STORYMIRROR

Achala B.Henly

Abstract Children Stories Classics

3  

Achala B.Henly

Abstract Children Stories Classics

ಪಂಜರ

ಪಂಜರ

1 min
124

ಆಕೆಯನ್ನು ಎಷ್ಟೇ ಮುದ್ದು ಮಾಡಿ ನೋಡಿಕೊಂಡರೂ, ಅವಳಿಗೆ ಇತ್ತೀಚಿಗೇಕೋ ತಾನು ಹುಟ್ಟಿ ಬೆಳೆದ ಮನೆಯೇ ಪಂಜರದಂತೆ ಭಾಸವಾಗುತ್ತಿದೆ. ಅವಳ ತಂದೆ ತಾಯಿಗೆ ಈಗ ತಾವು ಮಾಡಿದ ತಪ್ಪಿನ ಅರಿವಾಗಿದೆ. ಕೆಲಸ, ಗೆಳಯರ ಭೇಟಿ, ಪಾರ್ಟಿ, ಮೀಟಿಂಗ್, ಸುತ್ತಾಟ ಎಂದು ಇಷ್ಟೂ ವರ್ಷಗಳು ಅವರು ಹೊರಗಿದ್ದದ್ದೇ ಹೆಚ್ಚು. ಆಕೆಯ ಬಾಲ್ಯ ಹೆಚ್ಚಾಗಿ ಕಳಿದದ್ದು ಅವಳ ಅಜ್ಜಿಯೊಂದಿಗೆ.


ಅಪ್ಪ ಅಮ್ಮನ ಸಖ್ಯ ಎಷ್ಟು ಹಂಬಲಿಸಿದರೂ ಅವಳಿಗೆ ಸಿಗಲಿಲ್ಲ. ಈಗ ಕಾಲೇಜು ಸೇರಿದ್ದಾಳೆ. ಹೊಸ ಹೊಸ ಆಸೆಗಳು ಚಿಗುರೊಡೆದಿವೆ. ಸಿಗದ ಅಪ್ಪ ಅಮ್ಮನ ಪ್ರೀತಿಯನ್ನು ಹೊಸದಾಗಿ ಪರಿಚಯವಾದ ಗೆಳೆಯನಲ್ಲಿ ಕಂಡುಕೊಂಡಿದ್ದಾಳೆ. ಇದನ್ನು ತಿಳಿದು ಹೌಹಾರಿದ ಆಕೆಯ ಪೋಷಕರು, ದಿನವಿಡೀ ಮನೆಯಲ್ಲಿ ಇದ್ದು ಬುದ್ಧಿವಾದ ಹೇಳುತ್ತಿದ್ದಾರೆ. ಆದರೆ ಅವರ ಮಾತುಗಳನ್ನು ಕೇಳುವ ಸ್ಥಿತಿಯನ್ನು ಅವಳೆಂದೋ ದಾಟಿದ್ದಾಳೆ..!!


Rate this content
Log in

Similar kannada story from Abstract