ಅಮ್ಮನ ಮಾತು,
ಪ್ರತಿಯೊಂದು ಹಬ್ಬಗಳಿಗೂ ಒಂದೊಂದು ವೈಜ್ಞಾನಿಕವಾಗಿ ಕಾರಣ ಇದೆ ಇರುತ್ತದೆ.
ಅದು ಏನು ಅಂತ ನಾವು ತಿಳ್ಕೊಬೇಕು ಅಷ್ಟೇ. ನಮ್ಮ ಮುಂದಿನ ಪೀಳಿಗೆಗೂ ಹೇಳಿಕೊಡುವ ಜವಾಬ್ದಾರಿ ನಮ್ಮದು.
ನೀವು ಕೂಡ ಇದನ್ನು ನಿಮ್ಮ ಮಕ್ಕಳಿಗೆ ಹೇಳಿಕೊಟ್ಟು ತಮ್ಮ ಮನೆಯ ಆಚಾರ-ವಿಚಾರ ಸಂಪ್ರದಾಯ ಸಂಸ್ಕಾರವನ್ನು ತಿಳಿಸಿ ಕಲಿಸಿ.
ಹಾಗೆಯೇ ಮಡಿ-ಮೈಲಿಗೆ ಅಂದ್ರೆ
ಉದಾಹರಣೆಗೆ: ನಾನು ಇವಾಗ ತಾನೆ ಸ್ನಾನ ಮಾಡ್ಕೊಂಡು ಬಂದಿದ್ದೀನಿ..
ನೀನು ಇವಾಗ ಏಳುತ್ತಾ ಇದ್ಯಾ.
ನನ್ನ ಮುಟ್ಟಬೇಡ!
ಅಂತ ನಮ್ಮ ಹಿರಿಯರು ಯಾಕೆ ಹೇಳ್ತಾ ಇದ್ರು ಗೊತ್ತಾ?
ನಾವು ಇಡೀ ರಾತ್ರಿ ಮಲಗಿ ಎದೊಳ್ವಾಗ ನಮ್ಮ ದೇಹದಲ್ಲಿ ನಕಾರಾತ್ಮಕ ಶಕ್ತಿ ಚಲನವಲನಗಳ ಆಗಿರುತ್ತೆ.
ನಾವು ಹಾಗೆ ಎದ್ದಿ ಊಟ ಮಾಡೋದು, ಓದೋದು, ಮತ್ತಿನ್ನೇನೋ ಕೆಲಸ ಮಾಡುವಾಗ ನಮಗೆ ಯಾಕಾದ್ರೂ ಮಾಡ್ತಾ ಇದೀನಿ ಕೆಲಸ ನಾ ಅಂತ ಅನ್ನಿಸಬಹುದು.
ಅದೇ ನಾವು ಬೆಳಗ್ಗೆ ಎದ್ದಾಕ್ಷಣ ಸ್ನಾನ ಮಾಡಿ. ದೇವರ ಮುಂದೆ ಹತ್ತು ನಿಮಿಷ ಕುತ್ಕೊಂಡು. ನಂತರ ನಮ್ಮ ಕೆಲಸಗಳನ್ನೆಲ್ಲಾ ಶುರುಮಾಡಿದರೆ... ಎಲ್ಲಾ ಕೆಲಸವನ್ನು ಪರಿಪೂರ್ಣವಾಗಿ ಪ್ರೀತಿಯಿಂದ ಮಾಡಬಹುದು.
ನೀವು ಇದನ್ನು ಟ್ರೈ ಮಾಡಿ ಜಾದು ಆಗುತ್ತೆ. ನೋಡಿ ಅದು ಹೇಗಿರುತ್ತೆ ಅವತ್ತುಂದಿನ ಅಂತ ಕಮೆಂಟ್ ಅಲ್ಲಿ ತಿಳಿಸಿ.
ಮಡಿ ಅಂದ್ರೆ ಇಷ್ಟೇ ಶುದ್ಧತೆ.
ಮೈಲಿಗೆ ಅಂದರೆ ಅಶುದ್ಧತೆ.
ಅಂತ ಅಷ್ಟೇ ನಮ್ಮ ಹಿರಿಯರು ತಿಳಿಸಿ ಕೊಟ್ಟಿದ್ದು.
ಆದರೆ ಒಬ್ಬರಿಂದ ಒಬ್ಬರು ಒಬ್ಬರಿಂದ ಒಬ್ಬರು ತಮ್ಮ ಆಚರಣೆಗಳನ್ನು ನಾವೇನ್ ಮಾಡ್ತೀವಿ ಅದೇ ಸರಿ ಅನ್ಕೊಂಡು ತೀರ್ಮಾನ ಮಾಡಿ ಮಡಿ-ಮೈಲಿಗೆ ಅನ್ನೋದನ್ನ ಮತ್ತೊಂದು ಆಯಾಮಕ್ಕೆ ತಗೊಂಡು ಹೋಗ್ಬಿಟ್ರು. ಅನ್ನೋದನ್ನ ನಾವು ತಿಳ್ಕೊಬೇಕು.
ಇದರ ಬಗ್ಗೆ ತುಂಬಾ ವಿಷಯ ಇದೆ.
ಈಗ ನಾವು ನಮ್ ಮಕ್ಕಳಿಗೆ ಹಬ್ಬಗಳನ್ನ ವೈಶಿಷ್ಟವನ್ನು ಹೇಳ್ ಕೊಡೋಣ.
ದೊಡ್ಡವರು ಹೇಳೋದೆಲ್ಲ ಒಳ್ಳೆಯದಕ್ಕೆ ದೊಡ್ಡವರು ಆಚರಣೆ ಮಾಡಿಕೊಂಡು ಬಂದಿರೋದು ಕೂಡ ಒಳ್ಳೆದಕ್ಕೆ.
ಹಿರಿಯರ ಆಚರಣೆ ಗಳಲ್ಲೆಲ್ಲಾ ವೈಜ್ಞಾನಿಕವಾಗಿ ಆರೋಗ್ಯಕರವಾಗಿ ಏನೋ ಒಂದು ವಿಷಯ ಇದ್ದೇ ಇರುತ್ತೆ.
ಅದು ಏನು ಅನ್ನೋದನ್ನ ನಾವು ಮುಂದಿನ ಪೀಳಿಗೆಗೆ ಹೇಳಿಕೊಡುವ. ಮತ್ತೆ ನಾವು ಇನ್ನು ತಿಳಿದುಕೊಳ್ಳೋಣ.
ಏನಂತೀರಾ!
ನಿಮ್ಮ ಅನಿಸಿಕೆ ಅಭಿಪ್ರಾಯ ಏನೇ ಇದ್ದರೂ ಕಾಮೆಂಟ್ ಮೂಲಕ ತಿಳಿಸಿ.
ಬರಹದಲ್ಲಿ ಏನಾದರೂ ತಪ್ಪಿದ್ದರೆ ಯಾರ ಮನಸ್ಸಿಗಾದರೂ ನೋವು ತರುವಂತ ಸಂಗತಿ ಇದ್ದರೆ ಕ್ಷಮೆ ಇರಲಿ.
ಧನ್ಯವಾದಗಳು.
ಜೀವಿತಶಿವರಾಜ್.