STORYMIRROR

kaveri p u

Inspirational Others Children

4  

kaveri p u

Inspirational Others Children

ನಾನು ಯಾರು?

ನಾನು ಯಾರು?

1 min
397


ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್

ನಾನು ಯಾರು ಗೊತ್ತಾ?


ನಾನೊಬ್ಬ ಗೃಹಿಣಿ ಈಗೀಗ ಸ್ಟೋರಿ ಮೀರರ್ಗೆ ಚುಟುಕ ಕಥೆಗಳನ್ನು ಬರೆಯುತ್ತಿದ್ದೇನೆ.


ಹೇಗೆ ಬರಿಯುತ್ತೇನೆ ಎಂಬುದನ್ನು ನೀವು ಹೇಳಿ.


ನಾವು ಇರುವ ಸಮಾಜ ನಮ್ಮ ಇರುವಿಕೆಯನ್ನ ತೋರಿಸುತ್ತೆ. ನಾವು ಅಷ್ಟಾಗಿ ಅನುಕೂಲಸ್ಥರಲ್ಲಾ ಆದ್ರೆ ಸ್ವಲ್ಪ ಮಟ್ಟಿಗೆ ನನ್ನ ಕೈಲಾದಷ್ಟು ಸಹಾಯ ಮಾಡಲು ಶಕ್ತಿಯಿದೆ, ಮಾಡಬೇಕೆನ್ನುವ ಮನಸ್ಸೂ ಇದೆ. ಈಗ ಕೆಲ ತಿಂಗಳಿಂದ ನಾನು ಸ್ಟೋರಿ ಮಿರರ್ ವೇದಿಕೆಗೆ ಸೇರಿಕೊಂಡಿದ್ದೇನೆ. ನಾನು ಸಹ ಈಗ ಈ ವೇದಿಕೆಯ ಒಬ್ಬ ಸದಸ್ಯಳು ಎನ್ನಲು ನನಗೆ ನಿಜಕ್ಕೂ ಹೆಮ್ಮೆ ಇದೆ.

ಈಗ ಇರುವ ನಾನು ಕೆಲ ತಿಂಗಳ ಹಿಂದೆ ಸಾವಿನ ಕದ ತಟ್ಟಲು ಹೋದವಳು. ದೇವರ ಅನುಗ್ರಹ ನನ್ನ ಮೇಲಿತ್ತು ಅನಿಸುತ್ತದೆ, ಬದುಕಿ ಬಂದೆ. ನಾನು ಇರುವ ಸಮಯದಲ್ಲಿ ನನಗೆ ರಕ್ತ ಕೊಟ್ಟು ಉಳಿಸಿದ ನನ್ನ ಅಣ್ಣಂದಿರನ್ನ ಈಗ ನೆನಸುತ್ತೇನೆ. ಅವರು ಇರುವಿಕೆಯಿಂದ ಆ ದಿನ ನಾನು ಮತ್ತೆ ಹುಟ್ಟಿ ಬಂದೆ. ನಾನು ಈಗ ನನ್ನ ಕುಟುಂಬದ ಹೊಣೆಗಾರಿಕೆ ಹೊತ್ತು ಒಂದೀಡಿ ಮನೆಯನ್ನೇ ನಡೆಸಬಲ್ಲೆ, ಎನ್ನುವ ಆತ್ಮಸ್ಥೈರ್ಯ ಹೊಂದಿದ್ದೇನೆ. ಹೇಗೆ ಖುಷಿಯಾಗಿ ಸಂಸಾರದ ಸಮತೋಲನ ಕಾಪಾಡಬೇಕು ಅನ್ನೋದನ್ನ ಮುಂದೆ ನೋಡಬೇಕು. ನನಗೆ ನಂಬಿಕೆ ಇದೆ. ನಾನು ಇರುವುದು ನನ್ನ ಮಕ್ಕಳು ಮುಂದೆ ದೊಡ್ಡ ಸಾಧನೆ ಮಾಡುತ್ತಾರೆ ಮತ್ತು ನಾನದನ್ನು ನೋಡಲೆಂದು.. ನನ್ನ ಇರುವಿಕೆ ತುಂಬಾ ಅಗತ್ಯ. ಸಾಯುವುದು ನಮ್ಮ ಕೈಲಿಲ್ಲ, ಸಾವು ಬರುವ ಮೊದಲೇ ಅದರತ್ತ ಯೋಚನೆ ಮಾಡುವುದು ಹೇಡಿಗಳ ಲಕ್ಷಣ ಎಂದು ಗೊತ್ತಿದೆ. 

ನಾನು ಈ ವೇದಿಕೆಯ ಹೊಸ ಬರಹಗಾರ್ತಿ, ನನ್ನ ಹೆಸರು ಕಾವೇರಿ ಎಂದು.


ಕನ್ನಡದ ಜೀವನದಿ ಸಾವಿರ ಜನರಿಗೆ ತಂಪಾಗುವಂತೆ, ನಾನು ಸಹ ನಾಲ್ಕು ಜನರಿಗೆ ನೆರವಾಗಿ, ಅವರಿಗೆ ತಂಪು ನೀಯಲು ಬಯಸುತ್ತೇನೆ.


Rate this content
Log in

Similar kannada story from Inspirational