ಅಗೋಚರ
ಅಗೋಚರ
ದೃಷ್ಟಿಗೆ ಗೋಚರಿಸದ
ಅನುಭವಕ್ಕೆ ಸಿಗದ
ಅಗೋಚರ ಕ್ರಿಮಿಗಳು
ಧರೆಗೆ ದಾಂಗುಡಿಸಿದವು
ಘಟಾನುಘಟಿಗಳ
ಹೃದಯಬಡಿತ ಗಳ
ಥಟ್ಟನೆ ನಿಲ್ಲಿಸಿಬಿಟ್ಟವು
ಮಾನವ ಬುದ್ಧಿಗೆ
ಸವಾಲು ಎಸೆಯುತ
ಎಲ್ಲರ ನಿದ್ದೆಗೆಡಿಸುತ
ಭಯಭೀತಿ ಹುಟ್ಟಿಸುತ
ಇಳಿಯಲಿ ಕುಣಿದಾಡಿದವು
ಬದುಕ ನರಕವಾಗಿಸುತ
ಕೇಕೆ ಹಾಕಿ ಕುಣಿದಾಡಿದವು
ರಕ್ಕಸ ಜೀವಿಗಳು
ಕರೋನಾ ನಾಮದಲಿ
ವಿಜಯಭಾರತೀ.ಎ.ಎಸ್.
