STORYMIRROR

Ashritha Kiran ✍️ ಆಕೆ

Abstract Tragedy Others

4  

Ashritha Kiran ✍️ ಆಕೆ

Abstract Tragedy Others

ಪ್ರೀತಿಯ ಪರೀಕ್ಷೆ...

ಪ್ರೀತಿಯ ಪರೀಕ್ಷೆ...

2 mins
227

" ಯದು ನೀನು ನನ್ನನ್ನು ಎಷ್ಟು ಪ್ರೀತಿಸ್ತೀಯಾ"?


"ಇದೆಂತ ಪ್ರಶ್ನೆ ಯಶು"?


"ಪ್ರಶ್ನೆಗೆ ಪ್ರಶ್ನೆ ಕೇಳಬೇಡ ಉತ್ತರ ಹೇಳು ನೀನು ಎಷ್ಟು ಪ್ರೀತಿಸ್ತೀಯಾ?


"ತುಂಬಾ ಪ್ರೀತಿಸ್ತೀನಿ.."


"ತುಂಬಾ ಅಂದ್ರೆ ಎಷ್ಟು?"


"ಸಮುದ್ರದಷ್ಟು" ಹುಚ್ಚು ಹುಡುಗಿ ಕಣೆ ನೀನು, ಪ್ರೀತಿ ಮನಸಲ್ಲಿ ಇರೋದು ಅದನ್ನ ಪ್ರತಿ ಸತಿ ಪ್ರೂವ್ ಮಾಡ್ತಾ ಕೂರಬಾರದು ಗೊತ್ತಾಯ್ತಾ...ಸರಿ, ಮತ್ತೆ ಮಾತಾಡ್ತೀನಿ ಚೂರ್ ಕೆಲ್ಸ ಇದೆ ಟೇಕ್ ಕೇರ್ ಬಾಯ್.." ಎಂದವ ತನ್ನ ಆಫೀಸ್ ಕೆಲಸದಲ್ಲಿ ಮುಳುಗಿ ಹೋದ..


"ಬಾಯ್" ಎಂದು ಪೋನ್ ಇಟ್ಟು ಯಶೋಧ ತನ್ನ ಕೆಲಸ ಮುಗಿಸಿ ಮಲಗಲು ಮುಂದಾದಳು.ಯದುವೀರ್ ಜೊತೆಗೆ ಕಳೆದ ಸಮಯವನ್ನು ಮೆಲುಕು ಹಾಕುತ್ತಾ ಮುಂದಿನ ತಿಂಗಳು ನಡೆಯಲಿರುವ ಮದುವೆಯ ಬಗ್ಗೆ ಯೋಚಿಸುತ್ತ ಮುಂದಿನ ಜೀವನದ ಬಗ್ಗೆ ಕನಸುಗಳ ಮಾಲೆ ಪೋಣಿಸುತ್ತಾ ನಿದ್ರೆಗೆ ಜಾರಿದ್ದು ತಿಳಿಯಲಿಲ್ಲ..

ಇತ್ತ ಯದುವೀರ್ ತನ್ನ ಆಫೀಸ್ ಕೆಲಸ ಮುಗಿಸಿ ಪೋನ್ ವಾಲ್ ಪೇಪರ್ ನಲ್ಲಿ ತನ್ನವಳನ್ನು ಕಂಡು ಮೆಚ್ಚುಗೆಯ ನಗೆ ಬೀರುತ್ತಾ ನಿದ್ದೆಗೆ ಜಾರಿದ..

ಮುಂಜಾನೆ ಎದ್ದು ತನ್ನ ಗೆಳತಿಯರನ್ನು ಭೇಟಿ ಮಾಡಿ ಮದುವೆಗೆ ಆಹ್ವಾನಿಸಲೆಂದು ಯಶು ಹೊರಟಳು... ಗೆಳತಿಯರ ಜೊತೆ ಸಂತಸದಿಂದ ತನ್ನ ಹಾಗೂ ಯದುವೀರ್ ನ ಪ್ರೀತಿಯ ಬಗ್ಗೆ ಮಾತನಾಡುತ್ತಿರುವಾಗ ಒಬ್ಬಳು ತನ್ನ ಅಸಹನೆಯನ್ನು ಹೊರಹಾಕಿದಳು...


" ಇಷ್ಟೆಲ್ಲಾ ಹೇಳ್ತಿದ್ಯಲ್ಲ ನಿನ್ ಹುಡ್ಗನ್ ಬಗ್ಗೆ ಈಗಲೇ ಒಂದು ಟೆಸ್ಟ್ ಮಾಡೋಣ ನಿನ್ನ ಹುಡುಗನಿಗೆ ಫೋನ್ ಮಾಡು ನಿನ್ನ ಮೇಲೆ ಪ್ರೀತಿ ಇದ್ರೆ ಅದೇನೇ ಕೆಲಸ ಇದ್ದರೂ ಬಿಟ್ಟು ಈ ಕೂಡಲೇ ಬರಕ್ ಹೇಳು ಅಕಸ್ಮಾತ್ ಬಂದ್ರೆ ನಿನ್ನನ್ನು ಮನಸಾರೆ ಪ್ರೀತಿಸ್ತಿದಾರೆ ಅಂತ ಅರ್ಥ" ಎಂದವಳ ಮಾತಿಗೆ ತಲೆದೂಗಿ "ಗ್ಯಾರೆಂಟಿ ಪ್ರೂ ಮಾಡ್ತೀನಿ ನೋಡು, ನನ್ ಮೇಲ್ ಅವನಿಗೆ ಎಷ್ಟು ಪ್ರೀತಿ ಇದೆ ಅಂದ್ರೆ ನಾನ್ ಕರೆದ ಕೂಡಲೆ ಬಂದೇ ಬರ್ತಾನೆ" ಎನ್ನುತ್ತಾ ಯದುಗೆ ಕರೆ ಮಾಡಿದಳು..


" ಹಾಯ್ ಯಶು ಹೇಳಮ್ಮ.."


"ಈ ಕೂಡಲೇ ನಮ್ಮನೆ ಹತ್ರ ಇರೋ ಹೋಟೆಲ್ಗೆ ಬಾ

ಬರಬೇಕು ಅಷ್ಟೆ"


"ಈಗ ಆಗಲ್ಲ ಸಾಯಂಕಾಲ ಗ್ಯಾರಂಟಿ ಬರ್ತೀನಿ ಈಗ ಅರ್ಜೆಂಟ್ ಮೀಟಿಂಗ್ ಇದೆ"


"ಅಂದ್ರೆ ನನಗಿಂತ ಕೆಲಸನೇ ಇಂಪಾರ್ಟೆಂಟ್"?


"ಹಾಗಲ್ಲಮ್ಮ ಒಂದ್ ಮೀಟಿಂಗ್ ಇದೆ.. ನನಗೋಸ್ಕರ ಕಾಯ್ತಾ ಇರ್ತಾರೆ ಮೀಟಿಂಗ್ ಮುಗಿಸಿ ಸಂಜೆ ಮೀಟ್ ಆಗ್ತೀನಿ ಅರ್ಥ ಮಾಡ್ಕೋ, ಯಶು


"ಅದೆಲ್ಲಾ ನಂಗೊತ್ತಿಲ್ಲ ನನ್ ಮೇಲೆ ಪ್ರೀತಿ ಇದ್ರೆ ನೀನು ಈ ಕೂಡಲೆ ಬರ್ತೀ ಇಲ್ಲ ಅಂದ್ರೆ ನಾನ್ ಸಾಯ್ತಿನಿ ಅಷ್ಟೇ"


"ಏನ್ ಮಾತನಾಡ್ತಿದ್ದೀಯಾ? ಸರಿ, ಇನ್ ಅರ್ಧ ಗಂಟೆಲಿ ಬರ್ತೀನಿ ವೈಟ್ ಮಾಡು"


"ಅದೆಲ್ಲಾ ಆಗಲ್ಲ ಬೇಗ ಬರಬೇಕು ಅಂದ್ರೆ ಬರಬೇಕು ಅಷ್ಟೇ"


"ಆಯ್ತಮ್ಮ ಬರ್ತೀನಿ ತಡಿ" ಎನ್ನುತ್ತಾ ಕೋಪದಿಂದಲೇ ಫೋನ್ ಕಟ್ ಮಾಡಿ ತನ್ನ ಕೆಲಸವನ್ನು ಆತ್ಮೀಯ ಗೆಳೆಯನಿಗೆ ವಹಿಸಿ ಗಡಿಬಿಡಿಯಲ್ಲಿ ಗಾಡಿ ಓಡಿಸುತ್ತಾ ಯಶು ಮೀಟ್ ಮಾಡಲು ಹೊರಟ..

ಅದಾಗಲೇ ಯಶು ಹಾಗೂ ಅವಳ ಗೆಳತಿಯರು ಯದುವಿರ್ ಗಾಗಿ ಕಾಯಲು ಆರಂಭಿಸಿ ಒಂದು ಗಂಟೆ ಕಳೆದಿತ್ತು.. 


"ಎಲ್ಲಮ್ಮ ನಿನ್ನ ಹುಡುಗ.. ನೋಡ್ದ್ಯಾ, ಪ್ರೀತಿ ಮಾಡುವಾಗ ನೀನು ಕರೆದ ಕೂಡಲೇ ಓಡಿ ಬರ್ತಾ ಇದ್ದ ಈಗ ಮದುವೆ ಫಿಕ್ಸ್ ಆದ ಕೂಡಲೇ ನಿನ್ನ ಮೇಲಿನ ಪ್ರೀತಿ ಕಡಿಮೆ ಆಗಿದೆ.. ಕರ್ದು ಎಷ್ಟೊತ್ ಆಯ್ತು ಇನ್ನು ಪತ್ತೆ ಇಲ್ಲ .. ಈ ಹುಡುಗರೆಲ್ಲ ಬರೀ ಇಷ್ಟೇ ಕಣೆ, ನಿನ್ನ ಹುಡುಗನ ಜಾಸ್ತಿ ನಂಬಕ್ ಹೋಗ್ಬೇಡ" ಎಂದವಳ ಮಾತಿಗೆ ಬೇಸರಿಸಿಕೊಂಡು ಯದುವಿರ್ ಗೆ ಕರೆ ಮಾಡಿದಳು..ಆ ಕಡೆಯಿಂದ ಪೋನ್ ರಿಸೀವ್ ಮಾಡುತ್ತಿದ್ದಂತೆ


"ಅವಾಗ್ಲೇ ಬರ್ತೀನಿ ಅಂದೆ ಎಲ್ಲಿದ್ಯ ನೀನು? ನಿನಗೋಸ್ಕರ ಕಾದು ಕಾದು ಸಾಕಾಯ್ತು..ನಿಂಗೆ ನನ್ಮೇಲೆ ಪ್ರೀತಿನೇ ಇಲ್ಲ ನನ್ ಫ್ರೆಂಡ್ಸ್ ಎದ್ರುಗಡೆ ನಿನ್ನಿಂದ ಅವಮಾನ ಆಯಿತು " ಎಂದು ಅಳಲಾರಂಭಿಸಿದಳು..


"ಹಲೋ ಮೇಡಂ ನಾವು ಆಗಿಂದ ಈ ಫೋನ್ ಅನ್ಲಾಕ್ ಮಾಡಕ್ಕೆ ಟ್ರೈ ಮಾಡ್ತಾ ಇದ್ವಿ.. ಸದ್ಯ ನೀವು ಫೋನ್ ಮಾಡಿ ಒಳ್ಳೆ ಕೆಲಸ ಮಾಡಿದ್ರೀ. ನೀವೀಗ ಫೋನ್ ಮಾಡಿದ್ರಲ್ಲ ಆ ವ್ಯಕ್ತಿಗೆ ಆಕ್ಸಿಡೆಂಟ್ ಆಗಿದೆ ಇಲ್ಲೇ ಹತ್ತಿರದ ಹಾಸ್ಪಿಟಲ್ಗೆ ಕರ್ಕೊಂಡ್ ಬಂದಿದೀವಿ... ಬೇಗ ಬನ್ನಿ " ಎನ್ನುತ್ತಾ ಆಪರಿತ ವ್ಯಕ್ತಿ ಫೋನ್ ಕಟ್ ಮಾಡಿದರು..

ಯಶು ದಿಕ್ಕು ತೋಚದೆ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿ ಗೆಳತಿಯರನ್ನು ಅಲ್ಲೇ ಬಿಟ್ಟು ತನ್ನ ಮನೆ ಕಡೆ ಓಡಿದಳು ..ಅಪ್ಪ ಅಮ್ಮನನ್ನು ಕರೆದುಕೊಂಡು ಅಪರಿಚಿತ ವ್ಯಕ್ತಿ ಹೇಳಿದ ಆಸ್ಪತ್ರೆಗೆ ಬರುವಷ್ಟರಲ್ಲಿ ಯದುವಿರ್ ಪ್ರಾಣ ಪಕ್ಷಿ ಹಾರಿಹೋಗಿತ್ತು..


"ಅಯ್ಯೋ ದೇವರೇ ನಾನೇ ಇದಕ್ಕೆಲ್ಲ ಕಾರಣ ನಾನು ಅರ್ಜೆಂಟ್ ಮಾಡದೆ ಹೋಗಿದಿದ್ದರೆ ಯದು ಅಷ್ಟು ಸ್ಪೀಡ್ ಆಗಿ ಬರ್ತಾನೆ ಇರಲಿಲ್ಲ ..ನನ್ ಮೇಲಿನ ಪ್ರೀತಿ ಪ್ರೂವ್ ಮಾಡು ಅಂತ ಹೇಳಿ ನಾನೇ ಅವನನ್ನು ಕೊಂದೆ... ಯದು ಸಾರಿ ಕಣೋ ಪ್ಲೀಸ್ ನನ್ನ ಬಿಟ್ಟು ಹೋಗಬೇಡ ನಿನ್ನ ಬಿಟ್ಟು ನನಗೆ ಬದುಕೋಕಾಗಲ್ಲ" ಎಂದು ಯಶೋಧ ಕಣ್ಣೀರು ಸುರಿಸಿದಳು... ಹೋದ ಜೀವ ಮರಳಿ ಬರಲು ಸಾಧ್ಯವೇ..?



Rate this content
Log in

Similar kannada story from Abstract