ಅಂಬರ
ಅಂಬರ
ನೀಲಾ ಅಂಬರದಲ್ಲಿ ಹಾರುತ್ತಿತ್ತು ಹಾಯಾಗಿ ಬಾನಕ್ಕಿ
ನೋಡುವ ಕಣ್ಣುಗಳಿಗೆ ಸಂತಸವ ಒಳಪಡಿಸಿತು ಹಕ್ಕಿ
ಹಾರಿತು ಹಾರಿತು ಬಾನೆತ್ತರದಲ್ಲಿ ಹಾರಿತು
ಬೀರಿತು ಬೀರಿತು ನಗುವ ಆಗಸದಲ್ಲಿ ಚೆಲ್ಲಿತು
ಭುಮಿಯ ಚಪ್ಪರದಲ್ಲಿ ದಿನವೂ ಸಂಚಾರ
ರೆಕ್ಕೆಪುಕ್ಕಗಳು ಅದಕ್ಕೆ ಆಧಾರ
ಗಗನವೇ ಕೈಬೀಸಿ ಕರೆಯಲು ಪಕ್ಷಿಯ
ಅದರ ಅಂದವ ನೋಡಿ ಮರೆತೆ ನಾ ಆ ಸಮಯ
ಹಾರುವಾಗ ಲಯ ತಪ್ಪದು
ಒಂದನ್ನೊಂದು ಸ್ಪರ್ಶಿಸದು ಮುಟ್ಟದು
ಲೋಕದ ಸೃಷ್ಟಿಯೇ ಮಾಯೆ ಮಾಯೆಯ ನಾನೆಂದು ಅರೆಯೇ....
