ನಮ್ಮ ಹೆಮ್ಮೆ
ನಮ್ಮ ಹೆಮ್ಮೆ


ಭವ್ಯ ಭಾರತದ ಕನಸು ನನಸಾಗಲು ಕಳೆದ ಶತಮಾನಗಳು ಮರೆತರೆ ಬದುಕುಂಟೆ? ನಾನು ಬರಿ ನನಗಾಗಿಯೇ ಬದುಕಬೇಕೆನ್ನುವ ಹಂಬಲದ ಮನುಜನಿಗೆ ಬೇರಾವ ಚಿಂತೆಗಳು ಭಾಧಿಸಲು ಸಾಧ್ಯವಿಲ್ಲ.ಕಾರಣ ಸ್ವಾರ್ಥ ಅವನ ಬಿಂಬವಾಗಿರುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇಷ್ಟು ವರುಷಗಳಾದರೂ ನಮ್ಮಲ್ಲಿ ದೇಶಾಭಿಮಾನ ಜಾಗೃತವಾಗುವ ಹಂತದಲ್ಲಿರುವುದು.ನಮ್ಮ ದುರಂತವಲ್ಲವೇ....
ಸ್ವಾತಂತ್ರ್ಯದ ಅರ್ಥವೇನು? ನಮಗೇಕೆ ಸ್ವಾತಂತ್ರ್ಯ ಬೇಕು? ಅದೆಷ್ಟೋ ಯುವಕರಿಗೆ ಸ್ವಾತಂತ್ರ್ಯ ಯೋಧರ ಹೆಸರು ಗೊತ್ತಿ ಲ್ಲ.ಸ್ವಾತಂತ್ರ್ಯ ಅನ್ನೊದೆ ಮನಸೋಇಚ್ಛೆ ಇರಲೆಂದು ಭಾವಿಸಿ ದ್ದಾರೆ.ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಬಲಿದಾನ ವ್ಯರ್ಥ ಗೊಳಿಸುವ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವು ದು.ಹೊರದೇಶದವರು ನಮ್ಮ ಸಂಸ್ಕೃತಿಗಳಗಳನ್ನು ಕಲಿಯುತ್ತಿ ರುವುದು.ನಮ್ಮ ಮುಂದೆ ಉದಾ.ಗಳಾಗಿ ನಿಲ್ಲುತ್ತಿವೆ.
ಬ್ರಿಟಿಷ್ ರು ಬೆರಳೆಣಿಕೆಯಷ್ಟು ಮಾತ್ರವೇ ಇದ್ದು ನಮ್ಮ ದೇಶ ದಲ್ಲಿಯೇ ಇದ್ದು ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡು ಆಳಿದ್ದನ್ನು ಮರೆಯಲು ಸಾಧ್ಯವಿಲ್ಲ.ಅಂತಹ ವಿಷಮ ಪರಿಸ್ಥಿತಿ ಯಲ್ಲಿ ಧೈರ್ಯಗೆಡದೆ ಹಗಲು ರಾತ್ರಿ ಜೀವನ್ಮರಣಗಳ ಮಧ್ಯೆ ಮುಂದಿನ ಭಾರತದ ಉಜ್ವಲ ಭವಿಷ್ಯದ ಕನಸು ಕಂಡು ಸ್ವಾರ್ಥ ಬಯಸದೇ ಖುಷಿ ಖುಷಿಯಾಗಿ ನೇಣುಗಂಬಕೆ ಎರಿದವರ ಬಲಿದಾನ ಮರೆತರೇ ಜನ್ಮ ಪಾವನವಾದಿತೇ?
ಅಂದ ಮೇಲೆ ಸಾರ್ವಕಾಲಿಕವೂ ಭಾರತ ಇಡೀ ಪ್ರಪಂಚಕ್ಕೆ ಮಾದರಿಯಾದ ರಾಷ್ಟ್ರ.ಇಲ್ಲಿಯ ಸಂಪತ್ತು,ವಿದ್ವತ್ತು, ಸಂಸ್ಕಾರ ಗಳು ಪುನಃ ನಮ್ಮದಾಗಿರುವುದು ಸ್ವಾತಂತ್ರ್ಯ ನಮ್ಮ ಹೃದಯ ದಲ್ಲಿ ನೆಲೆ ನಿಂತಾಗ.ಹಾಗಿದ್ದ ಮೇಲೆ ನಾವು ಸ್ವಾತಂತ್ರ್ಯ ದ ಮಹತ್ವ ಅರಿಯಲು ಸಂವಿಧಾನವನ್ನು ಎಳೆಎಳೆಯಾಗಿ ಅಧ್ಯಯನ ಮಾಡಬೇಕು.ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ಅಮ್ಮ ಭಾರತಾಂಬೆಯ ಹೆಮ್ಮೆಯ ಪುತ್ರ..
ದೇಶ ಕಾಯ್ವ ಸೈನಿಕರಿಗೆ ಮಾತ್ರ ದೇಶ ಕಾಪಾಡುವ ಹೊಣೆಯಿಲ್ಲ.ಪೋಲೀಸರಿಗೆ ಮಾತ್ರ ಕಾನೂನು ಕಾಯ್ವ ಹೊಣೆಯಿಲ್ಲ.ದೇಶದ ಪ್ರತಿಯೊಬ್ಬರಿಗೂ ಜವಾಬ್ದಾರಿಯಿದೆ. ದೇಶ ಮುನ್ನಡೆಸುವ ಹೊಣೆ ನಮ್ಮದು.ರಾಷ್ಟ್ರೀಯ ಚಿಹ್ನೆಗಳನ್ನು ಸಂಕೇತಗಳನ್ನು,ಗಡಿಯಂಚನ್ಬು,ಸಮಯ ಒದಗಿದರೆ ಸೇವೆಗೂ ಸಿದ್ದರಿರಬೇಕು.ನಾವುಗಳು ಆತ್ಮಾಭಿಮಾನವನ್ನು ಹೆಚ್ಚಿಸಿಕೊಳ್ಳಲು,ಸ್ವಾವಲಂಬನೆಯ ಗುರಿ ಹೊತ್ತು,ಸಾಗುವತ್ತ ಸ್ವಾತಂತ್ರ್ಯದ ಮಧುರ ಭಾವ ನಮ್ಮ ತಲುಪಲು ಹವಣಿಸಿದಂತೆ ಕಾಣುತ್ತದೆ.
ಯುವ ಪಿಳಿಗೆ ಅರ್ಥೈಸಬೇಕಿದೆ.ಒಮ್ಮೆ ಪಡೆದ ಸ್ವಾತಂತ್ರ್ಯ ಶಾಶ್ವತವಾಗಿ ಇರಬೇಕೆಂದರೆ.ಅದನ್ನು ಉಳಿಸುವುದು, ಸಂರಕ್ಷಿಸುವ ಮಾರ್ಗ ತಿಳಿಯಬೇಕು.ಗಡಿಗಳಲ್ಲಾಗುವ ದುರಂತಗಳತ್ತ ಗಮನಹರಿಬೇಕು.ನಮ್ಮಲ್ಲೆ ಹುಟ್ಟತ್ತಿರುವ ಕೋಮುವಾದಗಳಿಗೆ ಪರಿಹಾರ ಕಂಡುಕೊಂಡು ಸ್ವಾತಂತ್ರ್ಯ ದ ಮಹತ್ವವನ್ನು ಅರಿಯಬೇಕು.ಸ್ವೇಚ್ಛೆಯಾಗಿ ಅನುಭವಿಸುವ ಸ್ವಾತಂತ್ರ್ಯವಂತು ನಮಗೆ ಸಿಕ್ಕಿಲ್ಲವೆಂಬ ಸತ್ಯ ಮನಗಾಣಬೇಕಿದೆ ಭಾರತೀಯರ ಮನವು ಕೊಡುಗೈದಾನಕ್ಕೆ ಹೆಸರುವಾಸಿ.ಒಮ್ಮೆ ಅನುಭವಿಸಿದ್ದು ಸಾಕು.ಮತ್ತೆ ಆ ನರಕಗಳು ಬೇಡ.
ಸ್ವಾತಂತ್ರ್ಯ ದ ಅನುಭವ ಎಲ್ಲರ ಮನದಲ್ಲೂ ಶಾಶ್ವತವಾಗಿ ನೆಲೆನಿಲ್ಲುವಂತೆ ಮಾಡುವುದು ನಮ್ಮ ಹೊಣೆ.ನಮ್ಮ ಜವಾಬ್ದಾರಿ. ನಮ್ಮ ದೇಶ ನಮ್ಮ ಹೆಮ್ಮೆ......