STORYMIRROR

Jeevithashivaraj Jeevithashivaraj

Children Stories Drama Inspirational

3  

Jeevithashivaraj Jeevithashivaraj

Children Stories Drama Inspirational

ಅಮ್ಮನ ಕಥೆಗಳು

ಅಮ್ಮನ ಕಥೆಗಳು

2 mins
10

ನಮ್ಮ ಮಕ್ಕಳಿಗೆ ಇಂತಹಾ ಕಥೆಗಳನ್ನು ಹೇಳಿ ತಿಳಿಸಿಕೊಡುವ.

ಒಮ್ಮೆ ಕ್ಷೀರ ಸಮುದ್ರದಲ್ಲಿ ದೇವತೆಗಳಿಗೂ ಹಾಗೂ ಅಸುರರಿಗೂ ಅಮೃತಕ್ಕಾಗಿ ಕಾದಾಟ ನಡೆಯುತ್ತಿತ್ತು.

ಹೀಗೆ ದೂರ್ವಾಸ ಮುನಿಗಳು ಇಂದ್ರನನ್ನು ಕಾಣಲು ಅಮರಾವತಿಗೆ ಹೋದಾಗ ಇಂದ್ರನೂ ಕಂಡರೂ ಕಾಣದಂತೆ ನಟಿಸಿದರಂತೆ.
ಇದನ್ನು ಕಂಡ ಮುನಿಗಳು ಇಂದ್ರನಿಗೆ ಶಪಿಸಿದರಂತೆ.

ಹೆಸರೇ ಹೇಳುವಂತೆ ದುರ್ವಾಸ ಮುನಿಗಳಿಗೆ  ಸಿಟ್ಟು ಜಾಸ್ತಿ , ಅವರು ಕೋಪಿಸಿಕೊಂಡು ಇಂದ್ರನಿಗೆ ನಿನ್ನ ಸಕಲ ಐಶ್ವರ್ಯವೆಲ್ಲಾವೂ ನಾಶವಾಗಲಿ ಎಂದು ಶಾಪ ಕೊಟ್ಟರು.

ಇದೇ , ಇಂತಹದ್ದೆ ಸಮಯಕ್ಕಾಗಿ ಕಾಯುತ್ತಿದ್ದ ದಾನವರು ಅರ್ಥತ್ ರಾಕ್ಷಸರಿಗೆ ಈ ವಿಷಯ ತಿಳಿದು  ಇಂದ್ರ ಲೋಕವನ್ನು ನಾಶಮಾಡಿ ದೇವತೆಗಳಿಗೆ ಕಾಟ ಕೊಡಲೆಂದು ಇಂದ್ರಲೋಕಕ್ಕೆ ಬಂದರಂತೆ.

ದೈತ್ಯರನ್ನು ಕಂಡ ದೇವತೆಗಳು ಭಯಭೀತರಾಗಿ ಭಗವಾನ್ ಶ್ರೀ ವಿಷ್ಣುವಿನ ಮೊರೆಹೊಕ್ಕರು.

ಆಗ,
ಕ್ಷೀರಸಮುದ್ರದ ವಾಸಿಯಾದ ಭಗವಾನ್ ಶ್ರೀ ವಿಷ್ಣುವು
ದಾನವರಿಗೆ ಹೇಳಿದರು ಪಾಲ್ಗಡ್ಡವನ್ನು ಕಡೆದು ಅದರಲ್ಲಿ ಬರುವಂತಹ ಅಮೃತವನ್ನು ಇಬ್ಬರೂ ಸಮಾನವಾಗಿ ತೆಗೆದುಕೊಳ್ಳೋಣ ಎಂದು ತಿಳಿಸಿ ಅವರನ್ನು ಒಪ್ಪಿಸಿದರು.

ಶ್ರೀವಿಷ್ಣುವು ಮೋಹಿನಿಯ ಅರ್ಥಾತ್ ಹೆಣ್ಣಿನ ವೇಷ ಧರಿಸಿ ಅಮೃತ ಕಲಶವನ್ನು ಹಿಡಿದು ಕೊಂಡು ಬಂದರು.ಆ ಅಮೃತ ಕಲಶದಲ್ಲಿ ಎರಡು ಭಾಗಗಳನ್ನಾಗಿ ಮಾಡಿ ಒಂದು ಭಾಗದಲ್ಲಿ ಅಮೃತವನ್ನು ಇನ್ನೊಂದು ಭಾಗದಲ್ಲಿ ಮಧ ಬರಿಸುವ ಪಾನಿಯವನ್ನು ಇಟ್ಟುಕೊಂಡಿದ್ದರು.

ದೇವತೆಗಳನ್ನು ಅಸುರರನ್ನು  ಎರಡು ಸಾಲಾಗಿ ನಿಲ್ಲುವಂತೆ ಹೇಳಿ ಭಗವಾನ್ ಶ್ರೀ ವಿಷ್ಣುವು ದೇವತೆಗಳಿಗೆ ಅಮೃತವನ್ನು ಅಸುರರಿಗೆ ಮಧು ಪಾನೀಯವನ್ನು ನೀಡುತ್ತಾ ಬಂದರು.

ಆಗ ಅಲ್ಲೇ ಇದ್ದಂತಹ ಸಿಂಹಿಣಿ ಎಂಬ ರಾಕ್ಷಸಿಯ ಮಗನಾದ್ದ ಅವನ್ನು ಎಲ್ಲವನ್ನು  ಗಮನಿಸಿ ಕೊಳ್ಳುತ್ತಿದ್ದ. ದೇವತೆಗಳಿಗೆ ಕೊಡುವಂತಹ ಪಾನೀಯ ಹಾಗೂ ರಾಕ್ಷಸರು ಗಳಿಗೆ ಕೊಡುವಂತಹ ಪಾನೀಯ ಬೇರೆ ಬೇರೆ ಇರಬಹುದೆಂದು ಗಮನಿಸುತ್ತಿದ್ದ. ಎರಡು ಒಂದೇ ಆದರೆ ಸಿಂಹಿಣಿ ಮಗನಾದ ಅವನ್ನು ಅದನ್ನು ನೋಡಿ ದೇವತೆಗಳು ನಮಗೆ ಮೋಸ ಮಾಡುತ್ತಿದ್ದಾರೆ ಎಂದು, ತಾನು ದೇವತೆಗಳ ವೇಷದಲ್ಲಿ ದೇವತೆಗಳು ಇದ್ದಂತಹ ಸಾಲಿಗೆ ಹೋಗಿ ನಿಂತ.

ಭಗವಾನ್ ಶ್ರೀ ವಿಷ್ಣು ಕೊಡುತ್ತಿದ್ದ  ಅಮೃತಕ್ಕೆ ತಾನು ಅಮೃತ ಕುಡಿಯಲೆಂದು ರಾಹುವೂ ಕೂಡ ಕೈಚಾಚಿ ಅಮೃತವನ್ನು ತೆಗೆದುಕೊಂಡ.  ರಾಹು ಒಂದು ಗುಟುಕು ಕುಡಿಯುವ ಅಷ್ಟರಲ್ಲಿ ವೇಷ ಧರಿಸಿದ ರಾಹುವನ್ನು ಕಂಡ ಸೂರ್ಯ ದೇವನು ಭಗವಾನ್ ಶ್ರೀ ವಿಷ್ಣುವಿಗೆ ಬಂದು ಹೇಳುವಷ್ಟರಲ್ಲಿ ಅವನು ಒಂದು ಗುಟುಕನ್ನು ಕುಡಿದು ಬಿಟ್ಟಿದ್ದ.

ಭಗವಾನ್ ಶ್ರೀ ವಿಷ್ಣುವಿಗೆ ಈ ವಿಷಯ ತಿಳಿದ ತಕ್ಷಣವೇ ಅವನ ಕೈಯಲ್ಲಿದ್ದ ಶ್ರೀ ಚಕ್ರದಿಂದ ಅವನ ಶಿರವನ್ನು ಕತ್ತರಿಸಿದ.

ಅವನ್ನು ಅಷ್ಟರಲ್ಲಾಗಲೇ ಒಂದು ಗುಟುಕು ಅಮೃತ ಕುಡಿದಿದ್ದರಿಂದ ಅವನ ದೇಹ ಇಬ್ಬಾಗವಾಯ್ತು. ಇಬ್ಬಾಗ ವಾದಂತಹ ದೇಹವನ್ನು ತಲೆಯ ಭಾಗವನ್ನು ರಾಹು ಎಂದು ಇನ್ನೂ ಉಳಿದ ಶರೀರದ ಭಾಗವು ಅಲ್ಲಿದ್ದಂತಹ ಹಾವಿನ ಸ್ವರೂಪದಲ್ಲಿ (ಬಾಲದ) ರೂಪ ಪಡೆದಿದ್ದರಿಂದ ಕೇತು ಎಂದು ಕರೆಯಲ್ಪಡಲಾಯಿತು.

ಮೊದಲು ಏಳು ಗ್ರಹಗಳಿದ್ದವು ಏಳು ಗ್ರಹಗಳಿಗೂ ಒಂದೊಂದು ದಿನದಂತೆ ಏಳು ದಿನ ಕೊಡಲಾಗಿತ್ತು.
ರವಿವಾರ.  ಸೂರ್ಯದೇವನಿಗೂ
ಸೋಮವಾರ. ಚಂದ್ರ ದೇವನಿಗೂ
ಮಂಗಳವಾರ. (ಮಂಗಳ) ಕುಜನಿಗೂ
ಬುಧವಾರ. ಬುಧನಿಗೂ
ಗುರು .  ದೇವತೆಗಳಿಗೆ ಗುರುವಾದ ಬೃಹಸ್ಪತಿಗೂ
ಶುಕ್ರ .  ಅಸುರರ ಗುರುಗಳಾದ ಶುಕ್ರನಿಗೂ
ಶನಿ.   ನ್ಯಾಯಾಧಿಪತಿ ಯಾದ ಶನೇಶ್ಚರನಿಗೂ
ಇದ್ದಂತಹ  ಏಳು ಗ್ರಹಗಳಿಗೂ ಏಳು ದಿನಗಳಾಗಿ ನೀಡಲಾಗಿತ್ತು.

ಆದರೆ ಅಂದಿನಿಂದ ಏಳು ಗ್ರಹಗಳು ಇದ್ದಂತಹ ಗ್ರಹಗಳು ನವಗ್ರಹ ಗಳಾಗಿ ಇಂದಿನವರೆಗೂ ಗ್ರಹ ಕೂಟದಲ್ಲಿ ರಾಹು-ಕೇತುವಿಗು ವಿಶೇಷ ಸ್ಥಾನವನ್ನು ಕೊಟ್ಟು ಅವರು ಗ್ರಹವಲ್ಲದಿದ್ದರೂ ಕೂಡ ಅವರು ಅಮೃತ ಪಾನ ಮಾಡಿದ್ದರಿಂದ ಅವರಿಗೂ ಸ್ಥಾನ ‌ಕೊಟ್ಟು ನವಗ್ರಹಗಳೆಂದು ಪೂಜೆ-ಪುನಸ್ಕಾರ ಇತ್ಯಾದಿಗಳುನ್ನು ಮಾಡಿಕೊಂಡು ಬರುತ್ತಿದ್ದೇವೆ.

ನಾನು ತಿಳಿದ ಕಥೆಯನ್ನು ನಿಮಗೆ ಅರ್ಥಾತ್ ಗೊತ್ತಿಲ್ಲದವರಿಗೆ ತಿಳಿಸಿದ್ದೇನೆ. ಇದರಲ್ಲಿ ಏನಾದರೂ ತಪ್ಪು ಇದ್ದಲ್ಲಿ ನಿಮ್ಮನ್ನು ಕ್ಷಮೆಯಾಚಿಸುತ್ತೇನೆ.

ಈ ಕಥೆಯನ್ನು ಓದಿದ ಎಲ್ಲರಿಗೂ ಧನ್ಯವಾದಗಳು.
ಜೀವಿತ ಶಿವರಾಜ್.


Rate this content
Log in