ಬಟ್ಟೆ...!?
ಬಟ್ಟೆ...!?
![](https://cdn.storymirror.com/static/1pximage.jpeg)
![](https://cdn.storymirror.com/static/1pximage.jpeg)
ಅಂಕುಡೊಂಕುಗಳ ಬಟ್ಟೆ ತೋರಿ ದೇವ ನೀ ಅಟ್ಟಿಬಿಟ್ಟೆ
ಎಚ್ಚರಿಸಲು ಕಲ್ಲುಮುಳ್ಳುಗಳ ಬಟ್ಟೆಯಲಿಟ್ಟೆ
ಹೊರೆಯಲು ಹೊಟ್ಟೆ ಜಗಕೆ ತೋರಿದೆ ಸರಿ ಬಟ್ಟೆ
ಮನುಜಗೆ ಅರುಹಿದೆ ತಪ್ಪಿದರೆ ಬಟ್ಟೆ ನೀ ಕೆಟ್ಟೆ
ಕಾಮ ಕ್ರೋಧ ಅರಿಷಡ್ವರ್ಗಗಳ ಕೊಟ್ಟೆ
ನಿಗ್ರಹಿಸಿ ತನುಮನವ ನಡೆಯೆಂದು ಬಿಟ್ಟೆ
ಮುಚ್ಚಿದೆ ದೇಹವ ನೀಡಿ ರಂಗು ರಂಗಿನಾ ಬಟ್ಟೆ
ಕಾವ ದೇವನ ಮರೆತು ನಾ ಮದವೇರಿ ತೇಲಿಬಿಟ್ಟೆ
ಅಂಧನಾಗಿಹೆ ನಾ ಧರಿಸುತ ಮೋಹದಾ ಬಟ್ಟೆ
ಪಾಪದಾ ಕೂಪದಲಿ ನಾ ಮಿಂದುಬಿಟ್ಟೆ
ಕವಿದು ಕತ್ತಲು ಕಾಣದಾಯಿತು ಸತ್ಯದಾ ಬಟ್ಟೆ
ಕಾಲನಾ ಕರೆಗೆ ಓಗೊಟ್ಟೆ ಕಳಚಿ ಮಿಥ್ಯದಾ ಬಟ್ಟೆ!!