ಸನ್ಯಾಸಿ
ಸನ್ಯಾಸಿ


ಒಬ್ಬ ಕೋಟ್ಯಧಿಪತಿ ಜೀವನದಲ್ಲಿ ನೆಮ್ಮದಿ ಇಲ್ಲವೆಂದು ತನ್ನಲ್ಲಿದ್ದ ಹಣ ಮತ್ತು ಆಸ್ತಿಯ ಪತ್ರಗಳನ್ನೆಲ್ಲಾ ಎರಡು ಸೂಟ್ ಕೇಸ್ ಗಳಲ್ಲಿ ತೆಗೆದುಕೊಂಡು ಬಂದು ಹತ್ತಿರದಲ್ಲಿದ್ದ ಒಂದು ಆಶ್ರಮಕ್ಕೆ ಬಂದು ಧ್ಯಾನದಲ್ಲಿದ್ದ ಸನ್ಯಾಸಿಯ ಹತ್ತಿರ ಕುಳಿತ. ಎಷ್ಟು ಹೊತ್ತಾದರೂ ಸನ್ಯಾಸಿ ಕಣ್ಣು ತೆರೆಯಲಿಲ್ಲ. ಅಷ್ಟು ಹಣವನ್ನ ಅಲ್ಲೇ ಬಿಟ್ಟು ಹೋಗಲು ಧೈರ್ಯ ಬರಲಿಲ್ಲ. ಅಲ್ಲೇ ಇದ್ದ ಅವರ ಶಿಷ್ಯನೊಬ್ಬನನ್ನ ಕರೆದು ವಿಷಯ ತಿಳಿಸಿದ. ಇದನ್ನ ಕೇಳಿಸಿಕೊಂಡ ಸನ್ಯಾಸಿ ಕಣ್ಣು ತೆರೆದ. ತಕ್ಷಣ ಎರಡೂ ಸೂಟ್ ಕೇಸ್ ಗಳನ್ನ ಎತ್ತಿಕೊಂಡು ಹೊರಗೆ ಓಡಿದ ಸನ್ಯಾಸಿ. ಅವನ ಹಿಂದೆಯೇ ಇವನೂ ಓಡಿದ. ಬಹಳ ದೂರ ಓಡಿದ ನಂತರ ಒಂದು ಕಡೆ ನಿಂತ. ಏಕೆ ಹೀಗೆ ಓಡುತ್ತಿದ್ದೀರಿ ನಿಮಗಾಗಿಯೇ ತಂದಿದ್ದು ಅಂತ ಹೇಳಿದಾಗ ಸನ್ಯಾಸಿ ಹಾಗಿದ್ದರೆ ನನ್ನ ಹಿಂದೆ ಏಕೆ ನೀನು ಓಡಿಬಂದೆ. ಅದರ ಮೇಲೆ ವ್ಯಾಮೋಹ ಇಲ್ಲವೆಂದ ಮೇಲೆ ನನ್ನ ಹಿಂದೆ ಬರುವ ಅವಶ್ಯಕತೆ ಏನಿತ್ತು. ನೀನು ಆಶ್ರಮಕ್ಕೆ ಬಂದಾದ ನಿನ್ನಲ್ಲಿ ತ್ಯಾಗದ ಭಾವನೆ ಇತ್ತು. ಈಗ ನಿನ್ನದೆನ್ನುವ ಆಸೆ ಇನ್ನೂ ಉಳಿದಿರುವುದು ಇದರಿಂದ ತಿಳಿಯಿತು. ಅದಕ್ಕೆ ಮತ್ತೊಂದು ಕಾರಣ ನೀನು ಕಷ್ಟಪಟ್ಟು ಸಂಪಾದನೆ ಮಾಡಿರುವುದು ಹೌದು. ಇದನ್ನ ತೆಗೆದುಕೊಂಡು ಹೋಗು. ಕಳೆದು ಕೊಂಡ ಆಸ್ತಿ ಮತ್ತೆ ದೊರಕಿದ ಸಂತೋಷವು ಈಗ ನಿನಗಿದೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡು ನಿನಗೆ ನೆಮ್ಮದಿ ತಾನಾಗಿ ದೊರೆಯುತ್ತೆ. ಎಂದು ಹೇಳಿ ಕಳಿಸಿದ ಸನ್ಯಾಸಿ. ಅಂದಿನಿಂದ ಬಡವರ ಬಂಧುವಾಗಿ ಜನಗಳ ಕಷ್ಟಕ್ಕೆ ನೆರವಾಗಿ ತಾನೂ ಸುಖವಾಗಿದ್ದ.