kaveri p u

Inspirational Others Children

4  

kaveri p u

Inspirational Others Children

ಪುಸ್ತಕ

ಪುಸ್ತಕ

1 min
446


ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ಅಂಜುಗೆ ಪುಸ್ತಕ ಓದುವುದು, ಅದರಲ್ಲಿ ಹೊಸದನ್ನು ಹುಡುಕುವುದು ಮತ್ತೆ ಅದನ್ನು ವಿಮರ್ಶೆ ಮಾಡುವುದು ಎಂದರೆ ಎಲ್ಲಿಲ್ಲದ್ಸ ಆಸಕ್ತಿ. ಅಂಜು ಮೊದಲಿಂದಲೂ ಹೀಗೆಯೇ. ಯಾರಾದರೂ  ಅಂಜುಳನ್ನು ನಿನ್ನ ಆಪ್ತ ಸ್ನೇಹಿತ ಯಾರೆಮ್ದು ಕೇಳಿದರೂ ಸಾಕಿತ್ತು, ಪುಸ್ತಕವೇ ನನ್ನ ಆಪ್ತ ಸ್ನೇಹಿತ ಎಮ್ದುಂಜು ತಡಮಾಡದೆ ಉಸುರುತ್ತಿದ್ದಳು. 


ಇದು ಅವಳ ದಿನದ ಹವ್ಯಾಸ ಮತ್ತೆ ಉತ್ತಮ ಅಭ್ಯಾಸ ಕೂಡ ಆಗಿತ್ತು.


ಅವಳ ಅಮ್ಮ ಅಂಜುಗೆ ಪ್ರತಿ ಹುಟ್ಟಿದ ಹಬ್ಬಕ್ಕೆ ಅವಳಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಅಪ್ಪನೂ ಕೂಡ ಅವಳು ಬೇಕೆನ್ನುವ ಪುಸ್ತಕಗಳನ್ನು ನೀಡಿ ಪ್ರೋಸ್ಥಾಹಿಸುತ್ತಿದ್ದರು.


ಅವಳ ಕೋಣೆಯ ಒಳಗೆ ಹೋದರೆ ಗ್ರಂಥಾಲಯವನ್ನು ನೋಡಿದ ರೀತಿ ಆಗುತಿತ್ತು.


ದೊಡ್ಡವರು ಹೇಳಿದ್ದು ಸುಮ್ನೆನೇನಾ, ಪುಸ್ತಕ ಒಬ್ಬ ಉತ್ತಮ ಗೆಳೆಯ ಇದ್ದಂತೆ ಅಂತ! ಅಪ್ಪ-ಅಮ್ಮನ ಒಬ್ಬಳೇ ಮುದ್ದಿನ ಮಗಳಾಗಿದ್ದ ಅಂಜು ವೈದ್ಯಳೋ, ಇಂಜಿನಿಯರ್ರೋ ಆಗ್ಬೇಕು ಅಂತ ಸಂಬಂಧಿಕರು ಬಯಸಿದ್ದರೆ, ಅಂಜುಳ ತಾಯಿ-ತಂದೆಯರು ಮಾತ್ರ ತಮ್ಮ ಮಗಳ ಆಸಕ್ತಿಯೇ ತಮ್ಮ ಆಸಕ್ತಿ ಕೂಡ, ಅವಳಿಗೆ ಸಾಹಿತ್ಯದಲ್ಲಿ ಮುಂದುವರೆಯುವ ಆಸೆ ಇದ್ದಲ್ಲಿ, ಅದನ್ನೆ ಉಸಿರಾಗಿಸಿಕೊಂಡು ಬದುಕಲಿ, ಅದಕ್ಕೆ ತಮ್ಮಿಂದೇನು ತಕರಾರು ಇಲ್ಲ ಎಂದಿದ್ದನ್ನು ಕೇಳಿ ಅಂಜು ತುಂಬಾ ಖುಷಿಯಾಗಿದ್ದಳು. 


ಶಾಲೆಗೂ ಉತ್ತಮ ಅಂಕ ಗಳಿಸಿ ಮೊದಲಿಗಳಾಗಿದ್ದ ಅಂಜು ಮುಂದೆಯೂ ಕನ್ನಡವನ್ನೇ , ಕನ್ನಡದ ಸಾಹಿತ್ಯವನ್ನೆ ಮುಖ್ಯ ವಿಷಯವಾಗಿ ಓದಿದಳು. ಹಾಗೆಯೇ ಪತ್ರಿಕೆಗೂ ಬರೆಯುವ ರೂಢಿಯಾಯಿತು. ಇಂತಹ ಅಭ್ಯಾಸಗಳು ಅಂಜು ಪುಸ್ತಕ ಬರೆಯುವಂತೆ ಪ್ರೇರೆಪಿಸಿದವು. ಕನ್ನಡದ ಸಾಹಿತಿಗಳಲ್ಲಿ ಅಂಜು ಸಹ ಒಬ್ಬಳಾದಳು.


ಒಂದು ಪುಸ್ತಕದ ಗೆಳೆತನ ಅಂಜುಬನ್ನು ಮತ್ತೊಂದು ಪುಸ್ತಕವನ್ನೇ ಬರೆಯುವಂತೆ ಮಾಡಿತು.

ಹೀಗೆ ಎಲ್ಲಾ ಮಕ್ಕಳಿಗೂ ಪುಸ್ತಕ ಓದುವ ಅಭ್ಯಾಸವನ್ನು ನಾವು ರೂಡಿಸಬೇಕು. ಅಂಜು ಅವರ ಅಪ್ಪ ಅಮ್ಮನನ್ನು ನೋಡಿ ನಾನು ಕೂಡಾ ಮಕ್ಕಳಿಗೆ ಓದಿ ಅಂತಾ ಹೇಳುತ್ತೇನೆ.


Rate this content
Log in

Similar kannada story from Inspirational