STORYMIRROR

AMMU RATHAN SHETY

Abstract Classics Inspirational

4  

AMMU RATHAN SHETY

Abstract Classics Inspirational

ಅಂತರಂಗ

ಅಂತರಂಗ

1 min
397

ಅವಳೆಂದರೆ ಬೇಸರವಿತ್ತವನಿಗೆ

ಹೆತ್ತು ಹೊತ್ತವಳೇ ಬೇಡವಾದಳೇ ಮಗನಿಗೆ

ಚುಚ್ಚು ಮಾತುಗಳ ಕೇಳಿ ಉಮ್ಮಳಿಸಿ ಬರುತ್ತಿದ್ದ

ದುಃಖದಕ್ಕೂ ತಡೆಗೋಡೆಯ ಕಟ್ಟಿದಳು


ಯಾರದೋ ಷಡ್ಯಂತ್ರಗಳಿಗೆ ಕಿವಿಗೊಟ್ಟು 

ಅವನರಿಯದೇ ಹೋದನೆ ಅಂತರಂಗದೊಳಗೆ.

ತನ್ನ ಜೋಪಾನ ಮಾಡಿದ ಕೈಗಳಿಗೆ

ತಪ್ಪಿತಸ್ಥೆಯ ಪಟ್ಟ ಕಟ್ಟಿದನೇತಕೆ


ವಿದ್ಯೆಯ ಜೊತೆಗೆ ಅಹಂಕಾರ ಬೇಕೇನು

ಜ್ಞಾನದೀವಿಗೆ ‌ಹಚ್ತಲು ಅವಳು ಪಟ್ಟ ಪಾಡೇನು

ಅವನಂತರಂಗ ಮರೆತೋಯ್ತೆ ತನ್ನನ್ನು

ಕಂಡನಿ ಸುರಿಸಿದರೂ ಬಾಗಿಲಾಚೆ ನಿಂತು ಹೆತ್ತವಳು


Rate this content
Log in

Similar kannada poem from Abstract