ಅಜ್ಜನ ಹಳ್ಳಿ ಕಥೆ
ಅಜ್ಜನ ಹಳ್ಳಿ ಕಥೆ
ನೀವು ಓದುತ್ತಿರುವ ಈ ಕಥೆ ,
ನಾನು ಚಿಕ್ಕವನಿದ್ದೆ ,ಮೊದಲೆಲ್ಲ ಆ ಕಾಲದಲ್ಲಿ ಬೆಳಿಗ್ಗೆ ಕೋಳಿ ಕೂಗುವ ಮುನ್ನ ಎದ್ದು ಅಲ್ಲಲ್ಲಿ ಬಿದ್ದ ಒಣಗಿದ ರಾಶಿ ತರಗೆಲೆ ತಂದು ಒಂದು ಬೆಂಕಿ ಚಳಿ ಕಾಯಿಸುವ ಹೊತ್ತಿಗೆ ನನ್ನ ಅಜ್ಜ ಹೇಳ್ತಾ ಇದ್ರು ಕಲ್ಪನಿಕವೋ ಅಥವಾ ನೈಜ ಕಥೆಯೋ ಗೊತ್ತಿಲ್ಲ 😁 ಅಂತೂ ಕಥೆ ಹೇಳ್ತಾ ಇದ್ರು ಕೇಳ್ತಾ ಇದ್ದೆ...ಅದರಲ್ಲಿ ಒಂದು ಕಥೆ
ಮೊದಲೆಲ್ಲ ಬೀದಿ ದೀಪ ಇರ್ಲಿಲ್ಲ ಎಲ್ಲಿ ನೋಡಿದ್ರೂ ಕತ್ತಲ ವಾತಾವರಣ,ದೆವ್ವ ಪೀಡೆಗಳ ಉಪಟಳ ಜೋರಾಗಿ ಇತ್ತಂತೆ.
ನನ್ನ ಮನೆಯ ಹತ್ರ ಒಂದು ಕಲ್ಲಿನ ರಾಶಿ ಇತ್ತು ನಾನು ಅಲ್ಲೆಲ್ಲ ಮೊದಲು ಹೋಗ್ತಾ ಇದ್ದಾಗ ಬರುವ ಒಂದು ಪ್ರಶ್ನೆ , ಅರೆ ಇದ್ಯಾಕೆ ಇಷ್ಟೊಂದು ಕಲ್ಲುಗಳ ರಾಶಿ ?
ಅಂತ ನಂಗೆ ಆಗಾಗ ಪ್ರಶ್ನೆ ಬರ್ತಿತ್ತು...ಆದರೂ ಸುಮ್ಮನೆ ಯಾಕೆ ಇದೆಲ್ಲ ಯೋಚನೆ ಅಂತ ಬಿಟ್ಟು ಬಿಡ್ತಾ ಇದ್ದೆ...
ಒಂದಿನ ಹೀಗೆ ಬೆಳಗ್ಗೆ ಅಜ್ಜ ಚಳಿ ಕಾಯಿಸುವ ಹೊತ್ತಿಗೆ ಅಜ್ಜನ ಹತ್ರ ಕೂತ್ಕೊಂಡು
"ಅಜ್ಜ ಅದ್ಯಾಕೆ ಮನೆಯ ಆಚೆ ಕಲ್ಲುಗಳ ರಾಶಿ ಅಂತ ಕೇಳಿಯೇ ಬಿಟ್ಟೆ!
ಅದ್ಕೆ ಅವರು ಹೇಳಿದ್ದು ಇಷ್ಟೆ...
ಇದು ಈ ಊರು ದೊಡ್ಡ ಒಂದು ಹಳ್ಳಿ , ಎಲ್ಲಿ ನೋಡಿದ್ರೂ ಕಾಡುಗಳು, ರಾತ್ರಿ ಸಮಯ ಏನೋ ಕರ್ಕಶ ದ್ವನಿ ಕೇಳೋದು ಅಥವಾ ಏನಾದ್ರೂ ಅಡುಗೆಗೆ ಅಂತ ಮಾಂಸ ಪದಾರ್ಥಗಳನ್ನು ತೆಗೆದುಕೊಂಡು ಆ ದಾರಿಯಲ್ಲಿ ಹೋದ್ರೆ ಹಿಂದಿನಿಂದ ವಸ್ತುಗಳನ್ನು ಎಳೆಯೋದು ಅಥವಾ ಯಾರಾದ್ರೂ ಗದರಿಸೋ ಥರ ಹೀಗೆಲ್ಲ ಕೇಳ್ತಾ ಇತ್ತು,ತಿರುಗಿ ನೋಡಿದರೆ ಯಾರೂ ಇರ್ತಿರ್ಲಿಲ್ಲ ಅಂತ ಹೇಳುವಾಗಲೇ, ಮನಸಲ್ಲಿ ಎಲ್ಲೋ ಒಂದು ಕಡೆ ಭಯ ,ಆ ದಾರಿಯಲ್ಲಿ ಯೇಷ್ಟೋ ಸಲ ಸೈಕಲ್ ನಲ್ಲಿ ಹೋಗ್ತಿದ್ದೆ, ಆಟ ಅಡ್ತಿದ್ದೆ, ಅದೇ ಕಲ್ಲು ತೆಗೆದು ಬಿಸಾಡಿದ್ದು ಇದೆಲ್ಲಾ ನೆನಪಿಗೆ ಬಂದು ಒಂದು ಕ್ಷಣ ಮಾತು ಬರದೆ ಕುತಲ್ಲಿಗೆ ಕಲ್ಲಾದ ಅನುಭವ ಆಯ್ತು...ಮತ್ತೂ ನನ್ನ ಮನಸಲ್ಲಿ ಒಂದು ಪ್ರಶ್ನೆ ,
ಆದ್ರೆ ಈ ಕಲ್ಲು ಯಾಕೆ ಅಲ್ಲಿ ರಾಶಿ?
ಅದ್ಕೆ ಅವರು ಹೇಳ್ತಾರೆ, ಹೀಗೆಲ್ಲಾ ಚಿತ್ರ ವಿಚಿತ್ರ ಅನುಭವ ಅಗ್ತಿದ್ದ ಊರವರು ಭಯದಿಂದ ಆ ದಾರಿಯಲ್ಲಿ ಬರುವಾಗ ಒಂದೊಂದು ಕಲ್ಲು ತೆಗೆದುಕೊಂಡು ಬಿಸಾಡ್ತಿದ್ರು,ಕಲ್ಲು ಬಿಸಾಡಿದ್ರೆ ಭಯ ಹೋಗಿ ಮನಸ್ಸು ಪ್ರಶಾಂತ ಆಗ್ತಿತ್ತು ,ಅದ್ಕೆ ಅಲ್ಲಿಗೆ ಹೆಸ್ರು ಅಜ್ಜಿ ಕಲ್ಲು ಅಂತ ಆಯ್ತು ಅಂತೆ...😲
ಇನ್ನು ತುಂಬಾ ಇದೆ ಕಥೆಗಳ ಸಂಗ್ರಹ ಮುಂದೆ ಹೇಳ್ತೇನೆ ಆಯ್ತಾ.....🥲

