ನಮ್ಮ ಹೆಮ್ಮೆ
ನಮ್ಮ ಹೆಮ್ಮೆ


ನಾನು ಭಾರತೀಯನಾಗಿ ಹುಟ್ಟಿರುವುದೇ ಹೆಮ್ಮೆ. ನನ್ನ ದೇಶದ ಸಂಸ್ಕೃತಿ,ಸಂಸ್ಕಾರ, ಮಾನ,ಪ್ರಾಣ ಎಲ್ಲವೂ ನನ್ನ ಸರ್ವಸ್ವ. ನಾವೆಲ್ಲ ಸ್ವಾತಂತ್ರ್ಯ ಅನುಭವಿಸುವಂತೆ ಮಾಡಿರುವುದರ ಹಿಂದಿರುವ ಶಕ್ತಿಗಳು ಇಂದು,ನಮ್ಮ ರಕ್ಷೆಯಾಗಿ ನಿಂತಿರುವುದ ನ್ನು ಮರೆಯುವಂತಿಲ್ಲ.ಆದರೆ ಇಂದು ಸ್ವಾತಂತ್ರ್ಯದ ಅರ್ಥ ಪ್ರತಿಯೊಬ್ಬರಿಗೂ ಅರಿವಾಗುವುದು ಅನಿವಾರ್ಯ.ಕೇವಲ ಗಡಿ ಕಾಯ್ವ ಸೈನಿಕರಿಗೆ ಮಾತ್ರ ದೇಶ ರಕ್ಷಿಸುವ ಜವಾಬ್ದಾರಿ ಎಂದು ನಾವುಗಳು ಬೆಚ್ಚಗೆ ಮಲಗಿದರೆ ಆದಿತೇ?
ಕೊಂಚ ಆಲೋಚಿಸಬೇಕು.ನಾಡು,ನುಡಿಗಾಗಿ ಹಗಲಿರುಳು ಸೇವಾತತ್ಪರತೆಯನ್ನು ಹೊಂದಿದಾಗ ಮಾತ್ರ ನಾನು ಭಾರತೀಯ ಎಂದು ಎದೆತಟ್ಟಿ ಹೇಳಲು ಸಾಧ್ಯವಾಗುವುದು. ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಅಂದ್ರೆ ?
೧) ದೇಶದ ಪರ
ಂಪರೆಗೆ ದಕ್ಕೆ ತಂದು ಮನಸ್ಸಿಗೆ ಬಂದಂತೆ ಇರುವುದಲ್ಲ.
೨) ದೇಶದ್ರೋಹಿ ಕಾರ್ಯದಲ್ಲಿ ತೊಡಗುವುದು ಅಲ್ಲ.
೩) ದೇಶ ಅಭಿಮಾನ ಕ್ಕೆ ಭಂಗ ತರುವುದಲ್ಲ
೪) ರಾಷ್ಟ್ರ ಚಿಹ್ನೆಗಳಿಗೆ ಅಗೌರವ ತೋರುವುದಲ್ಲ
೫) ರಾಷ್ಟ್ರ ಸಂಪತ್ತನ್ನು ಮಾರಿಕೊಂಡು ಬದುಕುವುದಲ್ಲ.
೬) ದೇಶದ ಐಕ್ಯತೆಯನ್ನು ಹಾಳು ಗೇಡುವುದಲ್ಲ.
೭) ಮಾನ ,ಅಭಿಮಾನ ಉಳಿಸಲಾರದೇ ಬದುಕುವ ಯಾವೋಬ್ಬ ಭಾರತೀಯ ಈ ದೇಶದ ನಾಗರಿಕನಾಗಲಾರ.
ಹೀಗಾಗಿ ನಾವುಗಳು ಸ್ವಾತಂತ್ರ್ಯ ದೊರಕಿರುವುದು ಬಲಿದಾನಗಳಿಂದ ಎನ್ನುವುದನ್ನು ಅರಿತು,ದೇಶ ಇತಿಹಾಸವನ್ನ ,ಪರಂಪರೆಯನ್ನ ಮುಂದಿನ ಪಿಳಿಗೆಗೆ ಹಂಚಬೇಕು.ದೇಶ ಕಟ್ಟುವ ಕೆಲಸವಾಗಬೇಕೆ ವಿನಃ ಒಡೆಯುವ ಕೆಲಸವಾಗಬಾರದು.