ಮಳೆ.....
ಮಳೆ.....
ಗಂಡ ಹೆಂಡತಿ ಇಬ್ಬರೂ ತದ್ವಿರುದ್ಧ. ಗಂಡನ ಮಾತು ಸೋನೆ ಮಳೆಯಂತೆ. ಅಳೆದು ತೂಗಿ ಮಾತಾಡುವವ. ಹೆಂಡತಿಯ ಮಾತು ಜಡಿ ಮಳೆಯಂತೆ. ಶುರುವಾದರೆ ನಿಲ್ಲುವುದಿಲ್ಲ..!! ಆದರೂ ಮಿಂಚು ಗುಡುಗು ಸಹಿತ ಜಗಳಗಳು ಆಗಾಗ ಇವರ ಜೀವನದಲ್ಲೂ ಆಗುತ್ತಿತ್ತು. ಇವರ ಹೆತ್ತವರು ಇವರಿಬ್ಬರನ್ನು "ಹೇಗಪ್ಪಾ ಸರಿ ಮಾಡುವುದು..?" ಎಂದು ಸದಾ ಯೋಚಿಸುತ್ತಿದ್ದರು. ಅಂತೂ ಈ ತೊಂದರೆಗೆ ಪರಿಹಾರ ಸಿಕ್ಕಿತು. ಆಗಸದಲ್ಲಿ ಮೂಡುವ ವರ್ಣಮಯ ಕಾಮನಬಿಲ್ಲಿನಂತೆ, ಇವರ ಬಾಳಲ್ಲೂ ಒಂದು ಸುಂದರವಾದ ಹೆಣ್ಣು ಮಗುವಿನ ಜನನವಾಯಿತು. ಅದರ ಪಾಲನೆ ಪೋಷಣೆಗಳ ನಡುವೆ ಇವರ ಮುನಿಸು, ಜಗಳಗಳು ಕ್ರಮೇಣ ಕಡಿಮೆಯಾಯಿತು..!!
