

ಬಾಳು ತಿಳಿ

ಬಾಳು ತಿಳಿ

1 min
97


ಶ್ರೀಮಂತರ ರೇಷ್ಮೆ ವಸ್ತ್ರವ ಬಂಗಾರ

ವೇಷಭೂಷಣ ಸಿರಿತನದಿ ಸಿಂಗಾರ

ಉಪ್ಪರಿಗೆಯ ಸಂಪತ್ತಿನ ಅರಸುರವರು

ಇವರೆಲ್ಲರೂ ಲಕ್ಷ್ಮಿಪತಿ ಪುತ್ರರಿವರು

ಮಧ್ಯಮದ ವರ್ಗದ ಬಾಳು ಆಡಂಬರ

ತೋರಿಕೆ ನಿರ್ವಹಣೆ ಸಂಕಟ ಸುಂದರ

ಮೂರುಆರರ ನಡುವೆ ಬಾಳ ಹಂದಿರ

ಕನಸುನನಸಿನ ಹೋರಾಟ ಮಂದಿರ

ಕವಡೆ ಕಾಸಿನ ಪರದಾಟ ಬಡವನ

ಒಪ್ಪತ್ತಿನ ಗಂಜಿಗೆ ಹರಸಾಹಸ ಅವನ

ಹರಕು ಮುರುಕು ಗುಡಿಸಲು ಭಂದನ

ಕೇಳುವರಿಲ್ಲ ಗೋಳಿನ ಕಥೆಯನ

ಮನುಜ ಇರುವ ಬಾಳು ಒಪ್ಪಿ ನಡೆ

ಶೋಕಿಯ ಜೀವನ ತ್ಯಜಿಸುತ ಇರೆ

ಕೈ ಕೆಸರಾದರೆ ಬಾಯಿ ಮೊಸರು ತಿಳೆ

ಜನರು ಮೆಚ್ಚುವ ಹಾಗೇ ಮರುಳೆ


Rate this content
Log in

Similar kannada poem from Inspirational