Read a tale of endurance, will & a daring fight against Covid. Click here for "The Stalwarts" by Soni Shalini.
Read a tale of endurance, will & a daring fight against Covid. Click here for "The Stalwarts" by Soni Shalini.

murali nath

Tragedy Inspirational Others

3  

murali nath

Tragedy Inspirational Others

ಬದುಕು- ಬವಣೆ

ಬದುಕು- ಬವಣೆ

2 mins
31ಚಲನಚಿತ್ರವೆಂಬ ಮಾಯಲೋಕದಲ್ಲಿ ಕಲೆಯ ಹಿಂದೆ ಬಿದ್ದು ಜೀವನವನ್ನೇ ಅರ್ಪಣೆ ಮಾಡಿದವರು ಮತ್ತು ಇದರಿಂದ ಹೆಸರಿನ ಜೊತೆ ಸಾಕಷ್ಟು ಹಣ ಮಾಡಿದವರೂ ಇದ್ದಾರೆ. ಹಾಗೆ ಕಲೆಯನ್ನೇ ನಂಬಿ ಕೊನೆಗಾಲದಲ್ಲಿ ಕೈಲಿ ಹಣವಿಲ್ಲದೆ ಅವರಿವರನ್ನು ಅವಲಂಬಿಸಬೇಕಾದ ಶೋಚನೀಯ ಪರಿಸ್ಥಿತಿಯ ಕಲಾವಿದರು ನಮ್ಮಲ್ಲಿ ಅನೇಕರಿದ್ದಾರೆ.ಮುಖ್ಯಭೂಮಿಕೆಯಲ್ಲಿಪಾತ್ರಮಾಡಿದವರ ಅನೇಕ ನಟರಪಾಡೇ ಹೀಗಿರಬೇಕಾದರೆ ಇನ್ನು ತೆರೆಯ ಹಿಂದೆ ಶ್ರಮವಹಿಸಿ ದಿನವಿಡೀ ಬಿಸಿಲು ಗಾಳಿ ಮಳೆ ಲೆಕ್ಕಿಸದೆ ಕೆಲಸ ಮಾಡುವ ತಂತ್ರಜ್ಞರು ಇಂದು ತಮ್ಮ ಕಷ್ಟವನ್ನ ಯಾರಿಗೂ ಹೇಳಲಾಗದೆ ಪ್ರಸ್ತುತ ಬಹಳ ಕೆಳಮಟ್ಟದ ಜೀವನ ನಡೆಸುತ್ತಿರುವುದು ವಿಷಾದನೀಯ.

      ಇದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ. ಒಂದು ಕಾಲದಲ್ಲಿ ಉತ್ತಮ ಛಾಯಾಗ್ರಾಹಕರಾಗಿ ಹಲವಾರು ಕನ್ನಡ ಚಲನ ಚಿತ್ರ ಹಾಗೂ ಕೆಲವು ಟಿ .ವಿ ಸೀರಿಯಲ್ ಗಳ ಛಾಯಾಗ್ರಹಣ ವನ್ನೂ ಮಾಡಿ ಇಂದು ಬೆಂಗಳೂರು ಮಲ್ಲೇಶ್ವರದಲ್ಲಿನ ಒಂದು ಅಪಾರ್ಟ್ಮೆಂಟ್ ನ ಸೆಕ್ಯುರಿಟಿ ಗಾರ್ಡ್ ಆಗಿ ಒಬ್ಬರು ಕೆಲಸ ಮಾಡುತ್ತಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಇವರ ಆರೋಗ್ಯವು ಆಗಾಗ ಸರಿ ಇಲ್ಲದೆ ಇರುವಾಗ ಹಗಲು ರಾತ್ರಿ ಪಾಳಿ ಗಳಲ್ಲಿ ಕೇವಲ ಐದಾರು ಸಾವಿರಕ್ಕೆ ದುಡಿಯುವುದನ್ನ ಕಂಡಾಗ ಎಂತಹವರಿಗೂ ದುಃಖ ವಾಗುತ್ತಲ್ಲದೆ ಕನ್ನಡ ಚಲನಚಿತ್ರ ರಂಗದ ಬಗ್ಗೆ ಖೇದವೆನಿಸುತ್ತೆ.

 ನಾನು ಹೇಳಬಯಸುತ್ತಿರುವುದು ಖ್ಯಾತ ಛಾಯಾ ಗ್ರಾಹಕ "ಅಭಿಷೇಕ್ ರಾಮಚಂದ್ರ "ರ ಬಗ್ಗೆ.( ದಿ// ರೆಬೆಲ್ ಸ್ಟಾರ್ ಅಂಬರೀಷ್ ನಟಿಸಿರುವ "ಮಿಸ್ಟರ್ ಅಭಿಷೇಕ್ " ಇವರ ಮೊದಲ ಚಲನಚಿತ್ರದ ಹೆಸರು ಆದ್ದರಿಂದ ಇವರ ಹೆಸರಿಗೆ ಅಭಿಷೇಕ್ ಸೇರಿ ಕೊಂಡಿದೆ)

 ಕನ್ನಡ ಚಲನ ಚಿತ್ರ ಜಗತ್ತಿಗೆ ಇವರು ಬಂದಿದ್ದು ಆಕಸ್ಮಿಕವೇ. ಇವರನ್ನ ಆ ಕಾಲಕ್ಕೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ರಾಮಕೃಷ್ಣ ಎನ್ನುವರು, ಇವರ ಸೂಕ್ಷ್ಮಮತಿ ಹಾಗೂ ನೈಪುಣ್ಯತೆ ಗಮನಿಸಿ ಇವರನ್ನ ತಮ್ಮ ಸಹಾಯಕ್ಕೆ ಕೆರೆದುಕೊಂಡು ಹೋದರು. ಇವರು ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳು ಹಾಗೂ T V ಸೀರಿಯಲ್ ಗಳಿಗೆ ಸಹಾಯಕ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದಾರೆ. ಅವುಗಳಲ್ಲಿ ಡಾ //ರಾಜ್ ಕುಮಾರ್ ರವರ ರಾಜಾ ನನ್ನ ರಾಜಾ, ಹೊಸ ಬೆಳಕು , ವಸಂತ ಗೀತಾ,  ಜೀವನ ಚೈತ್ರ , ಒಡಹುಟ್ಟಿದವರು, ಒಂದು ಮುತ್ತಿನ ಕಥೆ, ದಿ // ಶಂಕರ್ ನಾಗ್ ರ ಆಕ್ಸಿಡೆಂಟ್ , ದಿ //ಪುಟ್ಟಣ್ಣನವರ ಕಪ್ಪು ಬಿಳುಪು, ಗೆಜ್ಜೆಪೂಜೆ , ನಾಗರ ಹಾವು, ಎಡಕಲ್ಲು ಗುಡ್ಡದ ಮೇಲೆ, ಬಿ. ಆರ್. ಪಂತುಲು ರವರ ಮಾಲತಿ ಮಾಧವ, ಕುಮಾರ್ ಬಂಗಾರಪ್ಪ ರವರ ಅಂಗೈಯಲ್ಲಿ ಅಪ್ಸರೆ. ಮುಂತಾದ ಸುಮಾರು ಮುನ್ನೂರು ಚಿತ್ರಗಳೇ ಅಲ್ಲದೆ, ತಮಿಳಿನ ನಾನ್ ಅವನಿಲ್ಲೈ, ಯಶೋದಾ ಕೃಷ್ಣ , ಗಂಗಾ ಗೌರಿ ಹೀಗೆ. ನಂತರದಲ್ಲಿ ಅನೇಕ ಖ್ಯಾತ ಛಾಯಾಗ್ರಾಹಕರ ಒಡನಾಟದಿಂದ ಅವರ ಸಹಾಯಕನಾಗಿ ಹತ್ತಿರದಿಂದ ಅವರುಗಳ ಕೆಲಸವನ್ನು ಸೂಕ್ಷ್ಮವಾಗಿ ಗಮನಿ ಸುತ್ತದ್ದುದರಿಂದ ಅದರಲ್ಲಿ ಹೆಚ್ಚು ಆಸಕ್ತಿ ಬೆಳೆಸಿ ಕೊಂಡ ಪರಿಣಾಮ ಸ್ವತಂತ್ರವಾಗಿ ಛಾಯಾಗ್ರಾಹಕನಾಗುವ ಅರ್ಹತೆ ಪಡೆದು ಹಲವಾರು ಕನ್ನಡ ಚಲನಚಿತ್ರಗಳಿಗೆ ಇವರು ಛಾಯಾಗ್ರಹಣ ಮಾಡಿದರು. ಅವುಗಳಲ್ಲಿ ಪ್ರಮುಖ ಚಿತ್ರಗಳೆಂದರೆ ಮಿಸ್ಟರ್ ಅಭಿಷೇಕ್ , ರಾಜ,  ಹತ್ತೂರ ಒಡೆಯ,ಶ್ರೀ B C ಪಾಟೀಲರ  ಚೆಲ್ವಿ, ಶ್ರೀ ಕೃಷ್ಣಸಂಧಾನ ಮುಂತಾದವು.

   ಒಮ್ಮೆ ಡಾ // ರಾಜಕುಮಾರ್ ರವರ ಪೂರ್ಣಿಮಾ ಹೊರಾಂಗಣ ಸೆಟ್ ಊಟಿಯ ಲೇಕ್ ನಲ್ಲಿ. ಅವರ ಪ್ರೊಡಕ್ಷನ್ ನ ಮೊದಲ ಚಿತ್ರದ ಚಿತ್ರೀಕರಣ ಸಮಯ.  ಯಾವುದೋ ಕಾರಣಕ್ಕಾಗಿ ಕೆಲವು ತಮಿಳು ಕಿಡಿಗೇಡಿಗಳ ಗುಂಪು ಗಲಭೆ ಎಬ್ಬಿಸಿ ಕೈಗೆ ಸಿಕ್ಕ ಸಾಮಾನುಗಳನ್ನ ನೀರಿಗೆ ಎಸೆಯುತ್ತಿದ್ದರು. ಸೆಟ್ ನಲ್ಲಿದ್ದವರೆಲ್ಲ ಬಹಳ ಹೆದರಿದ್ದರು. ಕೆಲವರು ಅಲ್ಲಿಂದ ತಪ್ಪಿಸಿಕೊಂಡು ಓಡಿದರು. ಆಗ ಶ್ರೀ ರಾಮಚಂದ್ರ ರ ಸಮಯ ಪ್ರಜ್ಞೆಯಿಂದಾಗಿ ರಾಜ್ ಕುಮಾರ್ ರವರು ಇಷ್ಟಪಟ್ಟು ಆ ಕಾಲಕ್ಕೇ ಸಮಾರು ಹನ್ನೆರೆಡು ಲಕ್ಷ ರೂಪಾಯಿ ಕೊಟ್ಟು ಮೊದಲಬಾರಿಗೆ ಖರೀದಿಸಿದ್ದ ಕ್ಯಾಮರಾವನ್ನ ಯಾರಿಗೂ ಕಾಣದ ಹಾಗೆ ಕಪ್ಪು ಬಟ್ಟೆಯಲ್ಲಿ ಸುತ್ತಿ ದೂರದಲ್ಲಿ ಒಂದು ಮರದ ಹಿಂದೆ ಬಚ್ಚಿಟ್ಟು ಬಂದಿದ್ದರು .ಪೋಲಿಸಿನವರು ಬಂದು ಗಲಭೆ ಎಲ್ಲಾ ತಣ್ಣಗಾದಮೇಲೆ ರಾಜ್ ಕುಮಾರ್ ಮೊದಲು ಹುಡುಕಾಡಿದ್ದು ಆ ಹೊಸ ಕ್ಯಾಮರವನ್ನ. ಇವರು ಸುರಕ್ಷಿತವಾಗಿ ಇರಿಸಿದ್ದ ವಿಷಯ ತಿಳಿದು ಬಹಳವಾಗಿ ಹೊಗಳಿ ಸಂತೋಷಪಟ್ಟರು ಎಂದು ಇಂದಿಗೂ ಆ ಕ್ಷಣವನ್ನ ಇವರು ಸ್ಮರಿಸುತ್ತಾರೆ.ಇವರ ಗರಡಿ ಯಲ್ಲಿ ಪಳಗಿ ಖ್ಯಾತರಾದವರು ಅನೇಕರಿದ್ದಾರೆ. ಅದರಲ್ಲಿ  ನಟ ದರ್ಶನ್ ನಟಿಸಿದ್ದ ಜೊತೆಜೊತೆಯಲಿ ಖ್ಯಾತಿಯ ಶ್ರೀ ವಿನೀತ್ ಮೂರ್ತಿ ಸತ್ಯ ಹೆಗ್ಡೆ , ಅಣಜಿ ನಾಗರಾಜ್ , ಮುಂತಾದವರು.

ಶ್ರೀ ರಾಮಚಂದ್ರ ಆ ಕಾಲಕ್ಕೆ ಟಿ ವಿ ಧಾರಾವಾಹಿ ಗಳಿಗೂ ಛಾಯಾಗ್ರಹಣ ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ವಿಜಯ ರಾಘವೇಂದ್ರ ನಟಿಸಿದ್ದ ಅತ್ತಿಗೆ,ಮಹಾನದಿ , ಊರ್ವಶಿ,  ಗೌಡಿತಿಗೌರಮ್ಮ ಹೀಗೆ ಹಲವು.

ಇವರಿಗೆ ಕನ್ನಡದೊಂದಿಗೆ ತಮಿಳು ತೆಲುಗು ಹಿಂದಿ ಭಾಷೆಗಳು ತಿಳಿದಿದ್ದರಿಂದ ಆಗಮಾಜಿ ಮುಖ್ಯಮಂತ್ರಿ ಕೆ. ಕರುಣಾನಿಧಿ ಸಂಬಂಧಿಕರಾದ ಉದಯ ಟಿ. ವಿ. 

ಯ ನಿರ್ದೇಶಕ ಶ್ರೀ ಸೆಲ್ವಂ(ಖ್ಯಾತ ನಟಿ ಮಂಜುಳಾ ಪತಿ ), ಆರ್ಮುಗಂ ಹೀಗೆ ಹಲವರು ಇವರ ಸಹಾಯ ಪಡೆಯುತ್ತಿದ್ದಕಾರಣ ತಮಿಳ್ ನಾಡಿನಹಲವಾರು ತಂತ್ರಜ್ಞರು ಚಿರಪರಿಚಿತರಾದರು.ಇಂದಿಗೂ ಅನೇಕ ಖ್ಯಾತ ನಟರಾದ ರಮೇಶ್ ಅರವಿಂದ್ , ಅನಂತ ನಾಗ್ , ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್ ಹೀಗೆ ಅನೇಕರು ಇವರನ್ನು ಹತ್ತಿರ ದಿಂದ ಬಲ್ಲವರಾದರೂ ಇವರ ನೈಜ ಪರಿಸ್ಥಿತಿ ಯಾರಿಗೂ ಗೊತ್ತಿಲ್ಲ. ರಾಮಚಂದ್ರ ಎಂತಹ ಕಷ್ಟದ ಸಮಯದಲ್ಲೂ ಒಬ್ಬರಿಂದ ಸಹಾಯ ಬೇಡಿದವರಲ್ಲ . ಇವರ ಸ್ವಾಭಿಮಾನವೇ ಇವರನ್ನ ಇಂದು ಸಂಕಷ್ಟಕ್ಕೆ ದೂಡಿದೆ. ಜೀವನ ನಿರ್ವಹಣೆಗೆ ಈ ಎಪ್ಪತ್ತು ವರ್ಷದ ದುರ್ದೈವಿ ಮಲ್ಲೇಶ್ವರಂ ನ ಒಂದು ಅಪಾರ್ಟ್ಮೆಂಟ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ , ಚಳಿ ಗಾಳಿ ಎನ್ನದೆ ಹಗಲು ರಾತ್ರಿ ಪಾಳಿಗಳಲ್ಲಿ ದುಡಿ ಯುತ್ತಿರುವ ಸಂಗತಿ ಎಂತಹವರಿಗೂ ಬೇಸರತರಿಸುತ್ತೆ. ಇಬ್ಬರು ಗಂಡು ಮಕ್ಕಳು ಬೇರೆ ಇದ್ದು ವಾಹನ ಚಾಲಕರಾಗಿದ್ದಾರೆ. ಬಾಡಿಗೆಮನೆಯಲ್ಲಿ ವಾಸ. ಮೂರುವರ್ಷಗಳ ಹಿಂದೆ ಹೆಂಡತಿ ಅಗಲಿದಾಗಿನಿಂದ ಒಂಟಿ ಬದುಕು. Rate this content
Log in

More kannada story from murali nath

Similar kannada story from Tragedy