ಮೇಲ್ ಐ. ಡಿ
ಮೇಲ್ ಐ. ಡಿ




ಇದು ಆಂಧ್ರ ಪ್ರದೇಶ ದ ಹೈದರಾಬಾದ್ ನಲ್ಲಿ ನಡೆದ ಒಂದು ಘಟನೆ ಅಂತ ಕೇಳಿದ್ದೇನೆ.ಆದಿತ್ಯ ರೆಡ್ಡಿ ಎನ್ನುವ ಒಬ್ಬ ಇಪ್ಪತ್ತೈದು ವರ್ಷ ವಯಸ್ಸಿನ ಹುಡುಗ ಬಹಳ ಬುದ್ಧಿವಂತ .ಅವನ ಮನೆಯ ಲ್ಲಿ ಕಾಲೇಜು ಮೆಟ್ಟಿಲು ಹತ್ತಿದವನೆಂದರೆ ಇವನೊಬ್ಬನೇ. ಅದಕ್ಕೆ ಕಾರಣ ಬಡತನ ಆದಿತ್ಯ ಸೂಕ್ಷ್ಮಮತಿ.ಚಿಕ್ಕವನಿದ್ದಾಗಿನಿಂದಲೂ ಯಾವುದೇ ವಿಷಯದಲ್ಲಾದರೂ ಆಳವಾಗಿ ಅಭ್ಯಾಸ ಮಾಡಿ ತಿಳಿದು ಕೊಳ್ಳುವ ಕುತೂಹಲ. ಇವನಿಗೆ ಸ್ನೇಹಿತರು ಬಹಳ ಕಡಿಮೆ. ಮೊದಲಿಂದಲೂ ಪುಸ್ತಕಗಳೇ ಇವನ ಗೆಳೆಯರು.
ಇಂಜನೀಯರಿಂಗ್ ಮುಗಿಸಿ ಕೆಲಸ ಹುಡುಕುತ್ತಿರುವಾಗ ಇವನಿಗೆ ಒಂದು ವಿದೇಶಿ ಕಂಪನಿಯಲ್ಲಿ ಹೊಸದಾಗಿ ಇಂಜಿನಿಯರಿಂಗ್ ಮುಗಿಸಿದ ವಿಧ್ಯಾರ್ಥಿಗಳಿಗೆ ಇಲ್ಲಿ ಮೂರು ನಾಲ್ಕು ದಿನದಿಂದ ಇಂಟರ್ವ್ಯೂ ಮಾಡ್ತಾ ಇರುವ ವಿಷಯ ತಿಳಿದು ಇಂಟರ್ವ್ಯೂ ಗೆ ಹೋಗಿದ್ದ. ಕೇಳಿದ ಎಲ್ಲಾ ತಾಂತ್ರಿಕ ಪ್ರಶ್ನೆಗಳಿಗೂ ಅಚ್ಚರಿ ಪಡು ವಂತೆ ಉತ್ತರ ಕೊಟ್ಟ. ಮೂರು ಸುತ್ತು ಪರೀಕ್ಷೆ ಯಲ್ಲೂ ಇವ ನಿಗೇ ಅತಿ ಹೆಚ್ಚು ಅಂಕ. ಎಷ್ಟು ಸಂಬಳ ನಿರೀಕ್ಷೆ ಮಾಡ್ತೀಯೆ ಎಂದು ಕೇಳಿದಾಗ ಅವನಿಂದ ಉತ್ತರ ಬರಲಿಲ್ಲ. ಸಂಬಳ ಇಲ್ಲದೆ ಕೆಲಸ ಮಾಡ್ತೀಯ ಅಂತ ನಗುತ್ತಾ ಅವರಲ್ಲಿ ಒಬ್ಬರು ಕೇಳಿ ದಾಗ ,ಆಗಬಹುದು ನನಗೆ ಅನುಭವ ಮುಖ್ಯ .ಅನುಭವ ಇಲ್ಲದೇ ಸಂಬಳ ನಾನು ಕೇಳುವುದಕ್ಕಿಂತಲೂ ನೀವು ಎಷ್ಟು ಕೊಟ್ಟರೂ ಒಪ್ಪುತ್ತೇನೆ ಎಂದಾಗ ಅಲ್ಲಿದ್ದವರೆಲ್ಲರೂ ಇವನ ಉತ್ತರವನ್ನ ಚಪ್ಪಾಳೆ ತಟ್ಟಿ ಸ್ವಾಗತಿಸಿ ನಿನ್ನ ಇ ಮೇಲ್ ಐಡಿ ಹೊರಗಡೆ ಕಛೇರಿಯಲ್ಲಿ ಕೊಟ್ಟು ಹೋಗು ಆಫರ್ ಲೆಟರ್ ಕಳುಹಿಸಿ ಕೊಡುತ್ತೇವೆ ಎಂದರು . ಕಛೇರಿಗೆ ಬಂದಾಗ .ಅಲ್ಲಿ ಒಬ್ಬರು ನೀನು ಅಪ್ಲಿಕೇಶನ್ ನಲ್ಲಿ ನಿನ್ನ ಮೇಲ್ ಐಡಿ ಬರೆದಿಲ್ಲ.
ಈಗಲಾದರೂ ಬರಿ ಅಂದಾಗ ಇಲ್ಲ ಅಂದ .ಆಶ್ಚರ್ಯವಾಗಿ ಇಷ್ಟು ಬುದ್ಧಿ ವಂತ ಹುಡುಗ ಒಂದು ಇ ಮೇಲ್ ಐ ಡಿ ಇಲ್ಲ ಅಂತೀಯಲ್ಲ . ಸಾರಿ ನಾವೇನೂ ಮಾಡಕ್ಕಾಗಲ್ಲ ಅಂದು ಬಿಟ್ಟರು.
ಅಲ್ಲಿದ್ದವರು ಯಾರೋ ಸೈಬರ್ ನೆಟ್ ಗೆ ಹೋಗಿ ಮಾಡಿಸಿ ತಂದು ಕೊಡು ಅಂದಾಗ ಹೊರಗೆ ಹೋದ .ಸುಮಾರು ಒಂದು ಗಂಟೆ ಸಮಯದ ನಂತರ ಬಂದು ನೋಡಿದರೆ ಮೊದಲು ಇದ್ದವರು ಯಾರೂ ಇಲ್ಲ. ವಿಚಾರಿಸಲು ತಿಳಿದದ್ದು ಅವರೆಲ್ಲರೂ ಮತ್ತೊಂದು ಕಾಲೇಜಿನಲ್ಲಿ ಇಂಟರ್ ವ್ಯೂ ಮಾಡಲು ಹೊರಟು ಹೋದರು ಎಂದು. ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗಾ. ಯ್ತು. ಬೇಸರದಿಂದ ಹೊರ ಬಂದ. ಅಲ್ಲಿ ಒಬ್ಬ ರಸ್ತೆ ಪಕ್ಕದ ಲ್ಲಿ ಟೊಮೆಟೊ ಮಾರುತ್ತಿದ್ದ .ಕುತೂಹಲದಿಂದ ಅವನ ಹತ್ತಿರ ಮಾತನಾಡುವಾಗ ಹತ್ತು ರೂಪಾಯಿ ಕೊಟ್ಟು ತಂದರೆ ಐದು ರೂಪಾಯಿ ಲಾಭ ಸಂಪಾದನೆ ಮಾಡಬಹುದೆಂದುತಿಳಿದ .ಅವನ ಹತ್ತಿರ ಇದ್ದ ಹತ್ತು ರೂಪಾಯಿಗೆ ಸ್ವಲ್ಪ ದೂರದಲ್ಲಿ ಇದ್ದ ದೊಡ್ಡ ಅಂಗಡಿಯಲ್ಲಿ ಖರೀದಿಸಿ ಹತ್ತು ನಿಮಿಷದಲ್ಲಿ ಹದಿನೈದು ರೂಪಾ ಯಿಗೆ ಮಾರಿಬಿಟ್ಟ. ಕುತೂಹಲ ಹೆಚ್ಚಾಗಿ ಕೆಲವೇ ದಿನಗಳಲ್ಲಿ ಹೆಚ್ಚು ಹೆಚ್ಚು ಲಾಭ ಗಳಿಸುತ್ತಾ ದೊಡ್ಡ ತರಕಾರಿ ವ್ಯಾಪಾರಿ ಆದ, ಒಂದು ದಿನ ಮನೆ ಬಾಗಿಲಿಗೇ ತರಕಾರಿ ತಲುಪಿಸುವ ಹೊಸ ಯೋಚನೆ ಹೊಳೆದಾಗ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಗಾಹಕ ರು ಖರೀದಿಸಲು ಮುಂದಾದರು. ಯಾರೂ ಅದರ ಬೆಲೆ ಬಗ್ಗೆ ತಲೆ ಕೆಡಿಸಿ ಕೊಳ್ಳುತ್ತಿರಲಿಲ್ಲ ವಾದರೂ ಒಳ್ಳೆಯ ತಾಜಾ ತರಕಾರಿ ಮನೆ ಬಾಗಿಲಿಗೆ ಬರುವುದು ಅವರಿಗೆ ಅನುಕೂಲವಾಗಿತ್ತು .ಒಂದು ದಿನ ಯಾರೋ ನಮಗೆ ಸಮಯದ ಅಭಾವ ನಾವುಇಬ್ಬರೂ ಇಡೀ ದಿನ ಹೊರಗಡೆ ಇದ್ದು ರಾತ್ರಿ ಅಡುಗೆ ಮಾಡ ಬೇಕು .ತರಕಾರಿ ಯನ್ನ ತೊಳೆದು ಹೆಚ್ಚಿ ಅದಕ್ಕಿಂತಲೂ ಮುಖ್ಯ ವಾಗಿ ರಾತ್ರಿ ಸಮಯ ಹುಳುಗಳಿದ್ದರೂ ಕಾಣದು. ನಮಗೆ ಕತ್ತರಿಸಿರುವ ತಕ್ಷಣ ಉಪಯೋಗಿಸುವ ಹಾಗೆ ಇರುವ ತರಕಾರಿ ಆದರೆ ಉತ್ತಮ ಎಂದು ಸಲಹೆ ಕೊಟ್ಟ ಕಾರಣ ಅದನ್ನೂ ಮಾಡಿದ .ಇದರಿಂದ ಮತ್ತಷ್ಟು ಹೊಸ ಗ್ರಾಹಕರು ಸೇರಿಕೊಂ ಡರು. ಹೋಟಲ್ ಕ್ಯಾಂಟೀನ್ ಗಳಿಗೆ ಇವನ ಕಂಪನಿಯದೇ ತರಕಾರಿ. ಒಂದು ಸಾವಿರ ಹುಡುಗರಿಗೆ ಕೆಲಸ ಕೊಟ್ಟು ಒಳ್ಳೆಯ ಹೆಸರು ಗಳಿಸಿದ. ಇವನ ಹಳ್ಳಿಯ ಎಲ್ಲರೂ ಇವನ ಕಂಪನಿಗೇ ತರಕಾರಿ ಬೆಳೆದು ಅವರೂ ಸಾಕಷ್ಟು ಹಣ ಗಳಿಸಿದರು.
ಒಂದು ದಿನ ಹೈದರಾಬಾದ್ ನ ಪ್ರತಿಷ್ಠಿತ ಹೋಟೆಲ್ ನವರುತರಕಾರಿಯನ್ನ ಇವನ ಕಂಪನಿಯಿಂದ ಖರೀದಿ ಮಾಡಲು ಬಯಸಿ ಬಂದಾಗ .ಇವನ ವಿಸಿಟಿಂಗ್ ಕಾರ್ಡ್ ಕೇಳಿ ಪಡೆದು ಅದರಲ್ಲಿ ಮೇಲ್ ಐಡಿ ಇಲ್ಲದಿರುವುದು ನೋಡಿ ಏನಿದು ನಿಮ್ಮ ಮೇಲ್ ಐಡಿ ಇಲ್ಲ ವೆಂದಾಗ ಹೇಳಿದ ಹೌದು ಮೇಲ್ ಐಡಿ ಇಲ್ಲ. ನಾನೂ ಒಬ್ಬ ಇಲೆಕ್ಟ್ರಾನಿಕ್ ಇಂಜನಿಯರ್.ಆದಿನ ನನ್ನ ಬಳಿ ಮೇಲ್ ಐ ಡಿ ಇದ್ದಿದ್ದರೆ ಎಲ್ಲರಂತೆ ಯಾವುದೋ ಒಂದು ಕಂಪನಿ ಯಲ್ಲಿ ದುಡಿತಾ ಇರುತ್ತಿದ್ದೆ ಅಂದಾಗ ಅವರಿಗೂ ಆಶ್ಚರ್ಯ.