STORYMIRROR

Prerana Kulkarni

Abstract Classics

2  

Prerana Kulkarni

Abstract Classics

ಅವಳು...

ಅವಳು...

1 min
87

ಅಂದು ಅವಳನ್ನು ಕಣ್ಣೆವೆ ಕೂಡ ಬಡೆಯದೇ ನೋಡುತ್ತಾ ನಿಂತಿದ್ದೆ. ಅವಳು ಕೂಡಾ ನಿಂತಿದ್ದಳು.

ಮೊದಲ ನೋಟಕ್ಕೆ ಅವಳಿಗೆ ಮನಸೋತಿದ್ದೆ

ಅವಳೂ ಕೂಡಾ "

ನನಗೂ ನಿನ್ನ ಮೇಲೆ ಪ್ರೀತಿಯಾಗಿದೆ..ಅಂತಿಂಥ ಪ್ರೀತಿಯಲ್ಲ..ನಿನ್ನ ನಿನ್ನ ಉಸಿರಿನ ಜೊತೆಗೆ ಕೊನೆಯಾಗುವಂಥ ಪ್ರೀತಿ." ಎಂದಳು..


ನಂಬಿಕೆ, ವಿಶ್ವಾಸ,ಭರವಸೆ ಈ ಎಲ್ಲ ಶಬ್ದಗಳಗೆ ಅವಳೊಂದೆ ಅರ್ಥದಂತಿದ್ದಳು...


ಒಂದು ದಿನ ಇದ್ದಕ್ಕಿದ್ದಂತೆ ಕಾರಣ ಕೂಡ ಹೇಳದೇ ನನ್ನ ಲೈಫ್ ನಿಂದ ನಿರ್ಗಮಿಸಿದಳು...


ಬಹುಶಃ ಅವಳಿಗೆ ನಾನೀಗ ಸವಕಲು ನಾಣ್ಯವಾಗಿದ್ದೇನೋ??

ಅಥವಾ ಅವಳು ಬಂದ ಉದ್ದೇಶ ಮುಗಿದಿತ್ತೋ??


ಆದ್ರೆ ಒಂದಂತೂ ನನಗೆ ಖಾತ್ರಿಯಾಗಿತ್ತು,


ಅವಳು ನನಗೆ ,ಕೈಕೊಟ್ಟು ಹೋಗುವ ದಿನವನ್ನು ಫಿಕ್ಸ್ ಮಾಡೋಕೊಂಡೇ ನನ್ನ ಲೈಫ್ ನಲ್ಲಿ ಬಂದಿದ್ದಳೆಂದು..

ಒಂಥರ ಸೂಪರ್ ಮಾರ್ಕೆಟ್ ನಲ್ಲಿ ಮಾರುವ ಸಾಮಗ್ರಿಗಳ ಮೇಲೆ ಬರೆದ ಎಕ್ಸಪಾಯರಿ ಡೇಟ್ ನ ಹಾಗೆ...


Rate this content
Log in

Similar kannada story from Abstract