ಕುರುಡಾಯಿತೆ ನಿನ್ನ ಒಳಗಣ್ಣು
ಕುರುಡಾಯಿತೆ ನಿನ್ನ ಒಳಗಣ್ಣು
ಯಾಕೆ ದಯೆ ಎಂಬುದು ನಿನಗಿಲ್ಲ
ತುಳಿಯಲು ಅಂಜಿಸಲು ಹೇಸುವುದಿಲ್ಲ
ನಿಲ್ಲಿಸು ಒಳ್ಳೆಯವನಂತೆ ನಟಿಸುವ ನಟನೆಯ
ಕಾಲವೇ ಉತ್ತರಿಸುವುದು ಕಾಲಚಕ್ರ ಮಾಯೆಯ
ಸುಖದ ಸುಪ್ಪತ್ತಿನಲ್ಲಿ ಮೆರೆದವರು ಸೇರುವುದು ಸ್ಮಶಾನವೇ
ನಾನು ನೀನು ಕೊನೆಗೆ ಸೇರುವುದು ಸ್ಮಶಾನವೇ
ಇದ್ದಷ್ಟು ದಿನ ಕರುಣೆ ಸಹನೆಯಿಂದ ವರ್ತಿಸು
ಬೇಕಿಲ್ಲ ಬದಲಾಗಿ ನಿನ್ನಲ್ಲಿದ್ದ ಧನ ವರ್ಚಸ್ಸು
ಹಣದ ವ್ಯಾಮೋಹ ಅತಿಯಾಗಿ ಬೇಡ
ದಾನ-ಧರ್ಮ ಪ್ರೀತಿಯ ನೀಡ
ಕೊನೆಯುಸಿರಿರುವವರೆಗೂ ಜನ ಸಹಾಯ ಮಾಡು
ಬದಲಾಗಿ ಕಟ್ಟಬೇಡ ಹಣದ ಗೂಡು
ಕುರುಡಾಗದಿರು ನಿನ್ನ ಒಳಗಣ್ಣು
ತೆರೆಯಿರಿ ನಿನ್ನ ಅಂತರಾತ್ಮದ ಕಣ್ಣು
ಯಾರನ್ನು ನೋಯಿಸಬೇಡ ನೀನು
ಇನ್ನಾದರೂ ತಿಳಿ ನೀ ಇನ್ನು
