ನಿರ್ಜನ ರಸ್ತೆ, ಸಂಜೆ ಹೊತ್ತು.
ನಿರ್ಜನ ರಸ್ತೆ, ಸಂಜೆ ಹೊತ್ತು.


ಪ್ರೀತಿ ಅಂದು ಕಚೇರಿಯಿಂದ ಬೇಗ ಬೇಗ ಕೆಲಸ ಮುಗಿಸಿಕೊಂಡು ಲಘುಬಗೆಯಲ್ಲಿ ಬಸ್ ಸ್ಟಾಪ್ ನತ್ತ ಹೆಜ್ಜೆ ಹಾಕಿದಳು. ಎಂದಿಗಿಂತ ತುಸು ಬೇಗ ಹೊರಡಬೇಕು ಎಂದು ಆಲೋಚನೆ ಮಾಡಿದ್ದ ಅವಳಿಗೆ ಇಂದು ಮಾಮೂಲಿಗಿಂತಲೂ ತುಸು ತಡವೇ ಆಗಿತ್ತು. ಮನೆಯಲ್ಲಿ ಮಗಳು ಕಾಯುತ್ತಿರುವಳು ಎಂಬ ಆಲೋಚನೆ ಅವಳ ತಲೆಯಲ್ಲಿ ಒಂದೇ ಸಮ ಓಡುತ್ತಿತ್ತು ಹಾಗಾಗಿ ಮಕ್ಕಳು ಮನೆಯಲ್ಲಿ ಏನು ಮಾಡುತ್ತಿರಬಹುದು,?ಎಲ್ಲರೂ ಬಂದಿರಬಹುದು.. ತಾನು ಇನ್ನು ಎಂದಿನಂತೆ ಎಲ್ಲರ ಬಳಿ ಬೈಸಿಕೊಳ್ಳಬೇಕು ಎಂದು ಯೋಚಿಸುತ್ತಾ ಬಸ್ಟಾಪ್ನವರೆಗೆ ಬರುವಾಗ, ಅವಳು ಹೋಗಬೇಕಾಗಿದ್ದ ಬಸ್ಸು ಧೂಳೆಬ್ಬಿಸಿಕೊಂಡು ಮುಂದೆ ಹೋಯಿತು. ಪ್ರೀತಿಗೆ ಇನ್ನೂ ಬೇಸರ ಹೆಚ್ಚಾಯಿತು ಸಮಯಕ್ಕೆ ಸರಿಯಾಗಿ ಬಂದರೂ, ಬಸ್ ಮುಂದೆ ಹೋಗಿದ್ದನ್ನು ನೋಡಿ ಏನು ಮಾಡಬೇಕೆಂದು ತೋಚಲಿಲ್ಲ. ಇನ್ನೊಂದು ಬಸ್ ಬಂದು ನಂತರ ಮನೆಗೆ ದಾರಿಯಲ್ಲಿ ನೀರವತೆಯಲ್ಲಿ ಒಂಟಿಯಾಗಿ ಮನೆ ಮುಟ್ಟುವುದು ಏಕೋ ಪ್ರೀತಿಗೆ ಕಸಿವಿಸೆನಿಸಿತು.
ಮನೆಯಲ್ಲಿ ಮಗಳ ಹುಟ್ಟುಹಬ್ಬಕ್ಕೆ ತಯಾರಿ ಕೂಡ ಮಾಡುವುದಿತ್ತು, ಹತ್ತನೇ ವರ್ಷದ ಹುಟ್ಟು ಹಬ್ಬಕ್ಕೆ ಮಗಳ ಸ್ನೇಹಿತರಿಗೆ, ಅಕ್ಕಪಕ್ಕದ ಮನೆಯವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅಂದು ಪ್ರೀತಿಗೆ ರಜೆ ಸಿಗದೆ ಹೋಗಿದ್ದರಿಂದ ಕಚೇರಿಗೆ ಹೋಗಿ, ಬೇಗ ಬರುವೆ ಎಂದು ಆಶ್ವಾಸನೆ ನೀಡಿ ಬಂದಿದ್ದಳು. ಆದರೆ ಎಂದಿನಂತೆ ಕಚೇರಿಯ ಮುಗಿಯದ ತುರ್ತಾದ ಕೆಲಸಗಳ ನಡುವೆ ಅವಳಿಗೆ ಬೇಗ ಹೊರಡಲು ಅಸಾಧ್ಯವಾಯಿತು. ಬಸ್ಸು ಕೂಡ ಹೊರಟು ಹೋಗಿದ್ದರಿಂದ ಒಂದಷ್ಟು ಹೊತ್ತು ಕಾದು, ನಂತರ ಬಂದ ಬಸ್ಸನ್ನು ಹಿಡಿದು ಮನೆಯ ಬಳಿಯ ಬಸ್ ಸ್ಟಾಪ್ ನಲ್ಲಿ ಇಳಿಯುವಾಗ, ಸಂಜೆ ಏಳಾಗುತ್ತಾ ಬಂದಿತ್ತು ಹಾಗೆಯೇ ನಿರ್ಜನ ರಸ್ತೆ ಎಲ್ಲೋ ದೂರದಲ್ಲಿ ಬೊಗಳುತ್ತಿರುವ ನಾಯಿಯ ಬೊಗಳುವಿಕೆ ಹಾಗೂ ತಣ್ಣನೆ ಬೀಸುವ ಗಾಳಿ ಮಳೆ ಬರುವ ಸೂಚನೆ, ಅದರ ನಡುವೆ ಚಿರ್ರ್ ಎಂದು ಕಿರಿಚುವ ಹಕ್ಕಿ
ಯ ಕೂಗು ಅವಳಲ್ಲಿ ಅವ್ಯಕ್ತ ಭಯವನ್ನು ಮೂಡಿಸಿತ್ತು, ಇದ್ದಕ್ಕಿದ್ದಂತೆ ರಸ್ತೆಯ ಮಧ್ಯದಲ್ಲಿ ಟನ್ಎಂಬ ಸದ್ದು ಕೇಳಿತು. ಜೊತೆಗೆ ರಸ್ತೆ ದೀಪ ಆರಿ ಹೋಗಿ ಅವಳ ಎದೆ ಝಲ್ ಎಂದಿತು. ಪ್ರೀತಿ ಸುತ್ತಮುತ್ತ ನೋಡಿದಳು, ಏನು ಕಾಣಿಸಲಿಲ್ಲ, ಏನೋ ಬಿದ್ದ ಸದ್ದಿರಬಹುದು ಎಂದು ನಾಲ್ಕು ಹೆಜ್ಜೆ ಮುಂದಿಟ್ಟಳು, ಅಷ್ಟರಲ್ಲಿ ಮತ್ತೆ ಜೋರಾಗಿ ಟನ್ ಡಬ್ ಎಂಬ ಶಬ್ದ ಕೇಳಿಸಿತು, ಪ್ರೀತಿಗೆ ಇನ್ನು ಭಯ ಹೆಚ್ಚಾಯಿತು ಈ ನಿರ್ಜನ ರಸ್ತೆಯಲ್ಲಿ ಇಂತಹ ವಾತಾವರಣದಲ್ಲಿ ಇದೆಂಥ ಸದ್ದು ಎಂದು ಧೈರ್ಯಮಾಡಿ ಒಂದೆರಡು ಹೆಜ್ಜೆ ಇಡುವಾಗ ಕತ್ತಲಲ್ಲಿ ಯಾರೋ ಆಸ್ಪಷ್ಠ ವಾಗಿ ಕಾಣಿಸಿದರು. ಪ್ರೀತಿ ತನ್ನ ಮೊಬೈಲ್ ಲೈಟ್ಸ ಹಾಕಿ ರಸ್ತೆಯ ಕಡೆ ಹಾಕಿದಳು. ನೋಡಿದರೆ ಹುಡುಗಿ ಸೈಕಲ್ ಎತ್ತಿ ಸರಿ ಮಾಡುತ್ತಾ ಇದ್ದಳು, ಅದನ್ನು ನೋಡುತ್ತಿದ್ದಂತೆ ಪ್ರೀತಿಗೆ ಗೊತ್ತಾಯಿತು ಸೈಕಲ್ ಓಡಿಸಿಕೊಂಡು ಬಂದ ಹುಡುಗಿ ರಸ್ತೆಯಲ್ಲಿ ಬಿದ್ದ ಶಬ್ದ ಅದು ಎಂದು..ಯಾವ ಮಗುವೋ ಏನೂ ಬಿದ್ದು ಪೆಟ್ ಆಯಿತೋ ಏನೋ ಎಂದು ಹತ್ತಿರ ಬಂದು ನೋಡುವಾಗ ಪ್ರೀತಿಯ ಮಗಳು ಸ್ವಾತಿ ಆಗಿದ್ದಳು, ಪ್ರೀತಿಗೆ ಈಗಾ ಮಗಳಿಗೆ ಏನಾಯಿತೋ ಎಂದು ಭಯ ಆಯಿತು. ಆದರೆ ಅಷ್ಟಾಗಿ ಏನು ಆಗಿರಲಿಲ್ಲ, ಅಮ್ಮ ಇನ್ನೂ ಬರಲಿಲ್ಲ ಎಂದು ಸ್ವಾತಿ ಅವಳನ್ನು ಹುಡುಕಿಕೊಂಡು ಸೈಕಲ್ ಏರಿಕೊಂಡು ಬಂದಿದ್ದಳು, ಅಷ್ಟರಲ್ಲಿ ಪ್ರೀತಿ ಅಲ್ಲಿಗೆ ಬಂದಿದ್ದು ನೋಡಿ ಅವಳಿಗೆ ಸಮಾಧಾನವಾಯಿತು, ಪ್ರೀತಿ ಶಬ್ದ ಕೇಳಿ ಹೆದರಿಕೊಂಡಿದ್ದು, ಜೊತೆಗೆ ಮಗಳನ್ನು ಅಲ್ಲಿ ನೋಡಿ ಅವಳಿಗೆ ಏನಾಗಲಿಲ್ಲ ಎಂದು ಸಮಾಧಾನವು ಆಯಿತು. ಯಾಕೆ ಒಂದಷ್ಟು ಹೊತ್ತು ಕಾಯುವ ಬದಲು ಹುಡುಕಿಕೊಂಡು ಬಂದೆ, ಸಂಜೆಯ ಹೊತ್ತು ನಿರ್ಜನ ರಸ್ತೆಯಲ್ಲಿ ಒಬ್ಬಳೇ ಓಡಾಡುವಂತಹ ಅವಶ್ಯಕತೆ ಏನಿತ್ತು ಎಂದು ಹೇಳುತ್ತಾ, ಸದ್ಯ ಮಗಳಿಗೆ ಏನು ತೊಂದರೆ ಆಗಲಿಲ್ಲವಲ್ಲ ಎನ್ನುತ್ತಾ ಮಗಳ ಹುಟ್ಟುಹಬ್ಬವನ್ನು ಆಚರಿಸಲು ಸಮಯವಾಗುತ್ತದೆ ಎಂದು ಮಗಳ ಜೊತೆ ಮನೆಯತ್ತ ಹೆಜ್ಜೆ ಹಾಕಿದಳು.