ಆಸೆ-ನಿರಾಸೆ
ಆಸೆ-ನಿರಾಸೆ
ಒಂದಿರುಳು ಕಾಡಿತ್ತು
ನೀನಿಲ್ಲದ ಹೊತ್ತು
ಉಸಿರ ತಬ್ಬಿ ಆಸೆಗಳು
ಹಾಸಿಗೆಯಲಿ ಹೊರಳಾಡಿ..
ನರಳಿತ್ತು...
ನೀ ಬರದ ಹೊತ್ತು..
ನೀರವತೆ ಮೌನವಾಗಿ ರೋಧಿಸಿತ್ತು
ಕಣ್ಣೊಳಗಿನ ಪಸೆ ಆವಿಯಾಗಿ
ಮೋಡ ಕವಿದಿತ್ತು
ನೀ ಬರುವೆಯೆಂದು
ಮಳೆಯು ಹನಿದಿತ್ತು ಇಬ್ಬನಿಯಾಗಿ
ಚಿಗುರೊಡೆದ ಎಲೆ ಮೇಲೆ
ಒಲವಕಮಲ ದಳದಳಿಸಿದಂತಿತ್ತು...

