ತಲೆಯ ಬೆಲೆ
ತಲೆಯ ಬೆಲೆ
ಒಮ್ಮೆ ಅಶೋಕ ಚಕ್ರವರ್ತಿ ಅರಮನೆಗೆ ಬಂದ ,ಒಬ್ಬ ವಿದ್ವಾಂಸರ ಕಾಲು ಮುಟ್ಟಿ ನಮಸ್ಕಾರ ಮಾಡಿದ. ಪಕ್ಕದಲ್ಲಿದ್ದ ಮಹಾಮಂತ್ರಿಗೆ ಒಬ್ಬ ಮಹಾನ್ ಚಕ್ರವರ್ತಿ ಒಬ್ಬ ಸಾಧಾರಣ ವಿದ್ವಾಂಸನ ಕಾಲಿಗೆ ತಲೆ ಮುಟ್ಟಿಸಿ ನಮಸ್ಕಾರ ಮಾಡುವುದೇ ಅಂತ ಯೋಚನೆ ಮಾಡುತ್ತಾ ಚಕ್ರವರ್ತಿಯನ್ನು ಮನಸ್ಸು ತಡೆಯದೆ ಕೇಳಿದ. ಅದಕ್ಕೆ ಉತ್ತರವಾಗಿ ನನಗೆ ನಾಳೆ ಮೂರು ತಲೆ ಬೇಕು . ಕುರಿಯದು , ಹುಲಿಯದು ಮತ್ತು ಮನುಷ್ಯನದು ಎಂದು ಅದೇಶ ಮಾಡಿದ.
ಕುರಿಯ ತಲೆಯನ್ನ ಸುಲಭವಾಗಿ, ಹುಲಿಯನ್ನ ಬೇಟೆಯಾಡಿ ತರಿಸಿದರು . ಮನುಷ್ಯನ ತಲೆ ಬಹಳ ಯೋಚನೆ ಮಾಡಿ ಸ್ಮಶಾನಕ್ಕೆ ಹೋಗಿ ಹಿಂದಿನ ದಿನ ಹೂತಿದ್ದ ದೇಹದ ತಲೆ ಕಡಿದು ತಂದರು.ಮೂರು ತಲೆಗಳನ್ನ ಚಕ್ರವರ್ತಿಯ ಮುಂದೆ ಇಟ್ಟಾಗ ಹೇಳಿದ . ಈ ಮೂರು ತಲೆಯನ್ನ ಸಂತೆಯಲ್ಲಿ ಮಾರಿ ಹಣ ತ
ೆಗೆದುಕೊಂಡು ಬನ್ನಿ. ಅಲ್ಲಿ ಕುರಿ ತಲೆ ತಕ್ಷಣ ವ್ಯಾಪಾರ ವಾಯ್ತು. ಹುಲಿತಲೆಯನ್ನ ಯಾರೋ ಹಣವಂತ ಬಂದು ತನ್ನ ಮನೆಯಲ್ಲಿ ಗೋಡೆಗೆ ಹಾಕಬಹುದು ಒಳ್ಳೆಯ ಬೆಲೆಗೆ ತೆಗೆದು ಕೊಂಡು ಹೋದ.ಮನುಷ್ಯನ ತಲೆ ಮಾತ್ರ ಮಾರಲು ಆಗಲೇ ಇಲ್ಲ. ಚಕ್ರವರ್ತಿಗೆ ಬಂದು ವಿಷಯ ತಿಳಿಸಿದಾಗ ಒಂದು ಕೆಲಸ ಮಾಡಿ ನಾಳೆ ಯಾರಿಗಾದರೂ ಹಾಗೆ ಕೊಟ್ಟುಬಿಡಿ ಹಣ ಬೇಡವೆಂದ. ಯಾರೂ ಸುಮ್ಮನೆ ಸಹಾ ತೆಗೆದುಕೊಳ್ಳಲು ಮುಂದೆ ಬರಲಿಲ್ಲ. ಈ ವಿಷಯ ತಿಳಿಸಿದಾಗ ಚಕ್ರವರ್ತಿ ಈಗ ನಿಮಗೆ ಅರ್ಥವಾಗಿರಬಹುದು ಒಂದು ಪ್ರಾಣಿಯ ತಲೆಗೆ ಇರುವ ಬೆಲೆ ನಮ್ಮ ತಲೆಗೆ ಇಲ್ಲ. ಅಂತಹದರಲ್ಲಿ ಒಬ್ಬ ವಿದ್ವಾಂಸರ ಪಾದಕ್ಕೆ ಮುಟ್ಟಿಸಿದ್ದರಲ್ಲಿ ತಪ್ಪೇನು ಖಂಡಿರಿ ಅಂದಾಗ ತಲೆತಗ್ಗಿಸಿ ನಿಂತಿದ್ದ ಮಹಾಮಂತ್ರಿ ತಪ್ಪಾಯಿತು ಎಂದ.