STORYMIRROR

Vijaya Bharathi

Abstract Classics Inspirational

4  

Vijaya Bharathi

Abstract Classics Inspirational

ಗಂಗಾಲಹರಿ

ಗಂಗಾಲಹರಿ

1 min
330


ಧೂರ್ಜ‌ಟಿಯ‌ ಜ‌ಟಾಜೂಟ‌ದಿಂ

ಧ‌ರೆಗಿಳಿಯುತಿಹ‌ ಜಾಹ್ನ‌ವಿ

ಗಿರಿಶಿಖ‌ರ‌ಗ‌ಳ‌ ಸು ಳಿಸುಳಿದು

ಫ‌ಳ‌ಫ‌ಳ‌ನೆ ಹೊಳೆಹೊಳೆದು

ಬೀಗುತ್ತ‌ ಬ‌ಳುಕುತ್ತ‌

ಒಮ್ಮೆ ಆಕ್ರೋಶದಿಂ

ಗ‌ರ್ವ‌ಗಂಗೆಯಾಗಿ

ಮ‌ತ್ತೊಮ್ಮೆ ಭೋರ್ಗ‌ರೆದು

ಭ‌ರ‌ಭ‌ರ‌ನೆ ಹ‌ರಿವ‌ ಭಾಗೀರ‌ಥಿ

ಮ‌ಗ‌ದೊಮ್ಮೆ ಮಂದ‌ಗ‌ಮ‌ನೆ

ಮಂದ ಮಂದಾಕಿನಿ

ನ‌ಡು ನ‌ಡುವೆ ಕ‌ಣ್ಮ‌ರೆಯಾಗಿ

ಅಡ‌ಗಿ ಕುಳಿತ ಪಾತಾಳ‌ಗಂಗೆ

ಹ‌ತ್ತುಹ‌ಲ‌ವು ಹ‌ರಿಹುಗಳಿಂ

ದೇವ‌ಗಂಗಾವ‌ತ‌ರ‌ಣ‌

ಕೊನೆಗೊಮ್ಮೆ ನೆಲೆನಿಂತ‌

ಲೋಕ‌ಪಾವ‌ನೆ ತಾಯಿ

ಭುವಿಯೊಳು ಚಿರ‌ಸ್ಥಾಯಿ  




   


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract