STORYMIRROR

Jeevithashivaraj Jeevithashivaraj

Abstract Drama Inspirational

3  

Jeevithashivaraj Jeevithashivaraj

Abstract Drama Inspirational

ಇಲ್ಲೊಂದು ಪುಸ್ತಕ ಸ್ನೇಹ

ಇಲ್ಲೊಂದು ಪುಸ್ತಕ ಸ್ನೇಹ

2 mins
17

ನಾನ್ ಪ್ರತಿ ಸಲಿ ಬೇಜಾರ್ ಆದಾಗಲೂ ಮಾಡುವಂತಹ ಮೊದಲ ಕೆಲಸಾನೆ ಪುಸ್ತಕ ಹಿಡಿದು ಓದೋದು.

ನಮ್ಮ ಯಾವುದೇ ಕಷ್ಟಕ್ಕೆ ಅಥವಾ ಸುಖಕ್ಕೆ ಏನೇ ಸಮಸ್ಯೆ ಇದ್ರೂ ಅದಕ್ಕೆ ಪರಿಹಾರ ಉತ್ತರ ಎರಡು ಭಗವದ್ಗೀತೆ ರಾಮಾಯಣದಂತಹ ಮಹಾಕಾವ್ಯಗಳಲ್ಲಿದೆ.
ನಮ್ಮಗೆ ಬೇಜಾರಾದಾಗ ಪುಸ್ತಕ ಓದೋದ್ರಿಂದ ಅದರಲ್ಲಿರುವ ಪ್ರತಿ ಸಾಲುಗಳ ಅರ್ಥವನ್ನು ತಿಳ್ಕೊಂಡಾಗ, ನಮ್ಮ ಬೇಸರಕ್ಕೆ ಕಾರಣವಾದ ಯಾವುದೇ ಒಂದು ಸಂಗತಿಯಾಗಿದ್ರು ಉತ್ತರ ಪ್ರತಿಯೊಂದು ಪುಸ್ತಕದಲ್ಲೂ ಇದ್ದೇ ಇರುತ್ತೆ ಅನ್ನೋದು ನನ್ನ ಭಾವನೆ.

ಮೊದ್ಲೆಲ್ಲಾ ಊರುಗಳಲ್ಲಿ ಹರಿಕಥೆ ಅಂತ ಮಾಡ್ತಾ ಇದ್ರು. ರಾಮಾಯಣ ಮಹಾಭಾರತ ನಾಟಕಗಳ ಮುಖ್ಯೆನ ಎಲ್ಲರಿಗೂ ತಿಳಿಸಿ ಕೊಡ್ತಾ ಇದ್ರು. ಕಾಲಕ್ರಮೇಣ ಊರುಗಳಲ್ಲಿ ಹಳ್ಳಿಗಳಲ್ಲಿ ನಾಟಕ ಮಾಡುವಂತಹ ಪದ್ಧತಿ ಕಡಿಮೆ ಆಗ್ತಾ ಬಂದಿದೆ. ಹಾಗಾಗಿ ಪುಸ್ತಕಗಳನ್ನ ಪ್ರಕಟಿಸುವಲ್ಲಿ ನಮ್ಮ ಬರಹಗಾರರು ಜನಗಳಿಗೆ ಇದರ ಅರಿವು ಮೂಡಿಸಬೇಕು ಅಂತ ಹೇಳಿ ಸುಲಭವಾಗಿ ಕಡಿಮೆ ಬೆಲೆಯಲ್ಲಿ ಪ್ರತಿಯೊಂದು ಮನೇಲೂ ಜೀವನ ಚರಿತ್ರೆಯ ಯಶೋಗಾದೆಯ ಪುಸ್ತಕಗಳು ಇರ್ಲೇಬೇಕು. ಅನ್ನುವ ಕಾರಣಕ್ಕೆ ಮಹಾಭಾರತ ರಾಮಾಯಣ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಆತ್ಮ ಚರಿತ್ರೆ ಇಂತಹ ಪುಸ್ತಕಗಳನ್ನ ಪ್ರಕಟಿಸುತ್ತಾನೆ ಇರುತ್ತಾರೆ.

ಜನರು ಜೀವನದ ಅರ್ಥವನ್ನು ತಿಳಿದುಕೊಳ್ಳಿ ಎಲ್ಲರೂ ಖುಷಿಯಿಂದ ನೆಮ್ಮದಿಯಾಗಿರ್ಲಿ, ಲೋಕವೆಲ್ಲ ಸುಭಿಕ್ಷವಾಗಿರಲಿ, ಸನ್ಮಂಗಲವಾಗಿರಲಿ. ಅಂತ ಪುಸ್ತಕಗಳನ್ನ ಅತಿ ಕಡಿಮೆ ಬೆಲೆಯಲ್ಲಿ ಪ್ರಕಾಶಕರು ತಯಾರಕರು ತಯಾರಿಸಿ ಮಾರಾಟ ಮಾಡಿ ಅಥವಾ ಯಾವುದೋ ಒಂದು ಪುಣ್ಯ ಕಾರ್ಯಗಳಲ್ಲಿ ಉಡುಗೊರೆ ರೂಪದಲ್ಲಿ ಇದನ್ನ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ.

ರಾಮಾಯಣ ಓದುವುದರಿಂದ ಜೀವನದ ಸತ್ಯತೆಗಳನ್ನ ಹೇಗೆ ನಮ್ಮ ಬದುಕ್ಕಿನಲ್ಲಿ ಅಳವಡಿಸಿಕೊಳ್ಳಬೇಕು. ರಾಮ ಎಂತಹದ್ದೇ ಕಷ್ಟ ಬಂದ್ರು ಧೃತಿಗೆಡದೆ ಹೇಗೆ ಸಮಚಿತ್ತ ಭಾವದಿಂದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವನು ಅನ್ನೋ ಒಂದು ಸಾರಾಂಶವನ್ನು ನಾವು ತಿಳ್ಕೋಬಹುದು. ಹಾಗೆ ಭಗವದ್ಗೀತೆಯನ್ನ ಓದುವುದರಿಂದ ಮನೆಯ ಎಲ್ಲಾ ಕಷ್ಟಕಾರ್ಪಣ್ಯಗಳನ್ನ ಹೇಗೆ ಗೆಲ್ಬೇಕು? ಅಣ್ಣತಮ್ಮಂದಿರು ಒಂದು ಗೂಡಾಗಿದ್ದರೆ ಏನೆಲ್ಲ ಒಳ್ಳೇದು ಆಗುವುದು. ಅಧಿಕಾರ ಆಸೆ ಪಟ್ಟಲ್ಲಿ ಅದರಿಂದಾಗುವ ಅನಾನುಕೂಲಗಳೇನು? ಎಲ್ಲ ಒಂದಾಗಿಲ್ಲ ಅಂದರೆ ದಾಯಾದಿ ಕಲಹದಿಂದ ಹೇಗೆಲ್ಲಾ ತೊಂದರೆಗಳಾಗುವುದು. ಅದರಿಂದ ಪಾರಾಗುವುದೆಗೆ ನಾವು ಹೇಗೆ ತಾಳ್ಮೆಂದಿರಬೇಕು. ಎಲ್ಲವನ್ನ ಕೃಷ್ಣಾರ್ಪಣಮಸ್ತು ಎಂದು ಭಾವಿಸಿ ನಡೆಯಬೇಕು. ಎಂಬಂತಹ ವಾಕ್ಯಗಳನ್ನು ಅರ್ಥಪೂರ್ಣವಾಗಿ ವಿವರಿಸುವ ಗ್ರಂಥ ರಾಮಾಯಣ ಮಹಾಭಾರತವಾಗಿದೆ. ಹಾಗೆ ಕವಿಗಳು ಬರಹಗಾರರು ತಮ್ಮ ಜೀವನದ ಆತ್ಮಕಥೆಗಳನ್ನ ತಾವು ಕಂಡಂತಹ ತಾವು ಅನುಭವಿಸಿದಂತಹ ಕಷ್ಟ ಸುಖದ ಜೀವನ ಚರಿತ್ರೆಗಳನ್ನ ಮಹಾನ್ ವ್ಯಕ್ತಿಗಳ ಆತ್ಮಕಥೆಗಳನ್ನ ಓದುದರಿಂದ ನಮ್ಮ ಕಷ್ಟ ಒಂದು ಕಷ್ಟನೇ ಅಲ್ಲ ಅನ್ನುವಂಥ ಒಂದು ಮನೋಭಾವ ನಮಗೆ ಮೂಡುತ್ತೆ. ಹಾಗೆ ನಮಗೆ ಒಂದು ಉತ್ತೇಜನವೂ ಕೂಡ ಸಿಗುತ್ತೆ, ಯಾವುದೇ ಒಂದು ಸಮಸ್ಯೆಗೂ ಪರಿಹಾರ ಅನ್ನುವುದು ಇದ್ದೇ ಇರುತ್ತದೆ. ಆದರೆ ಈ ಒತ್ತಡದ ಜೀವನದಲ್ಲಿ ನಾವೆಲ್ಲ ಸ್ವಲ್ಪ ಸಮಯವಾದರೂ ಕನಿಷ್ಠ ಅರ್ಧ ಗಂಟೆಯಾದರೂ ಯಾವುದೊ ಒಂದು ಪುಸ್ತಕವನ್ನು ಓದುವುದರಿಂದ ನಮಗೆ ಹಾಗೆ ನಮ್ಮ ಮನಸ್ಸಿಗೆ ನೆಮ್ಮದಿಯನ್ನ ತಂದು ಕೊಡುವುದು ಖಚಿತ ಎಂದು ಹೇಳ್ತಾ ಇರಲೊಂದು ಪುಸ್ತಕ ಸ್ನೇಹ.

ಓದಿದ ಎಲ್ಲರಿಗೂ ಧನ್ಯವಾದಗಳು.
ಹಾಗೆ ಇರಲ್ಲೊಂದು ಪುಸ್ತಕ ಸ್ನೇಹ ಅನ್ನುವ ಹಾಗೆ ಯಾವುದಾದರೂ ಒಂದು ಪುಸ್ತಕನಾ ಓದೋದನ್ನ ಅಭ್ಯಾಸ ಮಾಡಿಕೊಳ್ಳಿ. ಅದರಿಂದ ಆಗುವ ಪ್ರಯೋಜನವನ್ನು ಕೂಡ ಅನುಭವಿಸಿ ಅಂತ ಹೇಳ್ತಾ ನನಗಿರುವ ಪುಸ್ತಕದ ಈ ರೀತಿಯ ಸ್ನೇಹ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಮತ್ತೊಮ್ಮೆ ಧನ್ಯವಾದಗಳು.
ಜೀವಿತಾಶಿವರಾಜ್. 🙏


Rate this content
Log in

Similar kannada story from Abstract