nagavara murali

Classics Inspirational Others

3.4  

nagavara murali

Classics Inspirational Others

ನಂಬಿದರೆ ನಂಬಿ

ನಂಬಿದರೆ ನಂಬಿ

2 mins
281


...........


ನಟರಾಜನ್ ನಿವ್ರುತ್ತ ನ್ಯಾಯಾದೀಶರು .ಪತ್ನಿ ಮಾಣಿಕ್ಯ ಮ್.ಮಕ್ಕಳಿಲ್ಲದ ಕೊರಗು ಇಬ್ಬರನ್ನೂ ಕಾಡಿತ್ತು. ಯಾರದೋ ಮಗುವನ್ನ ತಂದು ಸಾಕಲು ಇವರಿಗೆ ಇಷ್ಟವಾಗಲಿಲ್ಲ. ಇಬ್ಬರೂ ಅತೀವ ದೈವ ಭಕ್ತರು .ತಮ್ಮ ಎಲ್ಲಾ ಆಸ್ತಿಯನ್ನೂ ಅವರು ನಂಬಿದ ಕಂಚಿಕಾಮ ಕೋಟಿ ಮಠಕ್ಕೆ ದಾನಮಾಡಿ ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತಾ ಕಾಲ ಕಳೆಯುತ್ತಿದ್ದು ನಿವೃತ್ತಿಯ ನಂತರ ಆಗಿನ ಬೊಂಬಾಯಿ ನಲ್ಲಿ ನೆಲೆಸಿದ್ದರು. ಒಮ್ಮೆ ಸಾತೂರ್ ಹತ್ತಿರ ಒಂದು ಹಳ್ಳಿಗೆ ಕಂಚಿ ಮಹಾಸ್ವಾಮಿಗಳು ಬಂದಿದ್ದಾರೆಂಬ ವಿಷಯ ತಿಳಿದು ಇಬ್ಬರೂ ಅಲ್ಲಿಗೆ ಹೊರಟರು.ಸಾತೂರ್ ಗೆ ಬಂದಾಗ ರಾತ್ರಿ ಹತ್ತು ಗಂಟೆ. ಅಲ್ಲಿಂದ ಅವರಿದ್ದ ಸ್ಥಳಕ್ಕೆ ಸುಮಾರು ಹತ್ತು ಕಿ.ಮೀಟ ರ್ .ಅಷ್ಟು ಹೊತ್ತಿನಲ್ಲಿ ಬೇರೆ ಯಾವ ವಾಹನ ಸೌಕರ್ಯವೂ ಇರಲಿಲ್ಲ.

ಅಲ್ಲೇ ಉಳಿದುಕೊಳ್ಳುವುದಕ್ಕೂ ವ್ಯವಸ್ಥೆ ಇರಲಿಲ್ಲ. ಏನು ಮಾಡಬೇಕೆಂದು ಹೊಳೆಯದೇ ಹೆದರಿ ಬಸ್ ಸ್ಟಾಂಡ್ ನಲ್ಲಿ ಇವರಿಬ್ಬರೇ ನಿಂತಿದ್ದಾಗ ಒಂದು ಆಟೋ ಬಂತು. ಡ್ರೈವರ್ ಕೆಳಗಿಳಿದು ಬಂದು ಕೇಳಿದಾಗ ಸ್ವಾಮಿಗಳು ಇರುವ ಸ್ಥಳಕ್ಕೆ ಹೋಗಬೇಕೆಂದಾಗ ಅಲ್ಲಿಯವರೆಗೂ 

ನಾನು ಹೋಗಲ್ಲ. ಆದರೆ ವಯಸ್ಸಾದವರು ಪಾಪ ಇಬ್ಬರೇ ಇದ್ದೀರಿ ನಿಮ್ಮನ್ನು ಅಲ್ಲಿ ಬಿಟ್ಟು ಹಿಂದಕ್ಕೆ ಬರು ತ್ತೇನೆ ಅಂದ. ಒಂದುಕಡೆ ಹೇಗಾದರೂ ತಲುಪ ಬಹು ದೆಂಬ ಆಸೆ ಮತ್ತೊಂದು ಕಡೆ ಇವನನ್ನ ಹೇಗೆ ನಂಬು ವುದು ಎನ್ನುವ ಭಯ. ಹೇಗೋ ದೇವರನ್ನು ನೆನೆದು ಆಟೋ ಹತ್ತಿದರು.ಸ್ವಲ್ಪ ದೂರ ಹೋದ ಮೇಲೆ ರಸ್ತೆ ದೀಪಗಳೂ ಇಲ್ಲ. ದೂರದಲ್ಲಿ ಆಗ ಅಲ್ಲಿ ಕಾಣುತ್ತಿದ್ದ ಮನೆಗಳೂ ಇಲ್ಲ. ಇವನ ಆಟೋ ಮುಂದಿನ ದೀಪದ ಬೆಳಕು ಬಿಟ್ಟರೆ ಬರೀ ಕತ್ತಲು.ನಟರಾಜನ್ ಡ್ರೈವರ್ ಹತ್ತಿರ ಅವನ ಬಗ್ಗೆ ತಿಳಿದು ಕೊಳ್ಳಲು ಮಾತನಾಡಿ ಸುತ್ತಲೇ ಇದ್ದರು . ಮಾಣಿಕ್ಯಮ್ ಮಾತ್ರ ದೇವರ ಧ್ಯಾನ ಮಾಡ್ತಿದ್ರು.ಗಕ್ಕನೆ ಆಟೊ ನಿಂತಾಗ ಇಬ್ಬರೂ ಹೆದರಿ ಏನಾಯ್ತು ಅಂದರು. ಮಾತಾಡದೆ ಇಳಿದು ಹಿಂದೆ ಬಗ್ಗಿ ನೋಡಿದ. ಬೆಂಕಿ ಕಡ್ಡಿ ಗೀರಿ ನೋಡಿ ಏನೂ ಮಾತ ನಾಡದೆ ಹಿಂದೆ ಇದ್ದ ಸ್ಟೆಪ್ನಿ ತೆಗೆದಾಗಲೇ ಗೊತ್ತಾಗಿದ್ದು ಪಂಚರ್ ಆಗಿದೆ ಅಂತ.ಇವರ ಬಳಿ ಇದ್ದ ಟಾರ್ಚ್ ಕೊಟ್ಟಾಗ ಅವನಿಗೆ ಸಂತೋಷ ಆಯಿತು. ಹತ್ತು ನಿಮಿಷದಲ್ಲಿ ಬದಲಾಯಿಸಿ ಹೇಳಿದ ಇವತ್ತು ನಿಮ್ಮ ಅದ್ರುಷ್ಟ ಚೆನ್ನಾಗಿದೆ. ನಾನು ಟೈರ್ ಪಂಚರ್ ಹಾಕಲು ಅಂಗಡಿಗೆ ಕೊಟ್ಟು ಒಂದು ತಿಂಗಳಾದರೂ ಆಕಡೆ ಹೋಗದೆ ತೆಗೆದುಕೊಂಡಿರಲಿಲ್ಲ. ಈಗ ಬರೋವಾಗ ಯಾರೋ ಒಬ್ಬ ವಯಸ್ಸಾದ ಸಂನ್ಯಾಸಿ ಅದೇ ಜಾಗಕ್ಕೆ ಹೋಗ ಬೇಕೆಂದಾಗ ದೂರ ಆದರೂ ಹೋದೆ. ಹಾಗೇ ಟೈರ್ ತೆಗೆದು ಕೊಂಡು ಬಂದೆ.ಇಲ್ಲದಿದ್ದರೆ ಈ ಕಾಡಲ್ಲಿ ಏನು ಮಾಡೋದು ಅಂದಾಗ ಆ ಸಂನ್ಯಾಸಿ ಗೆ ಮನ ದಲ್ಲೇ ವಂದಿಸಿದರು. ಈಗ ಡ್ರೈವರ್ ಒಳ್ಳೆಯವನೇ ಅಂತ ಸ್ವಲ್ಪ ನಂಬಿಕೆ ಬಂತು‌ . ದೂರದಲ್ಲಿ ದೊಡ್ಡ ಸರ್ಚ್ ಲೈಟ್ ಕಂಡು ಅದೇನಾ ಅಂತ ಕೇಳಿದರು. ಹೌದು ಅರ್ಧ ಗಂಟೆ ಬೇಕು ಅಲ್ಲಿಗೆ ಹೋಗಕ್ಕೆ ಅಂದ ಈಗ ಧೈರ್ಯ ಬಂದು ಹೆಂಡತಿಗೆ ನೋಡು ಅದೇ ಅಂತ ತೋರಿಸಿದರು. ಅದು ವರೆಗೂ ಮಾತನಾಡದವರು ಎಲ್ಲಾ ಸ್ವಾಮಿಗಳ ಕರುಣೆ ಅಂದರು. ಹೇಗೋ ತಲುಪಿ ಅಂದು ರಾತ್ರಿ ಬಂದು ಮಲ ಗಿದರು. ಬೆಳಗಿನ ಜಾವ ಮೊದಲು ಸ್ವಾಮಿಗಳ ದರ್ಶನ ಮಾಡೋದಕ್ಕಾಗಿ ನೋಡಿದರೆ ಇವರ ಊಹೆಗೂ ಮೀರಿ ದ ಜನವೋ ಜನ.

ರಾತ್ರಿ ಏನೂ ತಿಂದಿಲ್ಲ ಹಸಿವು.ಇಲ್ಲೇ ಎಲ್ಲಾದರೂ. ಕಾಫೀ ಸಿಕ್ಕಿದರೆ ಕುಡಿದು ಬರ್ತೀನಿ ಇಲ್ಲೇ ಇರು ಅಂತ ಪತ್ನಿಗೆ ಹೇಳಿ ಹೊರಟರು. ಎದುರಿಗೆ ಸ್ನಾನ ಮುಗಿಸಿ ಸ್ವಾಮಿಗಳು ಬರ್ತಾ ಇರೋದನ್ನ ಕಂಡು ಎಲ್ಲರಂತೆ ಪಕ್ಕಕ್ಕೆ ನಿಂತರು. ಹತ್ತಿರ ಬಂದು ರಾತ್ರಿ ಬರೋದಕ್ಕೆ ಕಷ್ಟ ಆಯ್ತಾ ಅಂತ ಕೇಳಿ  ಅವರ ಪಕ್ಕದಲ್ಲಿ ಇದ್ದ ಶ್ರೀ ಕಂಠನ್ ಅನ್ನುವವರಿಗೆ ಹೇಳಿದರು. ಇವನು ಬೊಂಬಾಯಿ ಇಂದ ಕಷ್ಟ ಪಟ್ಟು ಪತ್ನಿ ಸಮೇತ ಬಂದಿದಾನೆ. ರಾತ್ರಿ ಊಟ ಮಾಡಿಲ್ಲ. ಇದು ಆಡಿಮಾಸ ಬೇರೆ ಆದ್ದರಿಂದ ತಿಂಡಿ ಊಟ ಎಲ್ಲಾ ಹತ್ತು ಗಂಟೆ ಮೇಲೆ .ಇವನು ಒಬ್ಬನಿಗೆ ಏನಾದರೂ ಏರ್ಪಾಟು ಮಾಡಿ. ದಿನಾ ಏಳೂವರೆಗೆ ತಿಂಡಿ ತಿನ್ನದಿದ್ದರೆ ಇವನಿಗೆ ಆಗಲ್ಲ ಹೌದು ತಾನೇ ಅಂತ ಹೇಳಿ ಸರಸರನೆನಕ್ಕು ಹೊ ರಟೇ ಹೋದರು. ಒಂದು ಕ್ಷಣ ಕನಸೋ ನಿಜವೋ ನಂಬದಾದರು. ಅದಕ್ಕೆ ಕಾರಣ ಅವರ ದರ್ಶನ ಮಾಡಿ ಹತ್ತು ವರ್ಷ ಆಗಿತ್ತು. ಹಿಂದಿನ ರಾತ್ರಿ ಬಂದದ್ದು ಇಲ್ಲಿ ಯಾರಿಗೂ ಹೇಳಿರಲಿಲ್ಲ.

ನಟರಾಜನ್ ಗೆ ಹೇಗೆ ಇದೆಲ್ಲಾ ಇವರಿಗೆ ಗೊತ್ತಾಯ್ತು ಅನ್ನೋದೇ ಆಶ್ಚರ್ಯ.ಇದನ್ನು ಓಡಿ ಹೋಗಿ ಹೆಂಡತಿಗೆ ಹೇಳಿದರು.ಅವರಿಗಂತೂ ಕೇಳಿ ಕುಣಿದಾಡುವಷ್ಟು ಸಂತೋಷ. ಬೊಂಬಾಯಿಂದ ಬಂದಿರುವ ನಟರಾಜನ್ ದಂಪತಿಗಳು ಎಲ್ಲಿದ್ದರೂ ಇಲ್ಲಿ ಬರಬೇಕು ಅಂತ ಮೈಕ್ ನಲ್ಲಿ ಹೇಳಿದ್ದು ಕೇಳಿ ಸಂತೋಷ ದಿಂದ ಅಲ್ಲಿಗೆ ಇಬ್ಬರೂ ಧಾವಿಸಿದರು.ಇವರಿಗಾಗಿ ಬಿಸಿ ಬಿಸಿ ಪೊಂಗಲ್ ಕಾಫಿ ರೆಡಿಯಾಗಿತ್ತು. ಕಲಿಯುಗದಲ್ಲೂ ಹೀಗೆಲ್ಲಾ ಸಾಧ್ಯವೇ ಅನ್ನೋದೇ ಇಂದಿಗೂ ನಂಬದವರ ಪ್ರಶ್ನೆಯಾಗಿ ಉಳಿದಿದೆ.



Rate this content
Log in

Similar kannada story from Classics