kaveri p u

Inspirational Thriller Others

4  

kaveri p u

Inspirational Thriller Others

ಅವನಲ್ಲ ಅವಳು

ಅವನಲ್ಲ ಅವಳು

1 min
584



ನಾನ್ ಸ್ಟಾಪ್ ನವೆಂಬರ್ - ಮಧ್ಯಂತರ


ಒಂದು ಅದ್ಭುತ ವಿಷಯ ಚಿತ್ರವಾಗಿ ಮೂಡಿಬಂದರೆ, ವೀಕ್ಷಕರಿಗೆ ಹಬ್ಬವಾಗುವುದರಲ್ಲಿ ಸಂಶಯವಿಲ್ಲ. ಅಂತಹ ಹಬ್ಬದ ಉಡುಗೊರೆಯನ್ನು ಅವನಲ್ಲ ಅವಳು ಚಿತ್ರ ನೀಡಿದೆ.


ದಿವಂಗತ ಸಂಚಾರಿ ವಿಜಯ್ ನಟನೆಯ ಈ ಚಿತ್ರ ದೇಶದಲ್ಲಿ ತೃತೀಯ ಲಿಂಗಿಗಳ ಬಗ್ಗೆ ಇರುವ ಅಸಡ್ಡೆ, ಅನಾದರದ ಬಗ್ಗೆ ಹೇಳುತ್ತದೆ.


 ಚಲನಚಿತ್ರದಲ್ಲಿ, ಹೆಣ್ಣು ಗಂಡಾಗಿ ಬದಲಾಗುವ ಚಿಕಿತ್ಸೆಯನ್ನು ಪಡೆದರೆ ಮಾತ್ರವೇ ನಮ್ಮಂತವರಿಗೆ ಮುಕ್ತಿಯೆಂದು ಬಲವಾಗಿ ನಂಬಿದ್ದ ಮಾದೇಶ, ವಿದ್ಯಾ ಆಗಿ ಪರಿವರ್ತನೆಯಾಗಲು ಅಂತಹ ಚಿಕಿತ್ಸೆಯನ್ನು ಪಡೆಯುತ್ತಾನೆ/ಳೆ. ಚಿತ್ರದ ಇದೇ ಸನ್ನಿವೇಶವನ್ನು ನನ್ನ ದೃಷ್ಟಿಕೋನದಲ್ಲಿ ಬದಲಾಯಿಸಿದಾಗ,


ಮಾದೇಶ (ವಿದ್ಯಾ) : (ತನ್ನಂತಹ ಇನ್ನೊಬ್ಬ ತೃತೀಯ ಲಿಂಗಿಗೆ ) ಅಕ್ಕಾ, ನನಗೆ ಆ ಚಿಕಿತ್ಸೆ ಆಗ್ಬೇಕು, ನನ್ನ ಜೀವನಕ್ಕೆ ಮುಕ್ತಿ ಬೇಕಕ್ಕಾ.


ಇನ್ನೊಬ್ಬ : ವಿದ್ಯಾ, ಅದಕ್ಕೆ ತುಂಬಾ ಖರ್ಚು ಆಗತ್ತೆ. ಲಕ್ಷ ಲಕ್ಷ ಹಣ ಬೇಕು.


ಮಾದೇಶ /ವಿದ್ಯಾ : ಎಷ್ಟಾದರೂ ಆಗ್ಲಿ ಅಕ್ಕಾ, ಭಿಕ್ಷೆ ಆದ್ರೂ ಬೇಡಿ ದುಡ್ಡು ಹೊಂದಿಸ್ತೀನಿ, ಮಾಲಕಿನ್ ಗೆ ಹೇಳಿ ನನ್ನ ಚಿಕಿತ್ಸೆಗೆ ವ್ಯವಸ್ಥೆ ಮಾಡ್ಸಕ್ಕಾ.


ಇನ್ನೊಬ್ಬ : ಸರಿ ಎರಡು ಲಕ್ಷ ರೆಡಿ ಮಾಡು, ಮುಂದಿನ ವಾರಾನೇ ಚಿಕಿತ್ಸೆ ಮಾಡ್ಸೋಣ.


(ಒಂದು ವಾರದ ನಂತರ )


ಮಾದೇಶ : ಅಕ್ಕಾ ದುಡ್ಡು ತಗೋ.


ಇನ್ನೊಬ್ಬ : ಸರಿ, ನೀನಿಲ್ಲೆ ಇರು. ನಾನು ಬಂದು ಕರ್ಕೊಂಡು ಹೋಗ್ತೀನಿ. ಅಲ್ಲಿವರೆಗೂ ಇಲ್ಲೇ ಕಾಯಿ.


ಮಾದೇಶ : ಆಯ್ತಕ್ಕಾ.


ಸಂಜೆ ಕಳೆದು ರಾತ್ರಿಯಾಯ್ತು. ಇನ್ನೊಬ್ಬನ ಪತ್ತೆಯೇ ಇಲ್ಲ. ಮಾದೇಶನಿಗೆ ತಾನು ಮೋಸ ಹೋದದ್ದು ತಿಳಿಯಿತು. 2 ಲಕ್ಷ ಹಣವೂ ಹೋಯಿತು. ಜೊತೆಗೆ ತನ್ನ ಜೀವಕ್ಕೆ ಮುಕ್ತಿ ಸಿಗುವುದಿಲ್ಲ ಎಂದು ಮಾದೇಶ ತುಂಬಾ ನೊಂದುಕೊಳ್ಳುತ್ತಾನೆ. ಮತ್ತೇ ಹಣ ಹೊಂದಿಸಲು ಭಿಕ್ಷೆಗೆ ಇಳಿಯುತ್ತಾನೆ!


Rate this content
Log in

Similar kannada story from Inspirational