kaveri p u

Inspirational Others Children

4.6  

kaveri p u

Inspirational Others Children

ಸ್ವಾತಂತ್ರ್ಯ

ಸ್ವಾತಂತ್ರ್ಯ

2 mins
776



ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ಪಾವನಿಯ ಶಾಲೆಯಲ್ಲಿ ಸ್ವಾತಂತ್ರ್ಯಾ ಎಂಬ ವಿಷಯಕ್ಕೆ ಲೇಖನ ಬರಿಯಲು ಹೇಳಿದರು. ಪಾವನಿ ಬರೆದ ಒಂದೊಂದು ಅಕ್ಷರವು ಹೆಣ್ಣಿನ ವೇದನೆಯನ್ನು ತಿಳಿಸುತ್ತದೆ. ಅವಳು ಬರೆಯುವಾಗ ಅವಳ ಅಮ್ಮನ ಸಹಾಯ ಪಡೆದಳು. ಶಾಲೆಯಲ್ಲಿ ಅದನ್ನು ಪ್ರಸ್ತುತ ಪಡಿಸಿದಳು. ಅದನ್ನ ಓದಿದ ಎಲ್ಲಾ ಹಿರಿಯರು ಮೆಚ್ಚುಗೆ ಸೂಚಿಸಿ ಅಭಿನಂದಿಸಿದರು, ಮೊದಲ ಬಹುಮಾನ ಅವಳಿಗೆ ನೀಡಿದರು, ಅವಳು ಏನನ್ನು ಬರೆದಿದ್ದಳು ನೀವು ಒಮ್ಮೆ ಕಣ್ಣಾಹಾಯಿಸಿ ಬನ್ನಿ.


ಹೆಣ್ಣು ಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಬೇಡಿ.

ನಾನೊಬ್ಬ ಹೆಣ್ಣು ಮಗಳಾಗಿ ಹೆಣ್ಣಿಗೆ ಸ್ವಾತಂತ್ರ್ಯ ಸಿಕ್ಕಿದೆ ಅಂತಾ ಹೇಗೆ ಹೇಳಲಿ. ಹೆಣ್ಣು ಹುಟ್ಟಿದ ತಕ್ಷಣವೇ ಹೇಳುವ ಮಾತು ಅಯ್ಯೋ ಹೆಣ್ಣಾ....... ಮೊದಲು ಗಂಡು ಆಗಲಿ ಆಮೇಲೆ ಯಾವ ಮಗು ಆದ್ರು ನಡೆಯುತ್ತೆ ಅಂತಾ ಮಾತಾಡಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಗಂಡು ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ ಇದಕ್ಕೆಲ್ಲಾ ಕಾರಣ ಹೆಣ್ಣು ಭ್ರೂಣ ಹತ್ಯೆ. ಸರ್ಕಾರ ಹೆಣ್ಣು ಮಕ್ಕಳ ಅಭಿವೃದ್ಧಿಗೆ ವಿವಿಧ ರೀತಿಯ ಯೋಜನೆಗಳನ್ನು ನೀಡುತ್ತಿದೆ. ಆದರೂ ಕೂಡ ಹೆಣ್ಣು ಮಕ್ಕಳ ಸಂಖ್ಯೆ ಏರುತ್ತಿಲ್ಲಾ. ಗಂಡು ಮಗು ಆದ್ರೆ ಮುಂದೆ ನಮ್ಮನ್ನಾ ಸಾಕುತ್ತಾರೆ, ಹೆಣ್ಣಿನಿಂದ ಏನು ಮಾಡಲು ಸಾಧ್ಯ ಎಂಬ ಮಾತುಗಳು. ಅವಳಿಗೂ ವಿದ್ಯಾಬ್ಯಾಸ ನೀಡಿದರೆ ಅವಳು ಇವರನ್ನು ನೋಡುವುದಿಲ್ಲವೇ..... ಹೆಣ್ಣು ಮಗಳು ಋತುಮತಿ ಆದ್ರೆ ಸಾಕು ಮನೆಯಿಂದಾನೆ ಆಕೆಯ ಸ್ವಾತಂತ್ರ ಕೊಂಚಮಟ್ಟಿಗೆ ಕಡಿಮೆ ಆಗತ್ತೆ. "ಅಲ್ಲಿ ಗಂಡುಮಕ್ಕಳು ಕೇಕೆ ಹಾಕ್ತಿದಾರೆ, ನಿಂಗೇನು ಅಲ್ಲಿ ಕೆಲಸ? ನೀನು ದೊಡ್ಡವಳಾಗಿದ್ದಿಯಾ ಹೊರಗೆ ಹೋಗ್ಬಾರ್ದು ಅಂತಾ ಎಷ್ಟು ಸಲ ಹೇಳೊದು ನಿನಗೆ? ಅಂತ ಬೈಸ್ಕೊಳೊದು. ಋತುಸ್ರಾವ ಎನ್ನುವುದು ಹೆಣ್ಣಿಗೆ ಆಗುವ ಒಂದು ದೈಹಿಕ ಬದಲಾವಣೆ ಅಷ್ಟೇ. ಗಂಡಿಗೆ ಮೀಸೆ, ಗಡ್ಡ ಮೂಡುವಷ್ಟೇ ಸಹಜವಾದದ್ದು ಹೆಣ್ಣಿಗೆ ಈ ಬದಲಾವಣೆ. ಅದಕ್ಕೆ ಅವಳನ್ನ ಒಳಗೆ ಇಟ್ಟರೆ ಏನು ಲಾಭ ದೊರೆಯುತ್ತೆ. ಇವೆಲ್ಲಾ ಅವಳ ಮನಸ್ಸಿನ ಭಾವನೆಗಳನ್ನು ಕೊಂದು ಹಾಕುತ್ತದೆ. ಅವಳು ಒಳಗಡೆನೇ ಇದ್ದರೆ ಮುಂದಿನ ಕನಸು ಕಟ್ಟಿಕೊಳ್ಳಲು ಹೇಗೆ ಸಾಧ್ಯ ನೀವೇ ಹೇಳಿ.....


ವಯಸ್ಸಿಗೆ ಬರುವ ಮೊದಲೇ ಅವಳಿಗೆ ತಿಳಿಯದಂತೆ ಅವಳ ಮದುವೆ ಮಾಡಲು ಪ್ರಯತ್ನ ಮಾಡ್ತಾರೆ . ಕೆಲವೊಂದು ಹಳ್ಳಿಗಳಲ್ಲಿ 18 ವರ್ಷ ತುಂಬುವ ಮೊದಲು ಮದುವೆ ಮಾಡುತ್ತಿದ್ದಾರೆ. ಅವಳಿಗೆ ಮನಸ್ಸು ಇರತ್ತೋ, ಇಲ್ಲವೋ ಅದನ್ನು ಕೂಡಾ ಕೇಳೊಲ್ಲಾ. ಅವಳು ಸಂಸಾರ ಅನ್ನೊ ಬಂಧನದಲ್ಲಿ ಮುಳುಗುತ್ತಾಳೆ. ಮದುವೆ ಆಗಿ ಪ್ರೆಗ್ನೆಂಟ್ ಆಗುವುದು ತಡವಾದರು ಅದು ಯಾರ ಸಮಸ್ಯೆ ಅನ್ನೋದನ್ನಾ ತಿಳಿಯೋ ಪ್ರಯತ್ನ ಮಾಡುವುದು ಬಿಟ್ಟು, ಅವಳ ಕಾಲಗುಣ ಸರಿ ಇಲ್ಲಾ ಅಂತಾ ಅವಮಾನಿಸುವುದು. ಹೇಗೋ ಗರ್ಭಿಣಿಯಾಗುತ್ತಾಳೆ ದೇಹದಲ್ಲಿ ಕೆಲವೊಂದಿಷ್ಟು ಬದಲಾವಣೆಗಳು ಆಗತ್ತೆ. ಅವುಗಳ ಬಗ್ಗೆ ಹೇಳೋಕು ಹೆದರುತ್ತಾಳೆ. ಯಾಕಂದ್ರೆ ಅವಳ ಗಂಡ ಕೂಡಾ ಸ್ವಲ್ಪಾ  ಒರಟಾಗಿ ಇದ್ದರಂತೂ ಅವಳು ಏನು ಹಂಚಿಕೊಳ್ಳಲು ಭಯ ಪಡುತ್ತಾಳೆ. ಅವನ ತಪ್ಪುಗಳನ್ನು ಹೇಳಿದರೆ ಅವಳಿಗೆ ಸಿಗುವ ಸಲಹೆ "ಅವನು ಗಂಡಸು ನೀನೇ ಸಹಿಸಿಕೊಂಡು ಹೋಗಬೇಕು ಅಂತಾ" ಹೆಣ್ಣಾಗಿ ಹುಟ್ಟಿದ್ದೆ ತಪ್ಪಾಯ್ತಾ ಅಂತಾ ಅವಳಿಗೆ ಅವಳೇ ನೋವು ಅನುಭವಿಸುತ್ತಾಳೆ. ಈ ತರದ ಸಮಸ್ಯೆಗಳನ್ನು ಹೆಣ್ಣು ಎದುರಿಸುತ್ತಿದ್ದಾಳೆ. ತಾಯಿ ಆದ್ರೂ ಏನು ಮಾಡಬೇಕು ಅವ್ಳು ಕೂಡಾ ಒಬ್ಬ ಹೆಣ್ಣೇ ಅಲ್ಲವೇ....


ಇತ್ತೀಚಿಗೆ ಪುಟ್ಟ ಕಂದಮ್ಮಗಳ ಮೇಲೆ ರೇಪ್ ಆಗ್ತಿದೆ ಇದಕೆಲ್ಲಾ ಕಾರಣ ಗಂಡಿಗೆ ಕೊಟ್ಟ ಸಲಿಗೆ. ಅವನಿಗೂ ಸಹ ಹೆಣ್ಣಿಗೆ ಹೇಳಿಕೊಡುವ ನಿಯಮಗಳನ್ನೇ ಹೇಳಿ ಅವನು ಅವುಗಳನ್ನ ಪಾಲಿಸಲಿ. ಆಗ ನಾವು ಕೂಡಾ ಸ್ವತಂತ್ರವಾಗಿ ಹಾರಾಡಲು ಸಾಧ್ಯ. ಇಂತಹ ಮುಂದುವರೆದ ಯುಗದಲ್ಲೂ, ಅದೂ ಹಗಲು ಹೊತ್ತಲ್ಲೆ ಹೆಣ್ಣಿನ ಮೇಲೆ ಅತ್ಯಾಚಾರ, ಗುಂಪು ಅತ್ಯಾಚಾರ ಆಗುತ್ತಿರುವುದು ತುಂಬಾ ಖೇದಕರ ಸಂಗತಿ. ಸ್ವಂತ ತಂದೆ, ಅಣ್ಣನಿಂದಲೇ ಅತ್ಯಾಚಾರ ಆಗುತ್ತಿರುವುದು ತುಂಬಾ ಬೇಸರದ ಸಂಗತಿ. ಎಲ್ಲಿದೆ ಹಾಗಿದ್ದರೆ ಸ್ವಾತಂತ್ರ್ಯ? ಹೆಣ್ಣು ಇಂದಿಗೂ ಗಂಡಿನ ಅಡಿಯಾಳಾಗಿಯೆ ಇದ್ದಾಳೆ. ಕೇವಲ ಕೆಲವು ಮಹಿಳೆಯರು ಸಾಧಿಸಿದ ಮಾತ್ರಕ್ಕೆ ಇಡೀ ಹೆಣ್ಣು ಕುಲಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಭೃಮಿಸುವುದು ಮುರ್ಖತನವೇ ಸರಿ.  ಅವಳ ಸ್ವಾತಂತ್ರ್ಯವಿನ್ನು ಅವನ ಬಳಿಯೇ ಜಮೆ ಆಗಿದೆ. ಅದನ್ನು ಇಂದಲ್ಲ ನಾಳೆ ಅವಳು ಪಡೆದೇ ತೀರುತ್ತಾಳೆ. ಎಷ್ಟಾದರೂ ಅವಳು ನಾರಿ, ಮುನಿದರೆ ಮಾರಿ ಅಲ್ಲವೇ?.


ಪಾವನಿಯ ಬರಹ ನೋಡಿದ ಶಿಕ್ಷಕರೆಲ್ಲರೂ ಅಚ್ಚರಿ ಪಟ್ಟರು. ನೈಜ ವಿಷಯವನ್ನು ಮತ್ತೊಮ್ಮೆ ಮನಮುಟ್ಟುವಂತೆ ಹೇಳಿದ ಪಾವನಿಯ ಬರಹಕ್ಕೆ ಪ್ರಶಸ್ತಿಯೂ ಬಂದಿತು.




Rate this content
Log in

Similar kannada story from Inspirational