Gayathri Srinivas

Drama

3  

Gayathri Srinivas

Drama

ಪ್ರೀತಿ ಎಂದರೇನು

ಪ್ರೀತಿ ಎಂದರೇನು

2 mins
11.8K


ಭಾಗ 1


ಅದು ಕೊಪ್ಪಳದ ಒಂದು ಕುಗ್ರಾಮ ಕೂಕನೂರು ಅಲ್ಲಿನ ಜನರು ಬಹಳ ಸಜ್ಜನರು ಮತ್ತು ವಿದ್ಯಾವಂತರು. ಇಂಥ ಹಿನ್ನೆಲೆಯ ಊರಿನಲ್ಲಿ ಸವಿತಾ ಮತ್ತು ಮಹೇಶ ಪುಜಾರ್ ದಂಪತಿಗಳ ವಾಸ. ಮಹೇಶ ಅವರು ಸ್ಕೂಲ್ ಟೀಚರ್, ಮತ್ತು ತಂದೆ ತಾಯಿಯರ ಮುದ್ದಿನ ಮಗ ಹೀಗೆ ಕಾಲ ಕಳೆದಂತೆ ಮನೆಯವರು ನೋಡಿದಂತ ಸವಿತಾರವರನ್ನು ಒಪ್ಪಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಾರೆ.

ಆಕೆಯು ರೂಪವತಿ ಸಜ್ಜನೆ ಮಿತ ಭಾಷಿ ಅಣ್ಣ ಬಾಲೂವಿನ ಪ್ರೀತಿಯ ತಂಗಿ, ಅತ್ತಿಗೆ ರಮಾಳ ಮುದ್ದಿನ ಮಗು ಅಮ್ಮನ ಪ್ರೀತಿಯ ಮಗಳು… ಹೀಗೆ ಕಾಲ ಕಳೆದಂತೆ ಸವಿತಾ ಅವರ ಒಡಲಲ್ಲಿ ಕುಡಿ ಚಿಗುರುವ ಸಮಯ ಮಹೇಶಂತು ಹೆಂಡತಿಯ ಸೇವೆಗೆ ಪಣತೊಟ್ಟು ಅಕೆಯ ಬಯಕೆಯನ್ನು ತೀರಿಸುವ ದಾವಂತ… ಬಾಲು ಮಾವನಾಗುವ ಖುಷಿ ರಮಾಳ ಸಡಗರ ಹೇಳತೀರದು. ಸವಿತಾಳ ಅತ್ತೆಯಂತು ಸೊಸೆಯನು ಬಹಳ ಆದರದಿಂದ ಆಕೆಗೆ ಉಪಚಾರ ಮಾಡುತ್ತ ಆಕೆಗೆ ಪುರಾಣ ಪ್ರಸಿದ್ಧ ಕತೆಗಳನ್ನು ಹೇಳುತ್ತಾರೆ.. ಹೀಗೆ ತಿಂಗಳುಗಳೂ ದಿನಗಳಂತೆ ಉರುಳಿದವು….

ಮಹೇಶ ಮತ್ತು ಬಾಲು ಗುಡಿಗೆ ತೆರಳಿ ಅರ್ಚಕರನ್ನು ಬೇಟಿ ಮಾಡಿ ಸೀಮಂತಕ್ಕೆ ಒಳ್ಳೆಯ ದಿನ ತಿಳಿದು ಬರುತ್ತಾರೆ. ಅಂದು ಶುಕ್ರವಾರ ಮನೆಯಲ್ಲಿ ಹಬ್ಬದ ವಾತಾವರಣ ಮನೆಯ ಮುಂದೆ ಚಪ್ಪರ ಹಾಕಿಸಿ ಚಂದದ ರಂಗೂಳಿ ಇರಿಸಿ ತಳಿರು ತೋರಣ ಕಟ್ಟಿ ಹೂವೂ ಹಣ್ಣುಗಳಿಂದ ಅಲಂಕರಿಸುತ್ತಾರೆ. ಬಾಲು ಎಲ್ಲದರ ಉಸ್ತುವಾರಿ ನೋಡಿಕೊಳ್ಲುತಾನೆ ಮಹೇಶ ಪ್ರೀತಿಯ ಮಡದಿಗೆ ಆಕೆ ಇಷ್ಟದ ಹಸಿರು ಬಣ್ಣದ ರೇಷ್ಮೆಯ ಸೀರೆಯನ್ನು ತರುತ್ತಾನೆ…. ಬಳೆಗಾರನನ್ನು ಕರೆಸಿ ಸವಿತಾಳಿಗೆ ಬಳೆತೂಡಿಸಿ ಊರ ಹಿರಿಯ ಮುತೈದೆಯರಿಗೆ ಹೆಂಡತಿಯ ಕೈಯಲ್ಲಿ ಮಡಿಲು ತುಂಬಿಸಿ ಅವರ ಅರ್ಶಿವಾದ ಪಡೆಯುತ್ತಾರೆ… ನಂತರ ಸೀಮಂತವನ್ನು ನೆರವೇರಿಸಿ ಬಂದವರಿಗೆ ಸಿಹಿ ಊಟದ ವ್ಯವಸ್ಥೆ ಮಾಡಿಸಿ ಎಲ್ಲರನ್ನೂ ಆದರದಿಂದ ಸತ್ಕರಿಸುತ್ತಾರೆ…

ಮುಂದಿನ ಎರಡು ದಿನದಲ್ಲಿ ಸವಿತಾ ಚಂದದ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ… ಮಗುವಿಗೆ ಮೂರು ತಿಂಗಳು ತುಂಬಿದ ವೇಳೆ ಆಕೆಗೆ “ ಚೈತ್ರ “ಎಂದು ನಾಮಕರಣ ಮಾಡುತ್ತಾರೆ… ಹೀಗೆ ಕಾಲ ಕಳೆದಂತೆ ಮಹೇಶ ಮತ್ತು ಸವಿತಾ ದಂಪತಿ ಚೈತ್ರ, ಸ್ಪೂರ್ತಿ ಮತ್ತು ಭರತ್ ಎಂಬ ಮೂರು ಮಕ್ಕಳ ತಂದೆ ತಾಯಿಯರಗಿ…ಸುಖವಾಗಿ ಅವರ ಜೀವನ ನಡೆಯುತಿರುತ್ತದೆ…

ಈ ಮಧ್ಯೆ ಬಾಲುವಿಗೆ ಉದ್ಯೋಗದಲ್ಲಿ ಬಡ್ತಿ ಪಡೆದು ಉನ್ನತ ಮಟ್ಟಕ್ಕೆ ಬರುತ್ತಾನೆ... ಅವನಲ್ಲಿ ಯಾವುದೇ ಬದಲಾವಣೆ ಇಲ್ಲದೆ ಇದ್ದರು ರಮಾಳಲ್ಲಿ ಬಹಳ ಬದಲಾವಣೆ ಕಾಣುತ್ತದೆ ಈ ಬದಲಾವಣೆಯಿಂದ ಸವಿತಾ ಬಹಳ ನೂಂದುಕೂಳ್ಳೂತ್ತಾಳೆ.... ಅದರೆ ಮಹೇಶನ ಪ್ರೀತಿ ಮತ್ತು ಸಾಂತ್ವನದಿಂದ ಮತ್ತೆ ಮೊದಲಿನಂತೆ ಆಗುತ್ತಾಳೆ ಸವಿತಾ...

ಅಂದು ಬೆಳಿಗ್ಗೆ ಮಹೇಶ ಸ್ಕೂಲ್ಗೆ ಸಿದ್ದರಾಗಿ ಎಲ್ಲರೊಡನೆ ತಾನು ತಿಂಡಿ ತಿಂದು ಮಗನ್ನು ಮುದ್ದಿಸಿ ಚೈತ್ರ ಸ್ಪೂರ್ತಿಯರೂಡನೆ ಹೊರಡಲು ಸಿದ್ದನಾಗಿ ಹೆಂಡತಿಯನ್ನು ಮುದ್ದಸಿ ಮನೆಯಿಂದ ಹೊರಡುತ್ತಾನೆ... ಆದರೆ ವಿಧಿ ತನ್ನದೆ ಆಟ ಆಡಲು ಕಾಯುತ್ತಿದ್ದನೆ ಎಂದು ಸ್ವತಃ ಮಹೇಶನಿಗು ತಿಳಿದಿರಲಿಲ್ಲ


ಮುಂದುವರಿಯುವುದು



Rate this content
Log in

Similar kannada story from Drama