STORYMIRROR

mamta km

Classics Inspirational

4.0  

mamta km

Classics Inspirational

ಹೇಗಿರಬೇಕು ಜೀವನ ಶೈಲಿ?

ಹೇಗಿರಬೇಕು ಜೀವನ ಶೈಲಿ?

3 mins
367


     ಮಾನವನಾಗಿ ಹುಟ್ಟಿದ ಮೇಲೆ ನಾಗರಿಕ ಸಮಾಜದಲ್ಲಿ ಬದುಕಲು ಹಲವಾರು ಕಟ್ಟುಪಾಡು, ನೀತಿ ನಿಯಮ, ಅನಾದಿ ಕಾಲದಿಂದಲೂ ನೆಡೆದು ಕೊಂಡು ಬಂದಿದೆ.. ಹಾಗಾಗಿ ಎಲ್ಲರೂ ಒಂದು ಚೌಕಟ್ಟಿನ ಒಳಗೆ ಬದುಕುತ್ತಾ.. ಸಮಾಜದ ಪರಿಮಿತಿ ಒಳಗೆ ಬದುಕುವುದು ಸಾಮಾನ್ಯ. ಮತ, ಧರ್ಮ , ಸಂಸ್ಕೃತಿ, ಪ್ರಾದೇಶಿಕತೆ ಆಧಾರಿತವಾಗಿ ನಮ್ಮ ಜೀವನ ಶೈಲಿ ಬೇರೆ ಬೇರೆ ಆಗಿರುತ್ತದೆ. ಅಂತೆಯೇ ನಮ್ಮ ಜೀವನ ಹಲವಾರು ಕಟ್ಟುಪಾಡುಗಳಿಗನುಗುಣವಾಗಿ, ಸಂಪ್ರದಾಯ, ಶಾಸ್ತ್ರಗಳಿಗನುಗುಣವಾಗಿ.. ಒಬ್ಬೊಬ್ಬರ ಜೀವನ ಶೈಲಿ ವಿಭಿನ್ನವಾಗಿರುತ್ತದೆ.

   ಆದರೆ ಇತ್ತೀಚೆಗೆ ನಗರವಾಸಿಗಳ ಜೀವನ ಶೈಲಿ ಹಾಗೂ ಹಳ್ಳಿಯ ಜನರ ಜೀವನ ಶೈಲಿಯ ಬಗ್ಗೆ ಹಲವಾರು ವಿಚಾರಧಾರೆಗಳು ಹಾಗೂ ಬದಲಾವಣೆಗಳನ್ನು ನೋಡಬಹುದು. ಹಾಗೆ ನಮ್ಮ ಶೈಕ್ಷಣಿಕ ಜೀವನ ನಮ್ಮ ಜ್ಞಾನವನ್ನು ಆಧರಿಸಿ ಕೂಡ ನಮ್ಮ ಜೀವನ ಶೈಲಿ ವಿಭಿನ್ನವಾಗಿರುತ್ತದೆ. ಹೊರ ಜಗತ್ತಿಗೆ ತೆರೆದುಕೊಂಡಷ್ಟು ಒಬ್ಬರ ಜೀವನ ಶೈಲಿ ಬದಲಾವಣೆ ಆಗುತ್ತಾ ಹೋಗುತ್ತದೆ. ಹಳ್ಳಿಯವರಿಗೆ ಅವರ ಜೀವನ, ಅವರ ಜೀವನ ಶೈಲಿಯೇ ಶ್ರೇಷ್ಠವೆನಿಸಿದರೆ, ಆಧುನಿಕ ಮನೋಭಾವ ಹೊಂದಿದ ಪಟ್ಟಣದವರಿಗೆ, ಅವರ ಜೀವನ ಶೈಲಿಯೇ ಶ್ರೇಷ್ಠ ಎನ್ನಿಸುತ್ತದೆ. ಆದರೆ ಮಾನವೀಯ ಮೌಲ್ಯಗಳನ್ನು ಒಳಗೊಂಡಿಲ್ಲದ ಯಾವುದೇ ಶೈಲಿಯೂ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಜೀವನಶೈಲಿಯ ಬಗ್ಗೆ ಬರೆಯಲು ಹೊರಟರೆ ಅದೊಂದು ದೊಡ್ಡ ಸಮುದ್ರವಿದ್ದಂತೆ ಅದರ ಆಳ ಅಗಲವನ್ನು ಸುಲಭದಲ್ಲಿ ವಿಶ್ಲೇಷಿಸಲು ಒಂದು ಹಂತದ ನಿರ್ಧಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಅವರ ಆಲೋಚನ ಶಕ್ತಿ, ಅವರ ಬೆಳೆದು ಬಂದ ವಾತಾವರಣ, ಅವರ ಸಂಪ್ರದಾಯಿಕ ಆಚಾರ ವಿಚಾರಗಳು, ಹೆಚ್ಚಾಗಿ ಒಬ್ಬರ ಜೀವನ ಶೈಲಿಯ ಮೇಲೆ ತಮ್ಮ ಛಾಪನ್ನು ಮೂಡಿಸುತ್ತದೆ.


   ಆದರೂ ಕಾಲಕ್ಕೆ ತಕ್ಕ ಹಾಗೆ ನಮ್ಮ ನಡೆ ನುಡಿ ಮಾತು, ಬದುಕುವ ರೀತಿ ಬದಲಾವಣೆಯ ಗಾಳಿಗೆ ಸಿಲುಕಿ ಒಂದಷ್ಟು ವ್ಯತ್ಯಾಸ ಕಾಣುವುದು ಸಹಜ. ಒಂದು ಚಿಕ್ಕ ಉದಾಹರಣೆ ಎಂದರೆ ಒಂದು ಚಿಕ್ಕ ಹಳ್ಳಿಯಲ್ಲಿ ಅಥವಾ ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಕ್ಕಳು ಅಲ್ಲಿಯ ವಾತಾವರಣಕ್ಕೆ ತಕ್ಕಂತೆ, ತಮ್ಮ ನಡೆ, ನುಡಿ, ಹಾವ, ಭಾವ, ಉಡುಪು ವಸ್ತ್ರಗಳನ್ನು ಧರಿಸಿಕೊಂಡು ಒಂದು ರೀತಿಯಾಗಿ ಇರುತ್ತಾರೆ. ಅವರಿಗೆ ಉತ್ತಮ ಅಂಕಗಳು ಬಂದು ಮುಂದೆ ಉನ್ನತ ವ್ಯಾಸಕ್ಕಾಗಿ ಪಟ್ಟಣಗಳಿಗೆ ತೆರಳಿದಾಗ, ಇನ್ನೊಮ್ಮೆ ತಿರುಗಿ ವಾಪಸ್ ಊರಿಗೆ ಬರುವಾಗ ಆ ಮಕ್ಕಳ ಒಂದಷ್ಟು ಮನೋಭಾವನೆಗಳು, ನಡೆ-ನುಡಿ ಜೀವನಶೈಲಿ ವ್ಯತ್ಯಾಸವಾಗಿರುವುದನ್ನು ಕಾಣುತ್ತೇವೆ. ಇದು ಸಹಜ ಕೂಡ. ನಾವು ಎಲ್ಲಾ ಪರಿಸರದಲ್ಲೂ, ಎಲ್ಲಾ ವಾತಾವರಣದಲ್ಲೂ ಹಾಗೂ ಎಲ್ಲಾ ಕಾಲಮಾನಕ್ಕೂ ಒಂದೇ ರೀತಿಯಾಗಿ ಜೀವಿಸಲು ಸಾಧ್ಯವಿಲ್ಲ. ಅವರವರ ಒಂದಷ್ಟು ಇಷ್ಟಗಳು ಸಮಯ ಸಂದರ್ಭಗಳಿಗನುಗುಣವಾಗಿ ಬದಲಾವಣೆಯಾಗುತ್ತದೆ. ಅಲಂಕಾರ ಮಾಡಿಕೊಳ್ಳುವುದನ್ನು, ಕುಳಿತುಕೊಳ್ಳುವ ಮುಂತಾದ ಶೈಲಿಯನ್ನು ಬದಲಾವಣೆ ಮಾಡಿಕೊಂಡು ಮನೆಯವರಲ್ಲಿ ಆಶ್ಚರ್ಯ ಉಂಟು ಮಾಡುತ್ತಾರೆ. ಇನ್ನು ಕೆಲವರು ತಮ್ಮ ಬದಲಾದ ಜೀವನ ಶೈಲಿಯಿಂದ ಹೆತ್ತವರಲ್ಲಿ ಆತಂಕವನ್ನು ಉಂ

ಟು ಮಾಡುತ್ತಾರೆ. ನಾವು ಪಟ್ಟಣದಲ್ಲಿ ಇರುವವರು ಎಂದು, ಅಲ್ಲಿಗೆ ಸರಿಯಾಗಿ ನಮ್ಮ ಅಲಂಕಾರ ಹಾಗೂ ನಡೆನುಡಿ ಇದ್ದಾಗ, ನಾವು ನಮ್ಮ ಹಳ್ಳಿ ಅಥವಾ ನಮ್ಮ ಕುಟುಂಬಸ್ಥರ ನಡುವೆ ಇದ್ದಾಗ ಅದೇ ರೀತಿಯ ಮನೋಭಾವವನ್ನು ಪ್ರದರ್ಶನ ಮಾಡಿದಾಗ ಅದರ ಬಗ್ಗೆ ಅನೇಕರು, ಅನೇಕ ರೀತಿಯಾಗಿ ಪ್ರತಿಕ್ರಿಸಬಹುದು. ಕೆಲವೊಮ್ಮೆ ನಮ್ಮ ನಡವಳಿಕೆಗಳು ನಮ್ಮ ಜೀವನ ಶೈಲಿ ಹಾಸ್ಯಸ್ಪದ ಆಗಬಹುದು ಅಥವಾ ವಿಮರ್ಶೆಗೂ ಒಳಪಡಬಹುದು. ಆದರೆ ಯಾವುದೇ ರೀತಿಯ ಜೀವನ ಶೈಲಿ ಇರಲಿ ಅದು ನಮ್ಮತನವನ್ನು ಬಿಟ್ಟು ಕೊಡುವಂತಿರಬಾರದು. ಹಾಗೂ ನಮ್ಮ ಏಳಿಗೆಗೆ, ನಮ್ಮ ಭದ್ರತೆಗೆ ತೊಂದರೆಯಾಗುವಂತಹ ಶೈಲಿ ಎಂದಿಗೂ ಹಾನಿಕಾರವೇ, ಅಪಮಾನಕಾರರಿಯೇ. ಹಾಗಾಗಿ ನಮ್ಮ ಜೀವನಶೈಲಿ ಯಾವುದೇ ಇರಲಿ ಅದರಿಂದ ಯಾರಿಗೂ ತೊಂದರೆಯಾಗದಂತಿರಲಿ ಹಾಗೂ ನಮ್ಮ ಗೌರವ, ಸ್ಥಾನಮಾನ, ರೀತಿ ನೀತಿಗಳ ಬೆಲೆ ಹೆಚ್ಚಾಗುವಂತೆ ಇರಲಿ.. ಎನ್ನುವುದು ನನ್ನ ಅಭಿಪ್ರಾಯ.


  ಹಿಂದೆಲ್ಲ ಮನೆಯಲ್ಲಿ ಮಹಿಳೆಯರು ಯಾವುದೇ ಧರ್ಮದವರಾದರೂ ಸಹ ಹೆಚ್ಚಾಗಿ ಸೀರೆಯನ್ನು ಧರಿಸುತ್ತಿದ್ದರು, ನಂತರ ಆ ಸ್ಥಾನಗಳಿಗೆ ಚೂಡಿದಾರ್ ನೈಟಿ ಮುಂತಾದ ವಸ್ತ್ರಗಳು, ಪ್ಯಾಂಟ್ ಶರ್ಟ್ ಪಂಚೆ ಶರ್ಟ್ ಮುಂತಾದವನ್ನು ಸಾಂಪ್ರದಾಯಿಕವಾಗಿ ತೊಡುತ್ತಿದ್ದ ಅನೇಕ ಪುರುಷರು ಕೂಡ ಟಿ-ಶರ್ಟ್ ಹಾಗೂ ಸ್ಲೀವ್ಲೆಸ್ ಶರ್ಟ್ ಗಳು ಮುಕ್ಕಾಲು ಚಡ್ಡಿಗಳು ಚಿಕ್ಕ ಚಡ್ಡಿಗಳನ್ನು ಧರಿಸುವ ಪದ್ದತಿ ಬಂದಾಗಲೂ ಅದನ್ನು ಜೀವನ ಶೈಲಿಯ ಬದಲಾವಣೆ ಎಂದು ಹೇಳಬಹುದು. ಹಾಗೆಯೇ ಮೊಬೈಲ್ ಅಂತರ್ಜಾಲ ಎಲ್ಲವೂ ಶುರು ಆದ ನಂತರ ಹಲವರ ಬದುಕಿನ ಶೈಲಿ ಸಂಪೂರ್ಣ ಬದಲಾಗಿದೆ..

ಹಾಗೆಯೇ ಆಹಾರ ವಿಹಾರಗಳಲ್ಲೂ ಅನೇಕ ಬದಲಾವಣೆ ಕಾಣುತ್ತದೆ. ಸಾಂಪ್ರದಾಯಿಕ ಆಹಾರದ ಬದಲಾಗಿ, ಸಂಸ್ಕರಿತ ಆಹಾರಕ್ಕೆ ಎಲ್ಲರೂ ಮೊರೆ ಹೋಗಿದ್ದಾರೆ. ಅದು ನಮ್ಮ ಇಚ್ಚೆ ಎಂದುಕೊಂಡರೂ ಅನೇಕ ಖಾಯಿಲೆ, ಹಾಗೂ ಸಮಸ್ಯೆಗೆ ಬದಲಾದ ನಮ್ಮ ಆಹಾರ ನಿದ್ರಾಭ್ಯಾಸಗಳೇ ಕಾರಣ. ಆಧುನಿಕ ಜೀವನ ಶೈಲಿ ಇದ್ದರೂ ಶಾಸ್ತ್ರ ಸಂಪ್ರದಾಯ, ಹಬ್ಬ ಹರಿದಿನಗಳಲ್ಲಿ ನಮ್ಮ ತನವನ್ನು ಉಳಿಸಿ ಕೊಳ್ಳಬೇಕು. ಹಾಗೆಯೇ ಯಾವುದೇ ಅಂಧಾನುಕರಣೆ ಎಂದಿಗೂ ಒಳ್ಳೆಯದಲ್ಲ.

  ಹಾಗೆಯೆ ಪ್ರತಿಯೊಂದು ವಿಷಯದಲ್ಲೂ "ಬದಲಾವಣೆ ಜಗದ ನಿಯಮ" ಹಾಗೆಯೇ ಜೀವನಶೈಲಿಯೂ ಕೂಡ ಅದರಿಂದ ಹೊರತಲ್ಲ. ಇನ್ನೊಬ್ಬರ ಜೀವನಶೈಲಿಯ ಬಗ್ಗೆ ನಾವು ಯಾವಾಗಲೂ ಕಡಿಮೆ ತೂಕದ ಮಾತುಗಳನ್ನು ಆಡಬಾರದು. ಅವರ ಜೀವನಶೈಲಿಯಿಂದ ಯಾರಿಗೂ ಯಾವುದೇ ರೀತಿಯ ಹಾನಿ ಉಂಟಾಗದೇ ಇದ್ದಲ್ಲಿ ಅದು ಅವರ ಇಷ್ಟ ಹಾಗೂ ಅವರ ಸಂತೋಷ. ಹಾಗೂ ಅವರ ವೈಯಕ್ತಿಕ. ಒಂದಷ್ಟು ಚಿಕ್ಕ ಪುಟ್ಟ ಸಂತೋಷಗಳು ನಮ್ಮ ಜೀವನಶೈಲಿಯಿಂದ ಬದಲಾಗುತ್ತದೆ, ಅದರಿಂದ ನಾವು ಸಂತೋಷವಾಗಿರುತ್ತೇವೆ ಹಾಗೂ ನಮ್ಮ ಸುತ್ತ ಇರುವವರು ಸಂತೋಷವಾಗಿರುತ್ತಾರೆ ಎಂದಾದಾಗ ನಮ್ಮ ಜೀವನ ಶೈಲಿಯನ್ನು ಒಂದಷ್ಟು ಮಾರ್ಪಾಡು ಮಾಡಿಕೊಳ್ಳುವುದು ತಪ್ಪೇನಲ್ಲ. ಹಾಗೂ ಅವರಿಗೆ ಅದು ಇಷ್ಟವಾಗದೇ ಇದ್ದಾಗ ಅವರಿಗೆ ಇಷ್ಟ ಇಲ್ಲದೇ ಇರುವ ಶೈಲಿಯನ್ನು ಮಾಡು ಎಂದು ಒತ್ತಡ ಹಾಕುವುದು ತರವಲ್ಲ. ಹಾಗಾಗಿ ಅವರವರ ಜೀವನಶೈಲಿ ಅವರವರಿಗೆ ಅಲ್ಲವೇ ಸ್ನೇಹಿತರೆ.

ಧನ್ಯವಾದಗಳು💐


Rate this content
Log in

Similar kannada story from Classics