ಮನದಂತೆ ಮಾರ್ಗ
ಮನದಂತೆ ಮಾರ್ಗ
ಬಹಳ ವರ್ಷಗಳ ಹಿಂದೆ ಇಬ್ಬರು ವರ್ತಕರು ಬೇರೆ ಊರಿಗೆ ವ್ಯಾಪಾರಕ್ಕಾಗಿ ಹೊರಟಿದ್ದರು. ಸಂಜೆಯಾದ ಕಾರಣ ರಾತ್ರಿ ತಂಗಲು ಸ್ವಲ್ಪ ದೂರದಲ್ಲಿದ್ದ ಒಂದು ಆಶ್ರಮಕ್ಕೆ ಬಂದು ಅಲ್ಲಿನ ಗುರುಗಳನ್ನ ಕಂಡು ಆಶ್ರಮದಲ್ಲಿ ತಂಗಲು ಅವಕಾಶ ಕೇಳಿದರು. ವಿಚಾರಿಸಲು ಅವರಲ್ಲಿ ಒಬ್ಬ ಚರ್ಮದ ವ್ಯಾಪಾರಿ ಎಂತಲೂ ಮತ್ತೊಬ್ಬ ಧಾನ್ಯದ ವ್ಯಾಪಾರಿ ಎಂತಲೂ ತಿಳಿಯಿತು. ಚರ್ಮದ ವ್ಯಾಪಾರಿಯನ್ನ ಬಾಗಿಲಲ್ಲೇ ಇದ್ದ ಜಗುಲಿಯ ಮೇಲೆ ಮಲಗಲು ಹೇಳಿ, ಧಾನ್ಯದ ವ್ಯಾಪಾರಿಯನ್ನ ಒಳಗೆ ಕರೆದು ಒಳ್ಳೆಯ ಆತಿಥ್ಯಮಾಡಿ ಮಲಗಿಕೊಳ್ಳಲು ತಿಳಿಸಿದರು. ಧಾನ್ಯದ ವ್ಯಾಪಾರಿಗೆ ಬಹಳ ಸಂತೋಷ ವಾಯ್ತು. ಬೆಳಗಾಯಿತು. ಇಬ್ಬರೂ ಎದ್ದು ಸಗಟು ವ್ಯಾಪಾರಿಯ ಹತ್ತಿರ ದವಸವನ್ನು ಮತ್ತು ಇನ್ನೊಬ್ಬ ಚರ್ಮವನ್ನು ತಂದರು. ಇಂದು ರಾತ್ರಿ ಚರ್ಮದ ವ್ಯಾಪಾರಿಯನ್ನ ಒಳಗೆ ಕರೆದು ಒಳ್ಳೆಯ ಆತಿಥ್ಯ ನೀಡಿ ಮತ್ತೊಬ್ಬನಿಗೆ ಹೊರಗಡೆ ಮಲಗಲು ಹೇಳಿದರು. ಚರ್ಮದ ವ್ಯಾಪಾರಿಗೆ ಆಗ ಬೇಜಾರಾಗಲಿ ಈಗ ಸಂತಸವಾಗಲಿ ಆಗಲಿಲ್ಲ. ಅವನ ಮನಸ್ಥಿಥಿ ಒಂದೇ ರೀತಿ ಇತ್ತು. ಮನಸು ತಡೆಯಲಾಗದೆ ದವ
ಸದ ವ್ಯಾಪಾರಿ ಗುರುಗಳನ್ನ ಕಾರಣ ಕೇಳಿದ. ಅದಕ್ಕವರು ಹೇಳಿದ್ದು. ನೋಡಿ ನಿನ್ನೆ ನೀವು ಬಂದಾಗ ನಿಮ್ಮ ಮನದ ಭಾವನೆಗಳು ಭಿನ್ನವಾಗಿತ್ತು ಧಾನ್ಯದ ವ್ಯಾಪಾರಿಯಾದ ನಿನ್ನ ಮನದಲ್ಲಿ ಇದ್ದದ್ದು ಮಳೆ ಬೆಳೆ ಹೆಚ್ಚಾಗಲಿ ದವಸ ಧಾನ್ಯ ಹೆಚ್ಚು ಬೆಳೆಯಲಿ ಕಡಿಮೆ ಬೆಲೆಗೆ ನನಗೆ ದೊರೆಯಲಿ ಎಂದು. ಆದರೆ ಇಂದು ನಿನ್ನಲ್ಲಿ ವಸ್ತು ಇರೋವಾಗ ಮಳೆಬಾರದೇ ಧಾನ್ಯಗಳು ಜನಕ್ಕೆ ಸಿಗದಿರಲಿ ನಾನು ಹೆಚ್ಚು ಬೆಲೆಗೆ ಮಾರಿ ಹಣ ಸಂಪಾದನೆ ಮಾಡಬಹುದು ಎಂದು. ಆದರೆ ಇದಕ್ಕೆ ವಿರುದ್ಧವಾಗಿ ಈ ಚರ್ಮದ ವ್ಯಾಪಾರಿ ನಿನ್ನೆ ಮಳೆ ಬೆಳೆ ಆಗದೆ ದನ ಕರುಗಳಿಗೆ ನೀರು ಸಿಗದೆ ಹೋಗಲಿ. ಕಡಿಮೆ ಬೆಲೆಗೆ ಮಾರಿಬಿಟ್ಟರೆ ಹೆಚ್ಚು ಲಾಭ ಬರುತ್ತೆ ಅಂತ ಅವನ ಮನಸು ಇತ್ತು. ಅದಕ್ಕೆ ಅವನಿಗೆ ಹೊರಗೆ ಮಲಗಲು ಹೇಳಿದೆ. ಆದರೆ ಇಂದು ಮಳೆಬೆಳೆ ಆಗಿ ದನಕರುಗಳಿಗೆ ಮೇವು ಸಿಗಲಿ. ಜನರ ಕೈಲಿ ಹೆಚ್ಚುಹಣ ಇದ್ದರೆ ಹೆಚ್ಚುಬೆಲೆ ಕೊಟ್ಟು ಕೊಳ್ಳುತ್ತಾರೆ ಹೆಚ್ಚು ಲಾಭ ಬರುತ್ತೆ ಅಂತ ಯೋಚಿಸಿದ ಅದಕ್ಕೆ ಒಳಗೆ ಕರೆದೆ ಎಂದರು. ಆಗ ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡು ಸುಮ್ಮನಾದರು.