STORYMIRROR

Kavya Poojary

Inspirational

2  

Kavya Poojary

Inspirational

ಅವಕಾಶ

ಅವಕಾಶ

1 min
134

ಹೊಸ ವರ್ಷದ ಹೊಸ್ತಿಲಲಿ 

ಅವಕಾಶವೊಂದು ಕವಿಮನಸುಗಳ

ಕೈಬೀಸಿ ಕರೆಯಿತು......

ಭಾವನೆಗಳ ಬೆಳ್ಮುಗಿಲಲಿ

ತಾರೆಗಳು ನಾವೆಲ್ಲ

ಹೊಸಸಂಜೆಯ ಪ್ರೀತಿಯ ಕೂಗಿಗೆ

ಹೊಳೆದು ಸಂಭ್ರಮಿಸಿತು ಮನವೆಲ್ಲಾ.....

ಅಲೆಯೊಂದು ಬಂಡೆಯ ಚಂದದಿ ತಬ್ಬಿದಂತೆ

ಅವಕಾಶವೊಂದು ತಾ ಜಿನುಗಿ ಬಂದು ಸೇರಿತು

ಅದೃಷ್ಟದಂತೆ.......


ಭಾವನೆಗಳ ಚಂದದಿ 

ಪದಗಳಲಿ ವಿವರಿಸಿ

ಸಾಗರದಾಳದ ಮುತ್ತನು 

ಸರದಿ ಸಾಲಲಿ ಜೋಡಿಸಿಟ್ಟಂತೆ

ಕವಿಮನಸುಗಳ ಕಾವ್ಯದ  ಅಂದ 

ಹೀಗೆ ಪದಗಳ ಹಾರವ ನೇಯುತ

ಸಾಗಿದರೆ ಬದುಕದು ಎಂದೆಂದೂ ಚೆಂದ......!!!!


   


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational