JAISHREE HALLUR

Action Classics Inspirational

4  

JAISHREE HALLUR

Action Classics Inspirational

ನನ್ನ ದೇಶ—ಭಾರತ

ನನ್ನ ದೇಶ—ಭಾರತ

2 mins
425


 ಭಾರತ ದೇಶ ಒಂದು ಸಮಗ್ರ ದೇಶ. ಅದರ ಇತಿಹಾಸವನ್ನು ಅವಲೋಕಿಸಿದಾಗ ಅದರ ಬೆಳವಣಿಗೆಯಲ್ಲಿ ಅನೇಕ ಬದಲಾವಣೆಯಿವೆ. 

ಮೊದಲನೆಯದು ಪ್ರಾಚೀನ ಕಾಲದ್ದು ನಂತರ ಮಧ್ಯಯುಗ, ಆಮೇಲೆ ಕಂಡದ್ದು ಈಗಿನ ಆಧುನಿಕ ಭಾರತ. 


ಇಲ್ಲಿನ ಸನಾತನ ಧರ್ಮ ಹಾಗೂ ಸಂಸ್ಕೃತಿ ಯಾವ ಆತಂಕವೂ ಇಲ್ಲದೆ ಬೆಳೆದು ಬಂದಿದೆ. 

ಹಿಂದೂ ಧರ್ಮದ ಅಸ್ತಿತ್ವ ಬೆಳಕಿಗೆ ಬಂದಿದೆ. ಇದರ ಜೊತೆಗೆ ಇನನ್ನೀತರ ಧರ್ಮಗಳಾದ ಕ್ರೈಸ್ತ, ಜೈನರು, ಬೌದ್ಧರ, ಮುಸಲ್ಮಾನರು ಇತ್ಯಾದಿ ಧರ್ಮಗಳ ಹುಟ್ಟಿಕೊಂಡಿವೆ. 


ಐರೋಪ್ಯ ಧಾಳಿಯಿಂದ ನಮ್ಮ ದೇಶ ಬ್ರಿಟಿಷರ ಪಾಲಾದದ್ದು ವಿಷಾದನೀಯ. ಕೇವಲ ವರ್ತಕರಾಗಿ ಭಾರತ ಪ್ರವೇಶ ಮಾಡಿದ ಐರೋಪ್ಯರು ಒಂದು ದಿನ ಇಲ್ಲಿ ಪ್ರಭಲ ರಾಜಕೀಯ ಶಕ್ತಿಯಾಗಿ ಮಾರ್ಪಡುತ್ತಾರೆಂದು ಯಾರೂ ಊಹಿಸಿರಲಿಲ್ಲ. ಕೊನೆಗೆ ಭಾರತ ಅವರ ಅಡಿಯಾಳಾಯುತು. ಅನೇಕ ವರ್ಷಗಳ ಗುಲಾಮಗಿರಿಯಲ್ಲಿ ಭಾರತ ನರಳಿತು.


ಈ ಸಂಕೋಲೆಯಿಂದ ಬಿಡುಗಡೆ ಹೊಂದಲು ನಡೆಸಿದ ಹೋರಾಟ ಅದೊಂದು ರೋಮಾಂಚನಕಾರಿ ಕಥನ. ಅದರಲ್ಲಿ ಸಾವಿರಾರು ಮಂದಿಯ ತ್ಯಾಗ ಬಲಿದಾನಗಳ ಫಲವಾಗಿ ಈ ಶತಮಾನದ ಮಧ್ಯಭಾಗದಲ್ಲಿ ಸ್ವಾತಂತ್ರ ಗಳಿಸಿದೆವೆಂಬ ದೀರ್ಘ ಉಸಿರಾಡಿದೆವು. ಆದರೆ, ನಮ್ಮ ದೇಶ ವಿಭಜನೆಯಾಯಿತು. ನಿರಾಶ್ರಿತರ ಪ್ರವಾಹ, ಬಡತನ, ಆರ್ಥಿಕ ದುರ್ಬಳಕೆ, ಅನಕ್ಷರತೆ, ನಿರುದ್ಯೋಗ, ಸೋಮಾರಿತನ, ವಸತಿ ಸೌಲಭ್ಯ, ಜನಸಂಖ್ಯೆ ಆಸ್ಫೋಟನೆ ಮತ್ತು ಆಹಾರ ಸಮಸ್ಯೆ, ಇತ್ಯಾದಿ ತೊಂದರೆಗಳು ಎದುರಾದವು. 


ಇವೆಲ್ಲವುಗಳಿಂದ ಪಾರಾಗಲು ನಮ್ಮ ಅಂದಿನ ಸರ್ಕಾರ ಬಹಳ ಶ್ರಮವಹಿಸಿತ್ತು. ಅನೇಕ ಮಹಾನ್ ನಾಯಕರುಗಳ ಆಡಳಿತದಲ್ಲಿ ಭಾರತ ಮತ್ತೆ ಪ್ರಭಲ ರಾಷ್ಟ್ರವಾಗಿ ಮಾರ್ಪಟ್ಟಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಇಂದು ನಮ್ಮ ದೇಶ ಸಫಲವಾಗಿದೆ ಹಾಗೂ ಸಭಲವಾಗಿದೆ. 

ಅನ್ಯ ದೇಶಗಳ ನಡುವೆ ಭಾರತ ತಲೆ ಎತ್ತಿ ನಿಲ್ಲುವಂತಹ ಮುನ್ನಡೆಯಲ್ಲಿದೆ. 


ಭಾರತದ ಇತಿಹಾಸ ಬಹಳ ಹಳೆಯದ್ದು. ಇಲ್ಲಿ ಸಾವಿರಾರು ಭಾರತೀಯರು, ಪಂಡಿತರು, ಲೇಖಕರು, ವಿಧ್ವಾಂಸರು, ಸಾಹಿತಿಗಳು, ಇತಿಹಾಸಕಾರರಾಗಿದ್ದರು. ಜಾತಿ, ಧರ್ಮ, ಸಂಸ್ಕೃತಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. 


ಇಂದಿಗೂ ಮಹಾಭಾರತ, ರಾಮಾಯಣ ಗಂಥಗಳು ಓದುಗರ ಮನೆಮನ ಸೇರಿವೆ. ಈಗಲೂ ರಾಮರಾಜ್ಯದ ಕನಸು ಎಲ್ಲರ ಆಶಯವಾಗಿದೆ. 

ಇದಾದ ನಂತರ ಸಾವಿರಾರು ಲೇಖಕರು, ಸಾಹಿತಿಗಳು, ಭಾಷಾತಜ್ಞರು, ಹುಟ್ಟಿಬಂದು ಸಾಧನೆಗಳ ಮೈಲಿಗಲ್ಲು ಏರಿಸಿದ್ದಾರೆ. 

ಇದು ನನ್ನ ಹೆಮ್ಮೆಯ ದೇಶ. 


ಅನೇಕ ಭಾಷೆಗಳನ್ನೊಳಗೊಂಡ ಈ ದೇಶ ಆಧುನಿಕ ಸಂಭ್ರಮದಲ್ಲಿ, ವಿಜ್ರಂಭಿಸುತ್ತಿದೆ. 

ಸರ್ಕಾರದ ಸವಲತ್ತು, ತೆರಿಗೆ ರೀತಿನೀತಿ, ಕಾನೂನಿನ ವ್ಯವಸ್ಥೆ, ನ್ಯಾಯಾಂಗ ಕಛೇರಿಗಳ ಆಡಳಿತ, ಪ್ರಜೆಗಳ ನೆಮ್ಮದಿಗಳ ಕಾರಣವಾಗಿವೆ


ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತ ಗೊಂಡ ಭಾರತ ಅಚ್ಚುಕಟ್ಟಾಗಿ ನಿಭಾಯಿಸಿದೆ. 

ಸ್ವಾವಲಂಭಿಯಾಗಿದೆ. ಪ್ರಭಲ ರಾಷ್ಟ್ರಗಳಲ್ಲೊಂದಾಗಿದೆ. ಶತ್ರು ದೇಶಗಳಾದ ಪಾಕಿಸ್ತಾನ, ಚೀನಾ, ತಾಲೀಭಾನ್ ನಂತಹ ವೈರಿರಾಷ್ಟಗಳನ್ನು ತಾಂತ್ರಿಕವಾಗಿ ಸಧೆಬಡಿಯುವ ಒಡಂಬಡಿಕೆ ಹೂಡಿಕೆಯಾಗಿದೆ. ನಮ್ಮ ಉಳಿವಿಗೆ ಹಗಲಿರುಳು ಶ್ರಮಿಸುವ ನಮ್ಮ ಆತ್ಮೀಯ ಸೈನಿಕರು ಜಾಗರೂಕರಾಗಿದ್ದಾರೆ. ಅವರಿಗೆ ನಾವುಗಳು ಉತ್ತಮ ಪ್ರಜೆಗಳಾಗಿ ಸಮ್ಮಾನ ನೀಡೋಣ. ಅವರ ಕುಟುಂಬಗಳಿಗೆ ನಮ್ಮ, ಹಾಗೂ ಸರ್ಕಾರದ ಮೆಚ್ಚುಗೆ, ಬೆಂಬಲ ಖಂಡಿತವಾಗಿಯೂ ಇದೆ. 


ಸ್ವಾತಂತ್ರ ದಿನಾಚರಣೆಯೆಂದು ನಮ್ಮ ದೇಶಕ್ಕಾಗಿ ಹೋರಾಡಿದ ಹುತಾತ್ಮರಿಗೆ ವಂದನೆ ಸಲ್ಲಿಸಲೇಬೇಕು. ಆತ್ಮನಿರ್ಭರ್ ಭಾರತ ದೇಶವನ್ನು ಪರಿವರ್ತಿಸಲು ಸರ್ಕಾರ ಅನೇಕ ಆದೇಶಗಳನ್ನು ರೂಪಿಸಿಕೊಂಡಿದೆ. ಬಡವರಿಗೆ, ಅನಾಥರಿಗೆ, ನಿರುದ್ಯೋಗಿಗಳಿಗೆ ಕೆಲಸ, ಇತ್ಯಾದಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ. 

ಪ್ರಜೆಗಳ, ಒಳಿತು ದೇಶದ ಲಾಂಛನ. 


ನಮ್ಮ ಹುಟ್ಟು, ಸಾವಿನ ನಡುವೆ ಕಳೆಯುವ ಅನೇಕ ಘಟನೆಗಳು ನಮ್ಮ ಮುಂದಿನ ಪೀಳಿಗೆಗೆ ನಾಂದಿಯಾಗಲಿ.. 

ನನ್ನ ದೇಶ ಭಾರತ

ನನ್ನ ದೇಶ ಮಹಾನ್

ನನ್ನ ಪ್ರಜೆಗಳ ಬಂದುಬಳಗ.. 


ಜೈ ಹಿಂದ್


Rate this content
Log in

Similar kannada story from Action