ಹೇ ಮಳೆರಾಯ
ಹೇ ಮಳೆರಾಯ
ಮನೆ ಅಂಗಳದಲ್ಲಿ
ತಿಳಿ ನೀಲಿಯ ಬಿಳಿ ಬಾನಲ್ಲಿ
ತತ್ ಕ್ಷಣವೇ ಕಪ್ಪು ಅವರಿಸುವಲ್ಲಿ
ಮಣ್ಣು ಸುಗಂಧ ಬೀರುವಲ್ಲಿ
ಕೊರೆಯುವ ಚಳಿಯಲ್ಲಿ
ತಾಂಗಳಿಯು ಮೇಲ್ಮನೆ ಬಂದು
ಮೈ ಸೊಕುವಲ್ಲಿ
ನಡುಗುವ ಭಾವದಲ್ಲಿ
ನಿನ್ನ ಬರುವಿಕೆಗಾಗಿ ಕಾಯುವಲ್ಲಿ
ನನ್ನೊಳಗೆನೋ ಅರಿಯದ
ಸುಮಧುರ ಸಮಯದಲ್ಲಿ,
ಹೇ ಮಳೆರಾಯ
ದೋ ಎಂದು ಸದ್ದು ಮಾಡುತ್ತಾ
ನೀ ಬಂದು ಸೇರುವಲ್ಲಿ
ಕಂಬಳಿಯನೊದ್ದಿ ಬೆಚ್ಚಗೆ
ನಾ ಮಲಗುವೆನಿಲ್ಲಿ.
ಮಳೆ ಬರ್ತ್ತಿದೆ ಹಾಗಾಗಿ ಮನೆಯಲ್ಲಿ ಬೆಚ್ಚಗೆ ಮಲ್ಕೊಂಡಿದ್ದೀನಿ ಅಂತ ಒಬ್ಬ ಕವಿಯ ಯಾವ ರೀತಿ ಹೇಳಬಹುದು ಅನ್ನುವ ಆಲೋಚನೆಯಲ್ಲಿ ಬರೆಯಲೆಂದು ಶುರು ಮಾಡಿ ಈ ಕವಿತೆ ಬರೆದಿರುವೆ.
ಹೇಗಿದೆ ಎಂದು ಓದಿ ತಿಳಿಸಿ.
ಧನ್ಯವಾದಗಳು.
✍️ಜೀವಿತಶಿವರಾಜ್.
