ಸತ್ಯದ ಅರಿವು
ಸತ್ಯದ ಅರಿವು


ಒಬ್ಬ ಒಂದು ಮದುವೆಗೆ ಹೋಗಬೇಕಿತ್ತು. ಛತ್ರದ ಹತ್ತಿರ ಬಂದಾಗ ಕಾಲಲಿದ್ದ ಚಪ್ಪಲಿ ಕಿತ್ತು ಹೋಯ್ತು. ತಕ್ಷಣ ಅವನಿಗೆ ಹೊಳೆದದ್ದು ಆ ಛತ್ರದ ಪಕ್ಕದಲ್ಲೇ ಇದ್ದ ಒಬ್ಬ ಸ್ನೇಹಿತನ ಮನೆ. ಅಲ್ಲಿಗೆ ಕೈಯಲ್ಲಿ ಹಿಡಿದು ಕೊಂಡು ಹೋಗಿ ಬಾಗಿಲು ತಟ್ಟಿದ. ಸ್ನೇಹಿತನಿಗೆ ವಿಷಯ ತಿಳಿಸಿದ ತಕ್ಷಣ ಒಳಗಡೆ ಬಿಡು ಇಲ್ಲದಿದ್ದರೆ ಯಾರಾದರೂ ತೆಗೆದುಕೊಂಡುಹೋಗಿ ಬಿಡಬಹುದು. ನಾಳೆ ಪಕ್ಕದಲ್ಲೆ ಇರುವ ಅಂಗಡಿ ಮುಂದೆ ಒಬ್ಬ ಚಪ್ಪಲಿ ರಿಪೇರಿ ಮಾಡುವವ ಬರ್ತಾನೆ ನಾನೇ ಹೋಲಿಸುತ್ತೇನೆ ಅಂದ . ಮಾರನೇದಿನ ಸ್ನೇಹಿತನಿಗೆ ತೊಂದರೆ ಬೇಡವೆಂದು ತಾನೇ ಹೋಗಿ ರಿಪೇರಿ ಮಾಡಿಸಿಕೊಂಡು ಬಂದ.
ಕೆಲವೇ ದಿನಗಳ ನಂತರ ಇವನ ಒಬ್ಬ ಅಣ್ಣ ತೀರಿಕೊಂಡಾಗ ಹೆಣವನ್ನು ಇವರ ಮನೆಯ ರಸ್ತೆಯಲ್ಲಿ ತರುತ್ತಿದ್ದಾಗ ಜೋರಾಗಿ ಮಳೆ ಸುರಿಯಲಾರಂಭಿಸಿತು. ಬೇರೆ ದಾರಿ ಇಲ್ಲದೆ ಓಡಿಬಂದು ಇವರ ಮನೆ ಮುಂದೆ ಕಾರು ನಿಲ್ಲಸಲು ದೊಡ್ಡ ಜಾಗ ಇದ್ದುದರಿಂದ ಮಳೆ ನಿಲ್ಲುವವರೆಗೂ ಇಲ್ಲಿ ಹೆಣ ಇಟ್ಟುಕೊಳ್ಳುತ್ತೇವೆಂದು ಕೇಳಿಕೊಂಡ. ಅದು ಸಾಧ್ಯವೇ ಇಲ್ಲವೆಂದು ಬಿಟ್ಟ. ವಿಧಿ ಇಲ್ಲದೆ ಮಳೆಯಲ್ಲೇ ಹೆಣವನ್ನ ತೆಗೆದುಕೊಂಡು ಹೋಗಬೇಕಾಯ್ತು. ಹಳೇ ಕಿತ್ತುಹೋದ ಚಪ್ಪಲಿಯನ್ನ ಒಳಗೆ ಬಿಡು ಎಂದ ಸ್ನೇಹಿತ ನನ್ನ ಸ್ವಂತ ಅಣ್ಣನ ಹೆಣವನ್ನ ಮನೆ ಮುಂದೆ ಇಟ್ಟುಕೊಳ್ಳಲು ಆಗದೆಂದು ಹೇಳಿದ್ದು ಕೇಳಿ ಮನುಷ್ಯ ದೇಹವಾದಾಗ ಚಪ್ಪಲಿಗಿಂತ ಕೊನೆ ಆಗುತ್ತಾನಲ್ಲ ಎಂಬ ಸತ್ಯದ ಅರಿವಾಗಿ ಭಾರವಾದ ಹೃದಯದಿಂದ ಮನೆಗೆ ತೆರಳಿದ.