ಅಡಿಕೆ ಮರ...
ಅಡಿಕೆ ಮರ...
ಒಂಟಿ ಅಡಿಕೆ ಮರದಂತೆ ಆಗಿದೆ ನನ್ನೀ ಬದುಕು ಒಂದು ಕಾಲದಲ್ಲಿ ಹೆಂಡತಿಯೊಂದಿಗೆ ಜಂಟಿಯಾಗಿದ್ದೆ..!!
ಆದರೆ ಎಂದೂ ಅವಳ ಅಸ್ತಿತ್ವದ ಬೆಲೆ
ತಿಳಿಯದೇ ಹೋದೆ...
ಬಳ್ಳಿಯಂತೆ ನನ್ನನ್ನು ಅವಲಂಬಿಸದೇ
ಸ್ವತಂತ್ರವಾಗಿ ಇರು ಎನ್ನುತ್ತಲೇ
ನಾನೇ ಅವಳ ಮೇಲೆ
ಅವಲಂಬಿತನಾಗುತ್ತಾ ಹೋದೆ..!!
ತಿಳಿದೋ ತಿಳಿಯದೆಯೋ ಅವಳನ್ನು ಪ್ರೀತಿಸುತ್ತಾ, ಮನದಲ್ಲೇ ಆರಾಧಿಸುತ್ತಿದ್ದೆ...
ಆದರೆ ಇಂದು ಅವಳು ಶಾಶ್ವತವಾಗಿ ಅಗಲಿ, ನನ್ನನ್ನು ಬಡಪಾಯಿ ಮಾಡಿಬಿಟ್ಟಳು.
ಇಡೀ ದಿನ ಆಗಸವನ್ನು ನೋಡುತ್ತಾ ಕೂರುವ ಅಡಿಕೆ ಮರದಂತೆ ಆಗಿದೆ ನನ್ನೀ ಬದುಕು...!!
