Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Ramamurthy Somanahalli

Inspirational Others

4  

Ramamurthy Somanahalli

Inspirational Others

ಅಗ್ನಿಗಿಲ್ಲದ ಬೇಧ

ಅಗ್ನಿಗಿಲ್ಲದ ಬೇಧ

1 min
375ಕ್ಷೀಣ ದನಿಯಲ್ಲಿ ನರಳುತ್ತಾ

ಕಣ್ಣಾಲಿಗಳಲಿ ಅರಸುತ್ತಾ

ದೀನ ಭಾವಧಿ ನನ್ನತ್ತ ನೋಡಿ

ನಿಟ್ಟುಸಿರಿಟ್ಟು ಆಗಸ ನೋಡಿ 

ಹಂಬಲಿಸಿದ್ದಳು ಪರಿಪರಿಯಾಗಿ 

ಮಗನ ನಿರೀಕ್ಷೆಯಲಿ...

 ಮಗನೆಂಬ ಮೋಹವೇಕೆ ತಾಯಿ?

ನಾನಿರುವೆ ನಿನ್ನ ಆಸರೆಯಾಗಿ

ಮಗನಾದರೇನು, ಮಗಳಾದರೇನು?

ಗುಟುಕು ತುಳಸಿ ನೀರಿಗೆ ?

ನೀನಿತ್ತ ದೇಹವಿದು, 

ನಿನ್ನ ಮಮತೆಯ ಕೂಸು

ನಾಕನರಕದ ಮೋಹದಿ

ಜಲ ಗಾಳಿಗೆ ಬೇಧವೆಣಿಸದ ನೀನು

ಕರುಳ ಕುಡಿಯಲ್ಲಿ ಏಕೀ ಭಾವ ?

ಜಗದಿ, ದೇವನ ಸೃಷ್ಟಿಯಲಿ 

ಶ್ರೇಷ್ಠ ಕನಿಷ್ಠವೆಂಬುದಿಲ್ಲ,

ನದ-ನದಿಗಿಲ್ಲ, 

ಸುಡುವ ಅಗ್ನಿಗಿಲ್ಲ ಬೇಧಬಾವ...

ಕೊರಗದಿರು ಚಿಂತಿಸಿ

ಸ್ವರ್ಗದ ದಾರಿ,

ನೆನೆ ಮನದಲ್ಲಿ ಮುರಾರಿ

ನಾನಿಡುವ ಅಗ್ನಿ ತೋರುವುದು ನಿನಗೆ

ಮೋಕ್ಷದ ದಾರಿ ....Rate this content
Log in

Similar kannada poem from Inspirational