STORYMIRROR

Vijaya Bharathi

Abstract Classics

2  

Vijaya Bharathi

Abstract Classics

ಮುಂಗಾರು ಮಳೆ

ಮುಂಗಾರು ಮಳೆ

1 min
148

ಒಮ್ಮೆ ಮೋಡ ಒಮ್ಮೆ ಬಿಸಿಲು

ನಡುವೆ ಮಿಂಚು ಗುಡುಗು ಸಿಡಿಲು

ನೆಳಲು ಬಿಸಿಲುಗಳ ಜೂಟಾಟ

ನಭದಿ ಕಾರ್ಮೋಡಗಳ ಚೆಲ್ಲಾಟ


ನಡುವೆ ತುಂತುರು ಹನಿಗಳು

ಮುಂಗಾರು ಮಳೆ ಹನಿಗಳು

ಮುಂಗಾರು ವರ್ಷದ ಹರ್ಷ

ಭುವಿಗಾಯಿತು ಭಾವೋತ್ಕರ್ಷ


ತುಂತುರು ಹನಿಗಳ ಸಿಂಚನ

ಇಳೆಗಾಯಿತು ರೋಮಾಂಚನ

ರಂಗೇರಿತು ರೈತಮಕ್ಕಳ ಅಂಗಳ

ಭುವಿಗಾಯಿತು ಗರ್ಭಾಂಕುರ


ಇಳೆಯ ತೋಯಿಸಿತು ಮಳೆ

ಮುನ್ನಿನ ಮುಂಗಾರು ಮಳೆ

ಮುಂಗಾರು ಮಳೆಯಾಟ

ನಗರವಾಸಿ ಗಳ ಪರದಾಟ


ಬಿರುಗಾಳಿ ಯೊಡನೆ ಮಳೆ

ಧರೆಗುರುಳುವ ಮರಗಳು

ಹಾರಾಡುವ ಬಡವರ ಸೂರುಗಳು

ಕೇಳುವವರಾರು ಅವರ ಗೋಳು?


ಸಂಜೆ ಮಳೆಯ ಭೋರ್ಗರೆತ

ತಂದಿತು ಸಂಚಾರಕೆ ಸ್ಥಗಿತ

ನೀರು ತುಂಬಿದ ರಸ್ತೆಗಳು

ಕಿಕ್ಕಿರಿದು ನಿಂತಿಹ ವಾಹನಗಳು

ವಾಹನ ಸವಾರರ ಆತಂಕ ಇಂತು

ಮಳೆಯಲಿ ಮನೆ ಸೇರುವುದೆಂತೋ?


Rate this content
Log in

Similar kannada poem from Abstract