ಮಾಸ್ಕ್
ಮಾಸ್ಕ್


ಸಿಟಿಯ ಬಹಳಷ್ಟು ಜನರೆಲ್ಲ ಲಾಕ್ ಡೌನ್ ,ಸೀಲ್ ಡೌನ್ ಅನ್ನುತ್ತಾ ಮಾಸ್ಕ್ ತೊಟ್ಟುಕೊಂಡು , ಟಿವಿಯಲ್ಲಿ ಬರುವ ಕರೊನಾದ ಅಬ್ಬರಕ್ಕೆ ಕುಳಿತಲ್ಲೇ ನಡಗತೊಡಗಿದ್ದರೆ,ಮತ್ತೆ ಕೆಲವರು ವರ್ಕ್ ಫ್ರಾಮ್ ಹೋಮ್ ಎನ್ನುತ್ತಾ ಲ್ಯಾಪ್ಟಾಪ್ ನಲ್ಲಿ ದಿನವೆಲ್ಲಾ ಮುಖ ಹುದುಗಿಸಿದ್ದರು.
ಮಾತೆಯರು ಮನೆಯಲ್ಲಿದ್ದ ಮನೆ ಮಂದಿಗಾಗಿ ಅಡಿಗೆ ಮಾಡಲು ಇಡೀ ದಿನ ಕಿಚನ್ ನಲ್ಲೇ ಕಳೆದರೆ, ಇನ್ನೂ ಕೆಲ ಹೆಂಗಳೆಯರು ಮಕ್ಕಳ ಗಲಾಟೆ, ಪತಿಯರ ಆರ್ಡರ್, ಬಾರದ ಕೆಲಸದವರು ,ತಮಗೆ ಬೇಕಾದ್ದ ತರಕಾರಿ ಸಿಗುತ್ತಿಲ್ಲ,ಎಂದು ಗೋಣಗುತ್ತಿದ್ದರೆ, ಹೆಚ್ಚು ಜನ ಆನ್ ಲೈನ್ ನಲ್ಲೇ ಸಾಮಾನು ತರಿಸಿಕೊಂಡು ಮತ್ತೆ ಬರುತ್ತಿರುವ ರಾಮಾಯಣ, ಮಾಹಾಭಾರತ,ಶಕ್ತಿಮಾನ್ ನೋಡುತ್ತಾ, ಮಾಡಿದ ತಿಂಡಿ ಚಪ್ಪರಿಸುತ್ತಾ ಹೊರಗೆ ತಿರುಗಾಡಲು ಆಗದ್ದಕ್ಕೆ ಕರೊನಾಕಕ್ಕೆ ಹಿಡಿಶಾಪ ಹಾಕುತ್ತಿದ್ದರು.
ಇನ್ನೊಂದು ಕಡೆಗೆ ಲಾಕ್ ಡೌನ್ ದಿಂದ ಸೋಲಿಗಾ ಅದಿವಾಸಿಗಳಿಗೆ ಕಾಫಿ ಪ್ಲಾಂಟೇಶನ್ ದಿನಗೂಲಿ ಕೂಡಾ ಸಿಗದೇ ಮನೆಯಲ್ಲಿ ತಿನ್ನಲು ಅಕ್ಕಿ,ಉಪ್ಪು ಬಿಟ್ಟು ಏನು ಇಲ್ಲದೆ,ಬರೀ ಗಂಜಿ ತಿಂದುಕೊಂಡು ,ಇತ್ತ ಕಾಡಿನ ಹಟ್ಟಿಯೊಳಗೆ ಸುಮ್ಮನೆ ಕೂಡಲಾಗದೆ, ಸಿಟಿಯ ಕಡೆ ಬರಲು ಕೂಡಾ ಹಿಂಜರಿದು ಚಡಪಡಿಸುತ್ತಿದ್ದರು.
ಆಗಲೇ ಅವರ ಹಾಡಿಯ ಮುಖಂಡ
"ನಮಗೆ ಅಗತ್ಯ ವಸ್ತುಗಳನ್ನು ,ಪಡಿತರ ಕೊಡುವಂತೆ ವತ್ತಾಯಿಸಲು ಅಧಿಕಾರಿಗಳ ಮುಂದೆ ಧರಣಿ ಮಾಡಬೇಕಿದೆ,
ಆದರೆ, ಮುಖಕ್ಕೆ ತೊಡದೇ ಅಲ್ಲಿಗೆ ಹೋಗಲು ಸಾಧ್ಯ ಇಲ್ಲ.
ಹೊಟ್ಟಿಗೆ ಸರಿಯಾಗಿ ಸಿಗದವರಿಗೆ ಇನ್ನೂ ಅವೆಲ್ಲ ಎಲ್ಲಿಂದ ಬರಬೇಕು??"
ಅವರಲ್ಲೇ ಒಂದುಷ್ಟು ಸಿಟಿಯ ಮುಖ ನೋಡಿದ ಒಂದಿಷ್ಟು ಓದಿದವನು ಹೇಳಿದಾಗ ಹೆಂಗಳೆಯರೆಲ್ಲ ತಲೆಯ ಮೇಲೆ ಕೈಹೊತ್ತು ಕುಳಿತರು.
ಆಮೇಲೆ ಅದೇನೋ ಹೊಳೆದಂತೆ ಆಗಿ ಅವರ ಮುಖಗಳಲ್ಲಿ ಮಂದಹಾಸ ಮಿನಿಗಿತು.
ಮಳೆಗಾಲ ಮಳೆಯಿಂದ ನೆನೆಯದಿರಲು,
ತಲೆಗೆ ಎಲೆಯಿಂದ ಟೋಪಿ ಮಾಡಿಕೊಳ್ಳುವಂತೆ ಮುಖಕ್ಕೂ ಯಾಕೆ ಹೀಗೆ ಮಾಡಿ ಕೊಳ್ಳಬಾರದು ಎಂದೆನಿಸಿ , ಒಬ್ಬಬ್ಬರಾಗಿ ತಮ್ಮ ಗುಡುಸಲಿನಿಂದ ಹೊರಬಂದು
ಅಡಿಕೆ ಮರದ ಎಲೆಗಳನ್ನು ಗಿಡದ ನಾರನ್ನು ಸೇರಿಸಿ ನೈಸರ್ಗಿಕವಾಗಿ ಮಾಸ್ಕ್ ತಯಾರಿಸಿ ತಮ್ಮೆಲ್ಲಾ ಜನರಿಗೆ ಕೊಡತೊಡಗಿದ್ದರು.
ತಮ್ಮ ಹತ್ತಿರ ದುಡ್ಡಿಲ್ಲದಿದ್ದರೇನು?? ಪ್ರಕೃತಿ ಮಾತೇ ಕೊಟ್ಟ ಖಾಜಾನೆಯೇ ಇದೆಯಲ್ಲ ಬದುಕಲು ಎಂದು ತೋರಿಸಿಕೊಟ್ಟಿದ್ದರು ಅವರೆಲ್ಲ..