STORYMIRROR

kaveri p u

Inspirational Others Children

4  

kaveri p u

Inspirational Others Children

ಬಡತನ

ಬಡತನ

1 min
429

ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ಬಡತನವನ್ನೇ ನೋಡುತ್ತಾ ಬಂದ ಈ ಜೋಡಿ, ಮಲ್ಲಪ್ಪ ಮತ್ತು ನೀಲಮ್ಮಾ. ಗಂಡ-ಹೆಂಡತಿ ಇಬ್ಬರೂ ತಮ್ಮ ಮೂರು ಎಕರೆ ಜಮೀನಿನಲ್ಲಿ ತರಕಾರಿ ಹೂ ಬೆಳೆದು ಸಂತೆಗಳಿಗೆ ಹೋಗಿ ಮಾರುತ್ತಿದ್ದರು. ಬಂದ ಹಣದಿಂದ ಮನೆ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಮಕ್ಕಳು ದೊಡ್ಡವರಾದರು. ಬಡತನದ ಬೇಗೆಯಲ್ಲಿಯೇ ಬಲಲುತ್ತಿದ್ದ ದಂಪತಿಗಳು ಮಕ್ಕಳ ಭವಿಷ್ಯದ ಬಗೆಗೆ ಅನೇಕ ಕನಸುಗಳನ್ನು ಕಟ್ಟಿಕಂಡಿದ್ದರು. ಬಡತನಫೊರತಾಗಿಯೂ, ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ಕೊಡಿಸುವ ಅದಮ್ಯ ಬಯಕೆಯನ್ನು ಆ ದಂಪತಿಗಳು ಇಟ್ಟುಕೊಂಡಿದ್ದರು. ಆದರೂ ಅವರ ಓದಿಗೆ ಬಹಳ ಖರ್ಚು ಬರುತ್ತೆ. ನಾವು ಬೆರೆಯೇನಾದ್ರು ಬೆಳೆಯಬೇಕು, ಸ್ವಲ್ಪ ಹಣ ಗಳಿಸಬೇಕು ಅಂತಾ ಮಲ್ಲಪ್ಪಾ ತನ್ನ 3 ಎಕರೆ ಜಮೀನಿಗೆ ಅಧಿಕ ಆದಾಯ ನೀಡುವ ಕಬ್ಬು ಹಾಕಿದನು. 


ಕಬ್ಬು ಸಿಕ್ಕಾಪಟ್ಟೆ ಚನ್ನಾಗಿ ಬೆಳೆದು ನಿಂತಿತ್ತು. ಮಲ್ಲಪ್ಪಾ ಮತ್ತು ನೀಲಮ್ಮನಿಗೆ ಇನ್ನೇನು ನಮ್ಮ ಬಡತನ ದೂರಾಗಬಹುದು ಮಕ್ಕಳನ್ನು ಚನ್ನಾಗಿ ಓದಿಸಿದರೆ ನಮ್ಮದೇನಿದೆ, ಅಂತ ಯೋಚಿಸುತ್ತಿದ್ದರು.


ಸಂಜೆವರೆಗೆ ಕೆಲಸ ಮಾಡಿ ದಂಪತಿಗಳು ಮನೆಗೆ ಹೋದರು. ರಾತ್ರಿ ಬೀದಿ ಕಂಬದ ಹತ್ತಿರ ಸಣ್ಣದಾಗಿ ಕಿಡಿ ಹಾರಿತ್ತು. ಆ ಕಿಡಿ ಬೆಳೆದು ನಿಂತ ಕಬ್ಬಿಗೆ ಹತ್ತಿ ರಾತ್ರೋರಾತ್ರಿ ಬೆಳೆದ ಕಬ್ಬಿಗೆಲ್ಲ ಹತ್ತಿ ಸುಟ್ಟು ಕರಕಲಾಗಿತ್ತು. ಆ ದಂಪತಿಗೆ ಬಡತನದಿಂದ ಹೊರಗೆ ಬರುವ ಅವಕಾಶವನ್ನು ದೇವರು ಮತ್ತೆ ಕಸಿದುಕೊಂಡನು, ಬಡತನವೆಂಬುದು ದೇವರು ಅವರಿಗೆ ಕೊಟ್ಟ ಶಾಪವೇ ಆಗಿ ಹೋಯಿತು. ಕಬ್ಬಿಗಾಗಿ ಮಾಡಿದ ಸಾಲವೂ ದಂಪತಿಗಳ ಮೇಲೆ ಬಂದು ಅವರ ಬದುಕು ಇನ್ನಷ್ಟೂ ಬರಡಾಯಿತು. 



Rate this content
Log in

Similar kannada story from Inspirational