ಶ್ರೀನಿವಾಸ ಸಂಡೂರು

Tragedy Inspirational Others

4.5  

ಶ್ರೀನಿವಾಸ ಸಂಡೂರು

Tragedy Inspirational Others

ಅರ್ಧ ಕಪ್ ಚಹಾ

ಅರ್ಧ ಕಪ್ ಚಹಾ

2 mins
234


ಅರ್ಧ ಕಪ್ ಚಹಾ ಅಥವಾ ಅರ್ಧ ಮುಚ್ಚಿದ ಬಾಗಿಲು ಎಂದಾಗ ಎಲ್ಲರು ಹೇಳುವುದು, ಆಶಾಭಾವನೆಯ ಮಾತುಗಳನ್ನು. ಅಂದರೆ ಉಳಿದ ಅರ್ಧದಲ್ಲಿ ಇರಬಹುದಾದ ಮತ್ತು ನಾವು ನೋಡಬಹುದಾದ ಅವಕಾಶಗಳನ್ನು. ಆದರೆ ಮೂವತ್ತು ವರ್ಷಗಳ ಹಿಂದೆ ನನ್ನ ಪರಿಸ್ಥಿತಿ ಬೇರೆಯದೇ ಆಗಿತ್ತು, ನಾನು ಯೋಚಿಸಿದ್ದ ರೀತಿಯೂ ಬೇರೆಯಾಗಿತ್ತು.


SSLC ಯಲ್ಲಿ ಒಳ್ಳೆಯ ಮಾಕ್ಸ್೯ ತೆಗೆದುಕೊಂಡ ನನಗೆ ಮೊದಲು PUC ಯಲ್ಲಿ science ವಿಷಯವನ್ನು ತೆಗೆದುಕೊಳ್ಳುವ ಇಷ್ಟ ಇತ್ತು. ಆದರೆ ಮನೆಯ ಬಡತನದ ಕಾರಣ ಅದು ಸಾಧ್ಯವಿಲ್ಲವೆಂದು ತಿಳಿದಿತ್ತು. ಅದಕ್ಕೆ ಇನ್ನೊಂದು ಕಾರಣವೆಂದರೆ ನನ್ನ ಅಣ್ಣ science ತೆಗೆದುಕೊಂಡು, ಸರಿಯಾದ ಪುಸ್ತಕಗಳನ್ನು ತೆಗೆದುಕೊಳ್ಳಲು ಆಗದೆ, tutionಗೂ ಸೇರಲಾಗದೆ ಕಷ್ಟ ಪಡುತ್ತಿದ್ದ ಮತ್ತು ಕಡಿಮೆ ಮಾಕ್ಸ್೯ಗಳನ್ನು ತೆಗೆದುಕೊಂಡಿದ್ದ.

ಇದನ್ನೆಲ್ಲಾ ನೋಡಿದ ನಾನು, science ಬದಲು, commerce ಆಯ್ಕೆ ಮಾಡಿ, ಕಾಲೇಜಿಗೆ ಅರ್ಜಿಯನ್ನು ಹಾಕಿದ್ದೆ. ಕಾಲೇಜಿನ interview ನಲ್ಲಿ ಅಲ್ಲಿ ಇದ್ದ principal ಅವರು, ನನ್ನ ಮಾಕ್ಸ್೯ ನೋಡಿ, ನನಗೆ science ತೆಗೆದುಕೊ ಎಂದರು. ನಾನು ಈಗಾಗಲೆ, commerceಗೆ ಅರ್ಜಿ ಹಾಕಿದ್ದೇನೆ ಎಂದೆ. ಅದಕ್ಕೆ ಅವರು ಅದನ್ನು ಈಗಲು ಬದಲಾಯಿಸಬಹುದು ನೀನು ಒಪ್ಪಿದರೆ ಎಂದರು.

ಗೊಂದಲದಲ್ಲಿದ್ದ ನಾನು ಯೋಚಿಸಲು ಸಮಯಪಡೆದೆ. ಆಗ ಕಾಲೇಜಿನ ಕ್ಯಾಂಟೀನ್ ನಲ್ಲಿ ಅರ್ಧ ಲೋಟ ಚಹಾ ಕುಡಿಯುತ್ತಾ ಯೋಚಿಸುತ್ತಿದ್ದೆ. ಏನೇನೋ ಯೋಚನೆ - ಯೋಜನೆಗಳು ನನ್ನ ತಲೆಯಲ್ಲಿ ಹಾದು ಹೋದವು. ನನ್ನ ಅರ್ಜಿಯನ್ನು scinceಗೆ ಬದಲಾಯಿಸಿದರೆ ಮೊದಲು ಎರಡು ಸಾವಿರ ರೂಪಾಯಿಗಳ ಫೀಸ್ ನ್ನು ವರ್ಷಕ್ಕೆ ಕಟ್ಟುವುದು ಹೇಗೆ? ನಮ್ಮ ತಂದೆಯವರಿಗೆ ಇದು ಸಾಧ್ಯವಿಲ್ಲ. ನನಗೆ ತಿಳಿದ ಹಾಗೆ ಈ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ scholarship ಕೊಡುತ್ತಾರೆ, ಆದರೆ scince ತೆಗೆದುಕೊಂಡು ಅದರಲ್ಲಿ ನನಗೆ ಕಡಿಮೆ ಮಾಕ್ಸ್೯ ತೆಗೆದುಕೊಂಡರೆ, scholarship ನನಗೆ ಸಿಗುವುದಿಲ್ಲ. ಆಗ ಫೀಸ್ ಕಟ್ಟಲು ತೊಂದರೆ ಆಗುತ್ತದೆ. ಅದು ಅಲ್ಲದೆ, ನ‌ನ್ನ ಅಣ್ಣ ಪಡುತ್ತಿದ್ದ ಕಷ್ಟ ನನ್ನ ಕಣ್ಣ ಮುಂದೆ ಬಂತು.

ಆದರೆ science ಬದಲು commerce ತೆಗೆದುಕೊಂಡರೆ ಕಟ್ಟುವ ಫೀಸ್ ಅರ್ಧಕ್ಕಿಂತ ಕಡಿಮೆಯಾಗುತ್ತದೆ. ಆಮೇಲೆ libraryಯಲ್ಲಿ ಸಿಗುವ ಪುಸ್ತಕಗಳು ಸಾಕು ಮತ್ತು‌ tution ಇಲ್ಲದೆಯು ಸ್ವಲ್ಪ ಕಷ್ಟಪಟ್ಟರೆ ಚೆನ್ನಾಗಿ ಮಾಕ್೯್ಸ ತೆಗೆದುಕೊಳ್ಳಬಹುದು. ಇದರಿಂದ scholarship ಸಿಗುತ್ತದೆ. ಮುಂದಿನ ಓದಿಗೆ ಅನುಕೂಲ - ಹೀಗೆ ಸಾಗಿತ್ತು ನನ್ನ ಯೋಚನೆ. ಕಡೆಗೆ commerce ಆಯ್ಕೆ ಮಾಡಿಕೊಂಡೆ. ಒಳ್ಳೆಯ ಮಾಕ್ಸ್೯ ತೆಗೆದೆ scholarship ಸಿಕ್ಕಿತು, ಡಿಗ್ರಿ ಮುಗಿಸಿದೆ. ಬ್ಯಾಂಕ್ ಸೇರಿದೆ. ಈಗ ಹೀಗೆ ಸಾಗಿದೆ ಜೀವನ.

ಅವತ್ತು ಕಾಲೇಜ್ ಕ್ಯಾಂಟಿನಲ್ಲಿ ಅರ್ಧ ಲೋಟ ಚಹ ನೋಡಿದಾಗ ನನಗನ್ನಿಸಿದ್ದು, ಜೀವನದಲ್ಲಿ ನನಗೆ ಇಷ್ಟಾದರೂ ಇದೆಯಲ್ಲ ಎಂದು. ಏಕೆಂದರೆ ಸಾಕಷ್ಟು ಜನರಿಗೆ ಈ ಅರ್ಧ ಲೋಟ ಚಹಾಕೂಡ ಸಿಗುವುದಿಲ್ಲ. ಅವರು ಅವಕಾಶದಿಂದ ಅರ್ಧ ಅಲ್ಲ ಪೂರ್ತಿಯಾಗಿ ವಂಚಿತರಾಗಿರುತ್ತಾರೆ. ಅವರಿಗೆ ಸಿಗುವುದು ಪೂರ್ತಿ ಖಾಲಿ ಲೋಟ ಅಂತವರು ಅವಕಾಶವನ್ನು ಸೃಷ್ಟಿಸಿಕೊಳ್ಳ ಬೇಕಾಗುತ್ತದೆ.

ಅರ್ಧ ಲೋಟ ಚಹಾ ನನಗೆ ಈ ಅರ್ಥವನ್ನು ಕೊಟ್ಟ ನನ್ನ ಸತ್ಯ ಕಥೆ.



Rate this content
Log in

Similar kannada story from Tragedy