Prerana Kulkarni

Abstract Children Stories

2  

Prerana Kulkarni

Abstract Children Stories

ಅಪರಾಧಿ ಪ್ರಜ್ಞೆ

ಅಪರಾಧಿ ಪ್ರಜ್ಞೆ

2 mins
97


ಹುಟ್ಟಿನಿಂದ ಅದೆಷ್ಟೋ ತಪ್ಪುಗಳನ್ನು ನಾವು ಮಾಡುತ್ತಲೇ ಇರುತ್ತೇವೆ..ಕೆಲವು ತಪ್ಪುಗಳನ್ನು ಮುಚ್ಚಿಹಾಕಿ ಮರೆತು ಬಿಡುತ್ತೇವೆ...

ಕೆಲವು ತಪ್ಪುಗಳಿಂದ ಪಾಠವನ್ನೂ ಕಲಿಯುತ್ತೇವೆ.

ಇನ್ನೂ ಕೆಲವು ತಪ್ಪುಗಳು ಮರೆಯಲಾರದ ನೆನಪುಗಳಾಗಿ ನಮ್ಮ ಜೊತೆಗೆ ಉಳಿದುಕೊಂಡು ಬಿಡುತ್ತವೆ. ಕೊನೆಯವರೆಗೂ.....


ಅಂಥ ಒಂದು ನೆನಪನ್ನು ಇಂದು ನಿಮ್ಮೆಲ್ಲರ ಮುಂದೆ ನೆನಪಿಸಿಕೊಂಡು ಒಪ್ಪಿಕೊಳ್ಳಲು ಇಷ್ಟ ಪಡುತ್ತೇನೆ...


ಆಗ ನಾನು ಯುನಿವರ್ಸಿಟಿಯಲ್ಲಿ ಓದುತ್ತಿದ್ದೇ. ನಮ್ಮ ಹಳ್ಳಿಯಿಂದ  ಆ ಸಿಟಿಗೆ 42 km ದೂರ ಇತ್ತು. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಕೇವಲ 36 km ಗೆ ಮಾತ್ರ ಕೊಡುತ್ತಿದ್ದರು. ಹೀಗಾಗಿ ನನ್ನ ಪಾಸ್ ಹಿಂದಿನ ಹಳ್ಳಿಗೆ ಮುಗಿಯುತ್ತಿತ್ತು.

ಆಮೇಲೆ ದಿನಾಲೂ ನಾಲ್ಕು ರೂಪಾಯಿಯ ಟಿಕೆಟ್ಸ್ ಮತ್ತೆ ತೆಗಿಸಿ ಪ್ರಯಾಣ ಮಾಡಬೇಕಾಗುತ್ತಿತ್ತು. ಕೆಲಒಮ್ಮೆ ಮೂರು ರೂಪಾಯಿ ಉಳಿಸಲು ಆ ಬಸ್ ನಿಂದ ಇಳಿದು 1 ರೂಪಾಯಿ ಗೆ ನಮ್ಮೂರಿಗೆ ಕರೆದುಕೊಂಡು ಹೋಗುವ ಖಾಸಗಿ ಟ್ರಾವೆಲ್ಸ್ ಗೆ ಹತ್ತುತ್ತಿದ್ದೆ ಕೂಡಾ...


 ನಮ್ಮ ಕ್ಲಾಸ್ ಟೈಮಿಂಗ್ 11 :30 to 5 :30 pm.. ಬಸ್ ಸ್ಟಾಂಡ್ ಗೆ ಬಂದು ಬಸ್ ಗೆ ಕಾಯಿದು ಬಸ್ ಹತ್ತಿ ಕಿಟಕಿಯ ಪಕ್ಕದ ಸೀಟಿನಲ್ಲಿ ಕುಳಿತೆ..ಬಸ್ ನಲ್ಲಿ ಒಂದು ಏಳೆಂಟು ಪ್ರಯಾಣಿಕರು ಮಾತ್ರ ಇದ್ದರು.ಇನ್ನೂ ಕೆಲವರು ಹತ್ತುತ್ತಿದ್ದರು.

ಎಂದಿನಂತೆ ಕಂಡೆಕ್ಟರ್ ,ಡ್ರೈವರ್ ಟೀ ಕುಡಿಯಲು ಕ್ಯಾಂಟೆನ್ ಗೆ ಹೋಗಿದ್ದರು...


ಬೆಳಗ್ಗೆಯಿಂದ ನೋವಾಗುತ್ತಿದ್ದ ತಲೆ ಈಗ ಸಿಡಿಯತೊಡಗಿತ್ತು.ಬ್ಯಾಗ್ ನಿಂದ ಒಂದು ತಲೆ ನೀವು ನಿವಾರಿಸುವ ಟ್ಯಾಬ್ಲೆಟ್

ತೆಗೆದು ,ನುಂಗಿ ನೀರು ಕುಡಿದೆ. ಟ್ಯಾಬ್ಲೆಟ್ ನ ಪರಿಣಾಮವೋ , ಆಯಾಸಕ್ಕೊ,ಅಥವಾ ಕಿಟಕಿಯಿಂದ ಬರುತ್ತಿದ್ದ ತಂಗಾಳಿಗೋ ಬೇಗನೆ ನನಗೆ ನಿದ್ದೆ ಹತ್ತಿ ಬಿಟ್ಟಿತು.....


ಅದೆಷ್ಟು ಹೊತ್ತು ಇನ್ನೂ ನಿದ್ದೆ ಮಾಡುತ್ತಿದ್ದೇನೋ ಏನೋ... ಒಂದಿಷ್ಟು ಆಕಳುಗಳು ರಸ್ತೆಯ ಮೇಲೆ ಸರಕ್ಕನೆ ಓಡುತ್ತಾ ಬಂದು ಬಿಟ್ಟದ್ದವು ಅಂತ ಕಾಣುತ್ತದೆ. ಡ್ರೈವರ್ ಸಡನ್ನಾಗಿ ಬ್ರೇಕ್ ಹಾಕಿದ.ಅದರ ಕುಲುಕಾಟಕ್ಕೆ ನನ್ನ ನಿದ್ದೆಗೂ ಒಮ್ಮೆಲೇ ಬ್ರೇಕ್ ಬಿದ್ದಿತ್ತು...ಈಗ ಎಲ್ಲಿದ್ದೇನೆ ಅಂತ ಕಣ್ಣುಜ್ಜಿಕೊಂಡು ನೋಡಿದೇ...


ಅರೇ...ಇದು ನಮ್ಮ ಹಳ್ಳಿಯ ಬಸ್ಟಾಂಡ್ ಹತ್ತಿರದ ಗಿಡಗಳು ಅಲ್ಲವೇ... ಆಗಲೇ ಊರು ಬಂದು ಬಿಟ್ಟಿತೇ...??

ಆಗಲೇ ಟಿಕೇಟ್ ತೊಗೊಳ್ಳದೆ ಇರುವದು ನೆನಪಾಯಿತು ನನಗೆ...ಟಿಕೇಟ್ ನೇ ತೆಗೆದುಕೊಳ್ಳಲಿಲ್ಲ.ಎನ್ ಮಾಡಲಿ ಈಗ ,ಕಂಡೆಕ್ಟರ್ ಗೆ ಸಾರಿ ಹೇಳಿ,ರಿಕ್ವೆಸ್ಟ್ ಮಾಡಿ ಟಿಕೆಟ್ ತೊಗೋಬೇಕು....ಛೇ... ನನ್ನ ನಿನ್ನೆಗಷ್ಟು ಅಂತ ಹಿಡಿಶಾಪ ಹಾಕುತ್ತಿದ್ದೆ. ಆಗಲೇ ಬಸ್ ನಿಂತಿತ್ತು...


ಅಷ್ಟೇ ಅಲ್ಲ ಬಸ್ ನಿಲ್ಲಿಸಿದವರು ಟಿಕೆಟ್ಸ್ ಚಕ್ಕೆರ್...!!!ಕಾಲು ಕೆಳಗಿನ ನೆಲವೇ ಕುಸಿದ ಅನುಭವ ನನಗೆ..ಎಂದೂ ಹೀಗೆ ಟಿಕೆಟ್ಸ್ ತೊಗೊಳ್ಳದೆ ಪ್ರಯಾಣ ಮಾಡಿಲ್ಲ. ಇವತ್ತೇ ಹೀಗಾಗಬೇಕಾ?? ಎನ್ ಮಾಡಲಿ...?? ಒಂದೂ ಗೊತ್ತಾಗತ್ತಲೇ ಇರಲಿಲ್ಲ. ಆಗಲೇ ಕಂಡೆಕ್ಟರ್ ಟಿಕೆಟ್ಸ್ ಬಾಕ್ಸ್, ಚಕ್ಕರ್ ಕೈ ಸೇರಿತ್ತು....ನನ್ನ ಮುಂದಿದ್ದ ಒಂದಿಬ್ಬರು ಪ್ಯಾಸೆಂಜರ್ಸ್  ಟಿಕೆಟ್ಸ್ ತೋರಿಸಿ ಕೆಳಗೆ ಇಳಿದರು. ಮತ್ತು ಮೂರ್ನಾಲ್ಕು ಜನ ವಿದ್ಯಾರ್ಥಿಗಳು ತಮ್ಮ ಪಾಸ್ ತೋರಿಸಿ ಕೆಳಗಿಳಿಯ ತೊಡಗಿದ್ದರು.


ಕಂಡೆಕ್ಟರ್ ಗೂ ಆಗಲೇ ತಾನು ನನ್ನ ಟಿಕೆಟ್ಸ್ ತೆಗೆದಿಲ್ಲ ಅಂತ ನೆನಪಿಗೆ ಬಂತು. ಅವರು ಯಾವಾಗಲೂ ನಮ್ಮ ರೂಟ್ ಗೆ ಬರುವ ಪರಿಚಯದ ಕಂಡೆಕ್ಟರ್...ನನ್ನ ನೋಡಿ ಏನೋ ಸನ್ನೆ ಮಾಡಿದರು. ನಂಗೆ ಅವರು ಏನೂ ಹೇಳುತ್ತಿದ್ದಾರೆ ಅಂತ ಗೊತ್ತಾಗಿದ್ದರೂ ಹಾಗೆ ಮಾಡಲು ನನ್ನಿಂದ ಸಾಧ್ಯವೇ...?? ಅಥವಾ ಹಾಗೆ ಮಾಡುವಾಗ ನನ್ನ ಗ್ರಹಚಾರ ಕೆಟ್ಟು ಅಕಸ್ಮಾತ್ತಾಗಿ ಅವರು ನನ್ನ ಪಾಸ್ ತೆಗೆದುಕೊಂಡು ನೋಡಿದರೆ ಎನ್ ಮಾಡಲಿ ಅನ್ನುವ ಚಿಂತೆಯೂ ಅವರಿಸುತ್ತಿತ್ತು..


ಆದ್ರೂ ಬೇರೆ ಮಾರ್ಗ ಆ ಸಮಯದಲ್ಲಿ ನಾನು ಯೋಚಿಸದೇ ಕಂಡೆಕ್ಟರ್ ಸನ್ನೆ ಮಾಡಿದ ಹಾಗೆ ನನ್ನ ಕೈಯಲ್ಲೇ ಪಾಸ್ ಹಿಡಿದುಕೊಂಡು ನನ್ನ ಪಾಸ್ ಕೊನೆಗೊಳ್ಳುವ ಊರಿನ ಮೇಲೆ ಬೆರಳು ಇಟ್ಟುಕೊಂಡು ಅವರಿಗೆ ತೋರಿಸಿದೆ. ಅವರು ನನ್ನ ಪಾಸ್ ಕಡೆ ಕಣ್ಣೆತ್ತಿಯೂ ಕೂಡಾ ನೋಡದೆ ನನ್ನ ಹಿಂದೆ ಇರುವ ವ್ಯಕ್ತಿಯ ಟಿಕೆಟ್ಸ್ ಚಕ್ ಮಾಡುವದರಲ್ಲಿ ಬ್ಯುಸಿ ಆಗಿಬಿಟ್ಟ....


ನಾನು ಕೆಳಗಿಳಿಯುತ್ತಲೇ ಅಲ್ಲಿ ಒಂದು ಕ್ಷಣವೂ ಕೂಡಾ ನಿಲ್ಲದೆ ಮನೆಯ ಕಡೆಗೆ ಓಡಿದ್ದೆ....ಆ ಕ್ಷಣ ನನಗೆ ನನ್ನ ಮೇಲೆಯೇ ನನಗೆ ನಾಚಿಕೆಯಾಗಿತ್ತು...ಆಮೇಲೆ ಎಂದೂ ಹಾಗೆ ಆಗಲೂ ನಾನು ಅವಕಾಶ ಕೊಟ್ಟಿಲ್ಲವಾದರೂ ಆ ನೆನಪು ಮಾತ್ರ ಕಪ್ಪು ಚುಕ್ಕೆಯ ಹಾಗೆ ನನ್ನ ಜೊತೆಗೇ ಉಳಿದುಕೊಂಡು ಬಿಟ್ಟಿದೆ.


ಈಗಲೂ ಊರಿಗೆ ಹೋದಾಗ ಹಳ್ಳಿಯ ಆ ಬಸ್ ನೋಡಿದಾಗಲೊಮ್ಮೆ ಅಂದಿನ ಸನ್ನಿವೇಶ ನೆನಪಿಗೆ ಬಂದು ಅಪರಾಧಿ ಪ್ರಜ್ಞೆ ಜಾಗ್ರತೆಗೊಳಿಸುತ್ತದೆ.......


Rate this content
Log in

Similar kannada story from Abstract