Prerana Kulkarni

Abstract Others

2  

Prerana Kulkarni

Abstract Others

ಅಂತರಂಗ

ಅಂತರಂಗ

2 mins
120


ಕೆಲ ಒಮ್ಮೆ ನಮಗೆ ಅರಿವಿರದೆ ಕೆಲವು ತಪ್ಪು ಮಾಡಿ ಬಿಟ್ಟಿರುತ್ತೇವೆ. ಅದರ ಅರಿವಿರದೆ ನಮ್ಮದೇ ಸರಿ ಎನ್ನುವಂತೆ ವಾದ ಮಾಡಿ ಬಾಯಿ ಮುಚ್ಚಿಸಿರುತ್ತೇವೆ ಅಲ್ಲವೇ...


ಅಂಥದ್ದೇ ಒಂದು ತಪ್ಪು ನಾನೂ ಮಾಡಿದ್ದೆ. ............ನಾನು ಎಂಟನೇ ತರಗತಿಯಲ್ಲಿ ಇದ್ದಾಗ.


ನಮ್ಮ ಸಂಬಂಧಿಕರ ಮದುವೆ ಮಾಹಾರಾಷ್ಟದ ಒಂದು ಊರಿನಲ್ಲಿ ಇತ್ತು. ನಮ್ಮ ಕುಟುಂಬದವರ ಜೊತೆ ನಾನೂ ಕೂಡಾ ಹೋಗಿದ್ದೆ....


ಎಲ್ಲಿ ಬೇಕಂದಲ್ಲಿ ಚಪ್ಪಲಿ ಬಿಟ್ಟು ಬರುತ್ತಿದ್ದ ನನಗೆ ಅಮ್ಮ ನಾಲ್ಕಾರೂ ಬಾರಿ ವಾರ್ನ್ ಬೇರೆ ಮಾಡಿದ್ದಳು.

ಈ ಬಾರಿ ಚಪ್ಪಲಿ ಕಳೆದುಕೊಂಡರೆ ಆರು ತಿಂಗಳು ಹೊಸ ಚಪ್ಪಲಿ ಕೊಡುಸುವದೇ ಇಲ್ಲ ಅಂತ.

ಹಾಗಾಗಿ ಸಂಜೆ ಮದುವೆಯ ಮನೆಗೆ ಹೋಗಿದ್ದಾಗಿನಿಂದ ನನ್ನ ಗಮನ ಮದುವೆ, ಆಟ, ಊಟಕ್ಕಿಂತ ನನ್ನ ಚಪ್ಪಲಿ ಸುರಕ್ಷಿತವಾಗಿ ಇವೆಯೇ ಅನ್ನೋ ಕಡೆಗೆ ಇತ್ತು.ಅದೆಷ್ಟು ಬಾರಿ ನಾನು ಬಿಟ್ಟ ಆ ಮೂಲೆಯಲ್ಲಿ ಚಪ್ಪಲಿ ಇದೆಯಾ??

ಅಂತ ನೋಡಿ ಚೆಕ್ ಕೂಡಾ ಮಾಡಿ ಬಂದಿದ್ದೆ. ಮತ್ತೆ ಅಲ್ಲೆಲ್ಲಾದರೂ ಹಾಕಿಕೊಂಡು ತಿರುಗಾಡಿದರೆ ಎಲ್ಲೋ ಕಳೆದು ಬಿಡುತ್ತೇನೆ ಅಂತ ಬರೆಗಳಲ್ಲೆ ತಿರುಗುತ್ತಿದ್ದೆ....


ಮರುದಿನ ಸಂಜೆ ನಾಲ್ಕರ ವೇಳೆಗೆ ಮದುವೆ ಕಾರ್ಯಕ್ರಮವೆಲ್ಲ ಮುಗಿದು ನಾವೆಲ್ಲರೂ ಮರಳಿ ಊರಿಗೆ ಹೋಗುವ ಸಮಯವಾಗಿತ್ತು. ಆಟವಾಡುತ್ತಿದ್ದ ನನಗೆ ಅಮ್ಮ, ಬೇಗ ಬಾ ಬಸ್ಸಿನ ಟೈಮ್ ಆಗುತ್ತಿದೆ. ಇದು ಊರಿಗೆ ಹೋಗಲು ಕೊನೆಯ ಬಸ್ ಬೇರೆ. ಆಮೇಲೆ ಬಸ್ಟಾಂಡ್ ನೆ ಗತಿಯಾಗುತ್ತದೆ ನಾಳೆ ಬೆಳಗಿನವರೆಗೂ ಅಂತ ಅವಸರ ಮಾಡಿದಳು. ನಾನು ಮೂಲೆಯಲ್ಲಿ ಕಳೆದ ಚಪ್ಪಲಿಯ ಕಡೆಗೆ ನಡೆದಿದ್ದೆ.


ಆದ್ರೆ ನಂಗೆ ಆಘಾತ ಕಾದಿತ್ತು...


ಅರ್ಧ ಗಂಟೆಗೆ ಕೆಳಗೆ ಅಲ್ಲಿದ್ದ ನೀಲಿ ಬಣ್ಣದ ನನ್ನ ಪ್ಯಾರಾಗೋನ್ ಚಪ್ಪಲಿ ಅಲ್ಲಿ ಇರಲೇ ಇಲ್ಲ....ಕಣ್ಣಲ್ಲಿ ನೀರು ಬಂದಿತು...(ಅದು ಅಮ್ಮನ ಬೈಗುಳಗಳಿಗೆ ಹೆದರಿ ಬಂತೋ, ಬೇಸಿಗೆಯ ಬಿರು ಬಿಸಿಲಿನ ನೆನಪಾಗಿ ಬಂತೋ,ಅಥವಾ ಚಪ್ಪಲಿ ಕಳೆದಿದ್ದಕ್ಕೆ ಬಂತೋ ಗೊತ್ತಿಲ್ಲ) ಏನೂ ಮಾಡಬೇಕು,ಎಲ್ಲಿ ಹುಡುಕಬೇಕು ಅಂತ ಅಲ್ಲೆಲ್ಲ ಇದ್ದ ಚಪ್ಪಲಿಗಳನ್ನು ಕೆದಕಿ ನೋಡಿದರೂ ನನ್ನ ಚಪ್ಪಲಿಗಳ ಸುಳಿವು ಸಿಗಲೇ ಇಲ್ಲ. ಅಮ್ಮ ಮೊತ್ತೊಮ್ಮೆ ಬೇಗ ಬಾ ಅಂತ ಕೂಗಿದ್ದಳು..


ಆಗಲೇ ಇನ್ನೊಂದು ಮೂಲೆಯಲ್ಲಿದ್ದ ಚಪ್ಪಲಿ ನಂಗೆ ಕಾಣಿಸಿತು. ಅವೂ ಕೂಡಾ ಸೇಮ್ ಸೈಜ್, ಸೇಮ್ ಬಣ್ಣದ್ದು ಇತ್ತು...

ಇಲ್ಲಿಗೇ ಹೇಗೆ ಬಂದವು ನನ್ನ ಚಪ್ಪಲಿ... ಇವಕ್ಕೇನಾದ್ರೂ ಕಸಲು ಬಂದಿದ್ದವಾ!! ಅಂತ ಅನಿಸಿದರೂ ಅಬ್ಬ...!! ಅಂತೂ ಚಪ್ಪಲಿ ಸಿಕ್ಕಿತಲ್ಲಾ ಅಂತ ಸಂಭ್ರಮದಿಂದ ಚಪ್ಪಲಿ ಹಾಕಿಕೊಂಡು ಅಲ್ಲಿಂದ ಹೊರಡುತ್ತಿದ್ದೆ... ಆದ್ರೆ ಅದೇ ಸಮಯಕ್ಕೆ ಒಬ್ಬ ನನ್ನಷ್ಟೇ ವಯಸ್ಸಿನ ಹುಡುಗಿ ಮತ್ತೆ ಅವಳ ಅಮ್ಮ ಬಂದರು. "ಅಮ್ಮ, ನೋಡಲ್ಲಿ, ಆ ಹುಡುಗಿ ನನ್ನ ಚಪ್ಪಲಿ ಹಾಕಿಕೊಂಡಿದ್ದಾಳೆ ಅಂತ ಕೂಗತೊಡಗಿಡಳು.


ಅವಳ ಅಮ್ಮ ಏ ಹುಡುಗಿ,ಇದು ನನ್ನ ಮಗಳ ಚಪ್ಪಲಿ, ಕಳ್ಳೀ ಇವಳೂ  ಅಂತ ನನ್ನ ಕಡೆಗೆ ಓಡಿ ಬಂದರು.

ಏನೂ ಮಾಡಬೇಕು ಅಂತ ಗೊತ್ತಾಗಲೇ ಇಲ್ಲ. ಚಪ್ಪಲಿಯನ್ನು ಬಿಡುವ ಹಾಗಿರಲಿಲ್ಲ...ಯಾಕೆಂದ್ರೆ ಅವನ್ನು ನಾನು ನನ್ನದೇ ಅಂತ ನಂಬಿದ್ದೆ. ನಾನೂ ಕೂಡಾ ಅವರಷ್ಟೇ ಜೋರ್ ಬಾಯಿ ಮಾಡಿ...ಇಲ್ಲಾ ಅಂಟಿ ಇದು ನನ್ನ ಚಪ್ಪಲಿನೇ...

ನಿಮ್ಮದು ಎಲ್ಲಿ ಇಟ್ಟಿದ್ದೀರಿ ನನಗೇನು ಗೊತ್ತು...ಅಂತೆಲ್ಲ ಇವು ನನ್ನ ಚಪ್ಪಲಿನೇ ಅಂತ ವಾದಿಸತೊಡಗಿದ್ದೆ.


ಅದೇ ಸಮಯದಲ್ಲಿ ಅಲ್ಲಿಗೆ ಬಂದ ನನ್ನ ಮಾಮ ಕೂಡಾ ನಾನು ಊರಿಂದ ಬರುವಾಗ ನಾನು ಆ ಚಪ್ಪಲಿ ಮೆಟ್ಟಿದ್ದು ನೋಡಿದ್ದ. ಅದೇ ಸಮಯದಲ್ಲಿ ಅವನು ಅಲ್ಲಿಗೆ ಬಂದು ನನ್ನ ಪರವಾಗಿ ಬ್ಯಾಟಿಂಗ್ ಮಾಡಿದ್ದಕ್ಕೆ ಆ ಆಂಟಿ ತಮ್ಮ ಮಗಳನ್ನು ಬೈಯುತ್ತಾ ಎಲ್ಲಿ ಬಿಟ್ಟಿದ್ದಿ??? ಸರಿಯಾಗಿ ಹುಡುಕು ಅನ್ನುತ್ತಾ ಮೂಲೆಯಲ್ಲಿ ಇದ್ದ ಚಪ್ಪಲಿಗಳಲ್ಲಿ ಹುಡುಕತೊಡಗಿದರು. ನಾನು ಬದುಕಿದೆಯಾ ಬಡ ಜೀವವೇ ಎನ್ನುತ್ತಾ ಆಗಲೇ ಆ ಮದುವೆ ಮಂಟಪದ ಗೇಟ್ ನಲ್ಲೇ ನನಗಾಗಿ ಕಾಯುತ್ತಿದ್ದ ಅಮ್ಮನ ಬಳಿಗೆ ಓಡಿದ್ದೆ...


ಆದ್ರೆ ಬೆಳಿಗ್ಗೆ ಎದ್ದು ಸೂಕ್ಷ್ಮವಾಗಿ ನೋಡಿದಾಗ ಇವು ನನ್ನ ಚಪ್ಪಲಿ ಅಲ್ಲ, ಅವು ಅವರ ಚಪ್ಪಲಿನೇ ಅಂತ.ಯಾಕೆಂದ್ರೆ ನನ್ನ ಚಪ್ಪಲಿಯ ಹಿಮ್ಮಡಿಯಲ್ಲಿ ಮುಳ್ಳುಗಳು ಚುಚ್ಚಿದ ಮಾರ್ಕ್ ಇದ್ದವು. ಆದ್ರೆ ಇವಕ್ಕೆ ಯಾವ ಮಾರ್ಕ್ ಇರಲಿಲ್ಲ.


ಆದ್ರೆ ಕಾಲ ಮಿಂಚಿ ಹೋಗಿತ್ತು. ನಾನು ನನ್ನ ಅರಿವಿರದೆ ತಪ್ಪು ಮಾಡಿದ್ದೆ....ಈಗಲೂ ಎಲ್ಲಿಯಾದರೂ ಚಪ್ಪಲಿರಾಶಿಯಲ್ಲಿ ಬ್ಯು ಕಲರ್ ಚಪ್ಪಲಿ ನೋಡಿದರೆ ನನ್ನ ಆ ಚಪ್ಪಲಿಗಳು ನಾ ಮಾಡಿದ ತಪ್ಪನ್ನು ನೆನಪಿಸಿ ಅಣಕಿಸಿದಂತೆ ಅನ್ನಿಸುತ್ತದೆ...

ತಪ್ಪು ದೊಡ್ಡದಾದರೇನು??? ಚಿಕ್ಕದಾದರೇನು.. ಅರಿವಿರದೇ ಮಾಡಿದ್ದರೂ, ತಪ್ಪು ತಪ್ಪೇ ಅಲ್ಲವೇ?


Rate this content
Log in

Similar kannada story from Abstract