ಸತ್ಯದ ಹೊನಲು
ಸತ್ಯದ ಹೊನಲು


ನಾವು ಕೆಲವೊಮ್ಮೆ ಹೇಳುವ ವಿಚಾರ ಬಿಟ್ಟು ಹೇಳದೆ ಇರುವ ವಿಚಾರದತ್ತ ಹೆಚ್ಚು ಚಿಂತಿತರಾಗುತ್ತೆವೆ.ಕಾರಣ ನಮ್ಮ ಮನಸ್ಸು ಸಂಕೋಚನೆಗೊಂಡು ಅಸ್ವಸ್ಥತೆಯ ಕರಿನೆರಳು ನಮ್ಮ ಬಾಧಿಸಿ ದಾಗ ಎಚ್ಚೆತ್ತುಗೊಳ್ಳುತ್ತೇವೆ.ನಾವು ಆಲಸಿಗಳು, ಸೊಂಬೆರಿಗಳು ಅಂದರು ತಪ್ಪಿಲ್ಲ.ನಮ್ಮ ದೇಶದ ಕಣಕಣದಲ್ಲೂ ಜಾಗೃತಿಯ ಗಂಟಾನಾದ ಮೊಳಗುತ್ತಿದ್ದರು,ನಾವುಗಳು ಸಮಸ್ಯೆಗಳನ್ನು ಪರಿಹರಿಸುವ ಬದಲಾಗಿ ಇನ್ನೊಂದು ಹೊಸ ಸಮಸ್ಯೆಯನ್ನು ಹುಟ್ಟು ಹಾಕುತ್ತಿದ್ದೆವೆ.
ಹಿರಿಯರು ಹೇಳುವುದು ಯಾಕಾಗಿ? ಎಂಬ ಸತ್ಯ ಅರಿವಿನಗೊಜಿಗೆ ಹೋಗದೇ.ವಿತಂಡವಾದಕ್ಕೆ ಬೀಳುವ ಸ್ಥಿತಿ. ಒಂದು ಉದಾ.ಕೋವಿಡ್-೧೯ ಎನ್ನುವ ರೋಗದ ವಿರುದ್ದ ಕೈಗೊಳ್ಳಬೇಕಾದ ಎಲ್ಲ ಮಾರ್ಗವನ್ನು ಪ್ರತಿದಿನ ದೇವರ ಗಂಟೆ ಬಾರಿಸಲು ತಡವಾಗಬಹುದು ಆದರೆ ಮಾಧ್ಯಮಗಳು ನಮ್ಮ ತಲುಪುವಲ್ಲಿ ಮುಂದಿವೆ.ಅವೆಲ್ಲದರ ಆಶಯ ಎಲ್ಲರೂ ತಮ್ಮ ಆರೋಗ್ಯದ ಹೊಣೆ ಹೊತ್ತು,ರೋಗದ ವಿರುದ್ದ ಹೋರಾಡಲು ಸನ್ನದ್ದರಾಗಿ ಅಂತ ಸಿದಾ ಸಿದಾ ಅಂದರೆ ನೇರವಾಗಿ ಹೇಳುತ್ತಾ. ಪರೋಕ್ಷವಾಗಿ ಸದೃಡಗೊಳಿಸುವ ಕಾರ್ಯ ನಡೆಯುತ್ತಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು, ಮುಖಕ್ಕೆ ಮಾಸ್ಕ ಧರಿಸಿ,ಕೈಗಳನ್ನು ಆಗಾಗ ಸಾಬೂನು ನಿಂದ ತೊಳೆಯಿರಿ,ಪದೇ ಪದೇ ಕಣ್ಣು,ಮೂಗು,ಬಾಯಿ ಮುಟ್ಟದಿರಿ ಗಂಟಲು ಕೆರೆತ,ಉಸಿರಾಟದ ತೊಂದರೆ ,ಶೀತ,ಜ್ವರ,ನಾಲಿಗೆಗೆ ರುಚಿ ತಾಗದಿರುವುದು,ಹೀಗೆ ಸಾಮಾನ್ಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.ಬಿಸಿನೀರು, ಬಿಸಿಬಿಸಿ ಆಹಾರ ಸೇವಿಸಿ ಎಂದು ಸ್ಪಷ್ಟವಾಗಿ ಹೇಳಿರುವುದು. ಎಲ್ಲರ ಆರೋಗ್ಯದ ದೃಷ್ಟಿಯಿಂದ.
ಇದನ್ನು ಅರಿತವರೆಷ್ಟು? ರಾಜಾರೋಶವಾಗಿ ಕೊರೋನಾ ನಮಗೆ ಬರುವುದಿಲ್ಲವೆಂದು ಮೊಂಡುವಾದ ಮಾಡುತ್ತಲೇ ಕೊರೋನಾ ಹೆಚ್ಚಿಸಲು ಕಾರಣಿಕರ್ತರಾಗಿದ್ದೆವೆ.ಮಾಸ್ಕ ಹಾಕಿ ಮಾತಾಡಂದರೂ ಕುತ್ತಿಗೆಗೆ ಹಾಕಿಕೊಂಡು ಅಡ್ಡಾಡುವುದುಂಟು ಹೀಗೆ ನಮ್ಮ ಒಳ್ಳೆಯದಕ್ಕೆ ಹೇಳುವ ಮಾತುಗಳತ್ತ ಕಿವಿಗೊಡದಿ ದ್ದರೆ ಅನಾಹುತವ ಬರಮಾಡಿ ಕೊಳ್ಳುವುದು ಖಚಿತ.
ಆದಷ್ಟೂ ಸತ್ಯವನ್ನು ಒಪ್ಪಿಕೊಂಡು ನೀತಿ ಮಾರ್ಗವನ್ನು ಅನುಸರಿಸುವ ಬುದ್ದಿ ಬರಬೇಕಿದೆ.ಸತ್ತಾಗ ಹೊರಲು ನಾಲ್ಕು ಜನ ಬೇಕು ಅದಕ್ಕಾಗಿ ನಾಲ್ಕು ಜನ ಸಂಪಾದಿಸುವ ಮನುಷ್ಯನಾಗಿ ಬಾಳು ಎಂದಿದ್ದರು.ಈ ಕೊರೋನಾ ಕಾಲದಲ್ಲಿ ನಾಲ್ಕು ಹೊರಲು ಇಲ್ಲ, ನೋಡಲು ಬರುವುದು ಇಲ್ಲ.ಕೊರೋನಾ ಬಂದಿದೆ ಎಂಬ ಸುದ್ದಿ ಬಿದ್ದರೆ ಸಾಕು ಇಡೀ ಬದುಕಿಗೆ ಚಾವಿ ಹಾಕಿದಂತೆ.
ಆತ್ಮವಿಶ್ವಾಸ ಹೆಚ್ಚಿಸಿ,ಕೊರೋನಾದ ಬಗ್ಗೆ ಹರಡುತ್ತಿರುವ ತಪ್ಪು ಕಲ್ಪನೆಯ ವಿರುದ್ದ ಸಮರ ಸಾರಬೇಕು.ಮೌಲ್ಯಗಳನ್ನು ಎತ್ತಿಹಿಡಿಯಬೇಕಿದೆ.ಸುಳ್ಳು ವದಂತಿಗಳನ್ನ ನಿಲ್ಲಿಸಿ,ಸೂಕ್ತ ಚಿಕಿತ್ಸೆ ಗೆ ಗಮನ ಕೊಡಬೇಕಿದೆ.ಮನಸ್ಸು ಸಿದಿಬಾತ ಅನುಸರಿಸಬೇಕು. ಎಲ್ಲರೂ ಪೋಷಕಾಂಶಯುಕ್ತ ಆಹಾರ ಸೇವನೆಗೆ ಪ್ರಚೋಧಿಸ ಬೇಕು.ರೋಗ ನಿರೋಧಕ ಶಕ್ತಿಯನ್ನು ಹೊಂದುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ....
ದೇಶದ ಉಳಿವು ನಮ್ಮ ಮನೋಬಲವನ್ನು ಹೆಚ್ಚಿಸುವಂತಿರಲಿ ನೇರವಾದ ಮಾತು ಸತ್ಯದ ಹೊನಲಿದ್ದಂತೆ.ಹೇಳಿವುದನ್ನು ಸರಿಯಾಗಿ ಹೇಳುವುದು ಮನಸ್ಸನ್ನು ಗಟ್ಟಿಗೊಳಿಸಲು ಸಾಧ್ಯ.ಕಠೋರವಾದರು ಕೊನೆಗೆ ಒಳ್ಳೆಯದಾಗಿರುತ್ತದೆ.
...