ಸೀತಮ್ಮ
ಸೀತಮ್ಮ


ಒಂದಾನೊಂದು ಊರಿನಲ್ಲಿ ಸೀತಮ್ಮ ಎಂಬ ಮುದುಕಿ ವಾಸವಾಗಿದ್ದಳು.ಅವಳಿಗೆ ಒಂದು ಚಿಕ್ಕ ಡಾಬಾ ಇತ್ತು ಅವಳು ದಿನಾಲು ರುಚಿರುಚಿಯ ತಿನಿಸುಗಳನ್ನು ಸಿದ್ಧಪಡಿಸುತ್ತಿದ್ದಳು ಅವಳು ಮಾಡಿದ ಇಡ್ಲಿ ಹತ್ತೂರಿಗೂ ಚಿರ ಪರಿಚಯ.
ಹೀಗೆ ದಿನಗಳು ಕಳೆದಂತೆ ಮೊಮ್ಮಗಳ ನೋಡುವ ಬಯಕೆ ಅತಿಯಾಯಿತು. ಮೊಮ್ಮಗಳ ನೋಡುವ ಸಲುವಾಗಿ ಸಿಟಿಬಸ್ ಹತ್ತಿಯೇ ಬಿಟ್ಟಳು. ಸಿಟಿ ತುಂಬಾ ಸುತ್ತಿ ಸುತ್ತಿ ಕೊನೆಗೆ ಹರಸಾಹಸಪಟ್ಟು ದೊಡ್ಡ ಮಗನ ಮನೆಗೆ ಹೋದಳು. ಅಲ್ಲಿ ತನ್ನ ಮೊಮ್ಮಗಳಾದ ಚಿಂಟು ವನ್ನು ಕಂಡು ಸಂತಸಪಟ್ಟಳು.
ಚಿಂಟು ಅಜ್ಜಿ ಎಂದರೆ ಬಲು ಇಷ್ಟ ಅದುವರೆಗೂ ಹೊರಗಿನ ತಿಂಡಿಯನ್ನೇ ತಿನ್ನುತ್ತಿದ್ದಳು ಚಿಂಟು. ಆ ಸಮಯಕ್ಕೆ ಮುದುಕಿಯು ರುಚಿರುಚಿಯಾದ ಇಡ್ಲಿಯನ್ನು ಮಾಡಿಕೊಟ್ಟಳು. ಇಡ್ಲಿಯನ್ನು ಸವಿದ ಚಿಂಟು ಅಜ್ಜಿ ನೀವು ಇನ್ನು ಮುಂದೆ ಇಲ್ಲಿಯೇ ಇದ್ದುಬಿಡಿ ಅಪ್ಪನಲ್ಲಿ ನಾನು ಹೇಳಿ ನಿಮ್ಮನ್ನು ಇಲ್ಲಿ ಇರುವಂತ ಒತ್ತಾಯಿಸುತ್ತೇನೆ ಎಂದು ಹೇಳಿದಳು. ಅಜ್ಜಿಯು ಮೊಮ್ಮಗಳ ಮಾತಿನಂತೆ ಅಲ್ಲೇ ಇದ್ದಳು.